ಮಾದಾಪುರ ಬಸ್ ನಿಲ್ದಾಣದಲ್ಲಿ ಅದ್ದೂರಿ ಆಯುಧ ಪೂಜೆ

KannadaprabhaNewsNetwork |  
Published : Oct 25, 2026, 03:00 AM IST
ಚಿತ್ರ 1: ವಾಹನ ಚಾಲಕರ ಸಂಘದ 6ನೇ ವಾರ್ಷಿಕೋತ್ಸವದ ಸಾರ್ವಜನಿಕ ಆಯುಧಪೂಜಾ ಉದ್ಘಾಟಿಸಿ ಶಾಸಕ ಡಾ.ಮಂತರ್‌ಗೌಡ ಅವರು ಮಾತನಾಡುತ್ತಿರುವುದು.  2: ಸಾರ್ವಜನಿಕರಿಗೆ ನೃತ್ಯ ಮತ್ತು ಸಂಗೀತ ರಸಮಂಜರಿ.3: ಶಾಸಕ ಡಾ.ಮಂತರ್‌ಗೌಡ ಅವರು ಮಾತನಾಡುತ್ತಿರುವುದು  ಸಾರ್ವಜನಿಕ ಆಯುಧ ಪೂಜೆ ಆಚರಣ  ಸಮಿತಿ ಅಧ್ಯಕ್ಷ ಹಾಗೂ  ಪದಾಧಿಕಾರಿಗಳು ಶಾಲುಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಕೇವಲ ನವರಾತ್ರಿ ಸಂದರ್ಭದಲ್ಲಿ ಮಾತ್ರ ಒಳಿತಾಗಲಿ ಎಂದು ಬಯಸದೆ ಎಲ್ಲಾ ದಿನಗಳನ್ನು ಸರ್ವರಿಗೂ ಸಹಕಾರ ಒಳಿತನ್ನು ಮಾಡಿದರೆ ಪ್ರತಿಯೊಬ್ಬರು ಆನಂದ ಆರೋಗ್ಯ ಮತ್ತು ಶಾಂತಿ ಸಮಾಧಾನಗಳಿಂದ ಬದುಕನ್ನು ಸಾಗಿಸಬಹುದೇಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದರು.

ಸುಂಟಿಕೊಪ್ಪ: ಕೇವಲ ನವರಾತ್ರಿ ಸಂದರ್ಭದಲ್ಲಿ ಮಾತ್ರ ಒಳಿತಾಗಲಿ ಎಂದು ಬಯಸದೆ ಎಲ್ಲಾ ದಿನಗಳನ್ನು ಸರ್ವರಿಗೂ ಸಹಕಾರ ಒಳಿತನ್ನು ಮಾಡಿದರೆ ಪ್ರತಿಯೊಬ್ಬರು ಆನಂದ ಆರೋಗ್ಯ ಮತ್ತು ಶಾಂತಿ ಸಮಾಧಾನಗಳಿಂದ ಬದುಕನ್ನು ಸಾಗಿಸಬಹುದೇಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದರು.

ಅವರು ಮಾದಾಪುರ ಬಸ್ ನಿಲ್ಧಾಣದಲ್ಲಿ ಅಯೋಜಿತವಾಗಿದ್ದ ಸಾರ್ವಜನಿಕ ಆಯುಧ ಪೂಜೆ ಆಚರಣ ಸಮಿತಿ ವತಿಯಿಂದ 6ನೇ ವರ್ಷದ ಆಯುಧ ಪೂಜೆಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾದಾಪುರ ಸಾರ್ವಜನಿಕ ಮಾದಾಪುರ ಸಾರ್ವಜನಿಕ ಆಯುಧ ಪೂಜಾ ಸಮಿತಿಯವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿಕೊಂಡು ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ, ಸದಾ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಶಾಸಕ ಮಂತರ್ ಗೌಡ ತಿಳಿಸಿದರು. ಮತ್ತೋರ್ವ ಉದ್ಘಾಟಕ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ಕಳೆದ ಬಾರಿ ಇದೇ ಆಯುಧ ಪೂಜಾ ಸಮಿತಿ ವತಿಯಿಂದ ಮತ್ತು ದಾನಿಗಳ ಸಹಕಾರದಿಂದ ಮಾದಾಪುರಕ್ಕೆ ಉಚಿತ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಇದರಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುತ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಾರ್ವಜನಿಕ ಆಯುಧ ಪೂಜೆ ಆಚರಣ ಸಮಿತಿಯ ಅಧ್ಯಕ್ಷ ವಿ.ಕುಮಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಶಾಸಕ ಡಾ.ಮಂತರ್‌ಗೌಡ ಅವರನ್ನು ಸನ್ಮಾನಿಸಲಾಯಿತು. ರಾಜಮಟ್ಟದ ನಿತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಅಂತರಾಷ್ಟ್ರೀಯ ಮಟ್ಟದ ಮಂಗಳೂರಿನ ವಿಶ್ವಾಸ್ ಮ್ಯೂಸಿಕ್ ಗಾಯಕ ಗಾಯಕಿಯರಿಂದ ಸಂಗೀತ ರಸ ಸಂಜೆ ಮತ್ತು ಕಲಾತಂಡಗಳಿಂದ ನಡೆದ ನೃತ್ಯ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಹರಪಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ , ರಮೇಶ್ ಸುವರ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೊಪ್ಪ ತಂಡ ಗಣೇಶ್, ಮಕ್ಕಂದೂರು ಕೆ. ರವಿ ನಾಯರ್, ನಾಪಂಡ ಉಮೇಶ್ ಉತ್ತಪ್ಪ, ಮನು ಮೇದಪ್ಪ, ಜಾನ್ಸನ್ ಪಿಂಟೋ, ಸಂಜು ಪೊನ್ನಪ್ಪ, ಕೊಕ್ಕಲೆರ ಸುಜು ತಿಮ್ಮಯ್ಯ, ಮನು ಮುದ್ದಪ್ಪ, ವಿಶ್ವ ಕುಂಬೂರು, ನಾಗಂಡ ಭವೀನ್, ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ಶೀಲಾ ಶಶಿ, ಮನು ಬಿದ್ದಪ್ಪ, ಉಪಾಧ್ಯಕ್ಷರಾದ ಸುರೇಶ್ ವಿ ಆರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ನಾಗಂಡ ಭವೀನ್ ಕುಟ್ಟಂಡ ಕೆ ಕುಟ್ಟಪ್ಪ ತಿಲಕ್ ಕುಮಾರ್ ದೇಚಮ್ಮ ಎಂ ಕೆ, ಲತೀಫ್ ಕೆ.ಎ., ಅಯ್ಯಪ್ಪ ಸೇವಾ ಸಮಿತಿಯ ಕಾರ್ಯದರ್ಶಿ ಅಶೋಕ ಎಂ. ಬಿ., ವಿಜು ನಂಜಪ್ಪ ಮತ್ತು ಮಾದಾಪುರ ಸಾರ್ವಜನಿಕ ಆಯುಧ ಪೂಜಾ ಸಮಿತಿ ಸದಸ್ಯರು ಭಾಗಿಯಾಗಿದ್ದರು.

ಎಚ್.ಆರ್. ನಿಶಾಂತ್ ಪ್ರಾರ್ಥಿಸಿದರು. ಆಯುಧ ಪೂಜಾ ಆಚರಣೆಯ ಖಜಾಂಚಿ ಸತೀಶ್ ಕುಮಾರ್ ಸ್ವಾಗತಿಸಿ, ಜ್ಯೋತಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಸಿ ಕ್ರೀಡೆಗಳ ಉತ್ತೇಜಿಸುವ ಕೆಲಸವಾಗಲಿ
ನೃತ್ಯ ಕಲೆಗಳು ನಾಡಿನ ಸಾಂಸ್ಕೃತಿಕ ಆಸ್ತಿ