ಪಡುಮಾರ್ನಾಡು ಗ್ರಾಮದ ಗುಂಡುಕಲ್ಲಿನಲ್ಲಿ ಈದ್ ಮಿಲಾದ್ ರ‍್ಯಾಲಿ

KannadaprabhaNewsNetwork |  
Published : Aug 27, 2026, 03:15 AM IST
ಪಡುಮಾರ್ನಾಡು ಗ್ರಾಮದ ಗುಂಡುಕಲ್ಲಿನಲ್ಲಿ ಈದ್ ಮಿಲಾದ್  ರ‍್ಯಾಲಿ | Kannada Prabha

ಸಾರಾಂಶ

ಪಡುಮಾರ್ನಾಡು ಗ್ರಾಮ ವ್ಯಾಪ್ತಿಯ ಕಾಯರ್‌ಕಟ್ಟೆ ಗುಂಡುಕಲ್ಲಿನ ಮುಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ದಾರುಲ್ ಉಲೂಮ್ ಮದರಸ ವತಿಯಿಂದ ಈದ್ ಮೀಲಾದ್ ಅಂಗವಾಗಿ ‘ಹಾದಿ ಮದೀನಾ ಮಿಲಾದ್ ರ‍್ಯಾಲಿ’ ನಡೆಯಿತು.

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ವ್ಯಾಪ್ತಿಯ ಕಾಯರ್‌ಕಟ್ಟೆ ಗುಂಡುಕಲ್ಲಿನ ಮುಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ದಾರುಲ್ ಉಲೂಮ್ ಮದರಸ ವತಿಯಿಂದ ಈದ್ ಮೀಲಾದ್ ಅಂಗವಾಗಿ ‘ಹಾದಿ ಮದೀನಾ ಮಿಲಾದ್ ರ‍್ಯಾಲಿ’ ನಡೆಯಿತು.ಈದ್ ಮಿಲಾದುನ್ನಬಿ ಪ್ರಯುಕ್ತ ಆಯೋಜಿಸಲಾದ ರ‍್ಯಾಲಿಯಲ್ಲಿ ಮದರಸ ವಿದ್ಯಾರ್ಥಿಗಳು, ಮಸೀದಿ ಹಾಗೂ ಮದರಸ ಆಡಳಿತ ಮಂಡಳಿಯ ಪದಾಧಿಕಾರಿಗಳು, ಧರ್ಮಗುರುಗಳು, ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

-------------------------------------------------

ಬೊಳ್ಳಾವಿನಲ್ಲಿ ವಾಮಾಚಾರದ ಶಂಕೆ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಗ್ರಾಮದ ಬೊಳ್ಳಾವು ಎಂಬಲ್ಲಿರುವ ಮೂರು ಮಾರ್ಗ ಸೇರುವ ರಸ್ತೆಯಲ್ಲಿ ಪೂಜಾ ಸಾಹಿತ್ಯಗಳು ಕಂಡು ಬಂದಿದ್ದು ವಾಮಾಚಾರದ ಕೃತ್ಯವೆಂಬ ಶಂಕೆ ವ್ಯಕ್ತವಾಗಿದೆ. ಇದು ಸ್ಥಳೀಯರ ನಿದ್ದೆಗೆಡಿಸುತ್ತಿದೆ. ಪೆರಿಯಡ್ಕ- ಪಂಚೇರು - ಬೊಳ್ಳಾವು ಮೂರು ರಸ್ತೆ ಜತೆಗೂಡುವ ಬಳಿ ಇಂತಹ ಕೃತ್ಯಗಳು ಆಗಾಗ ನಡೆಯುತ್ತಿವೆ. ಕುಂಕುಮ ಬೆರೆತ ಲಿಂಬೆ ಹಣ್ಣು, ಒಡೆದ ಕುಂಬಳಕಾಯಿ, ಒಡೆದ ತೆಂಗಿನಕಾಯಿ ಕಂಡು ಬರುತ್ತಿದೆ. ಮಧ್ಯ ರಾತ್ರಿಯ ಸಮಯದಲ್ಲಿ ಯಾರೋ ಇದನ್ನು ತಂದು ಹಾಕುತ್ತಿದ್ದು ಇದನ್ನು ನೋಡಿದ ಸಾರ್ವಜನಿಕರು ಭೀತಿಗೊಳಗಾಗಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಾ ಬಸದಿಯಲ್ಲಿ ನೂತನ ಸಭಾಭವನಕ್ಕೆ ಭೂಮಿಪೂಜೆ
ಮಹಿಳೆಯರ ಶಕ್ತಿಗೆ ಸಾಕ್ಷಿಯಾದ ಅದ್ಧೂರಿ ರಥೋತ್ಸವ!