ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಬಾಂಜಾರು ಮಲೆ: ನೆರಿಯ ಗ್ರಾಮದ ಅತ್ಯಂತ ದುರ್ಗಮ ಪ್ರದೇಶವಾದ ಬಾಂಜಾರು ಮಲೆ ಮತಗಟ್ಟೆಗೆ ತಾಲೂಕು ಕೇಂದ್ರದಿಂದ 45 ಕಿಮೀ. ದೂರ. ಚಾರ್ಮಾಡಿ ಘಾಟಿ ಮೂಲಕ ಸಂಚರಿಸಿ 9ನೇ ತಿರುವಿನ ಸಮೀಪ ಬಲಕ್ಕೆ ತಿರುಗಿ ಅಲ್ಲಿಂದ 7 ಕಿ.ಮೀ. ಕ್ರಮಿಸಿ ಸಮುದಾಯ ಭವನದಲ್ಲಿನ ಮತಗಟ್ಟೆ ತಲುಪಬೇಕು. 2019ರ ಲೋಕಸಭೆ ಚುನಾವಣೆಯಲ್ಲಿ 106 ಮತದಾರರಿದ್ದು ಓರ್ವ ಮಾತ್ರ ಮತ ಚಲಾಯಿಸದ ಕಾರಣ 99.06 ಪ್ರಮಾಣದ ಮತದಾನ ದಾಖಲಾಗಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿತ್ತು. ಈ ಬಾರಿ ಇಲ್ಲಿ111 ಮತದಾರರಿದ್ದಾರೆ.
ಹಲವು ಸಮಸ್ಯೆ: ಈ ಎರಡು ಮತಗಟ್ಟೆಗಳ ಆಸು ಪಾಸು ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇದೆ.ಸುತ್ತಲ ಪ್ರದೇಶಗಳಲ್ಲಿ ಕಾಡಾನೆಗಳ ಕಾಟವು ಇದೆ.ಅಲ್ಲದೆ ಈ ಕಾರಣದಿಂದ ಇಲ್ಲಿ ಯಾವುದೇ ಸಮಸ್ಯೆ ಕಂಡು ಬಂದರು ಅದಕ್ಕೆ ತಕ್ಷಣ ಪರಿಹಾರ ಸಿಗುವುದು ಅಸಾಧ್ಯ. ಹಾಗೂ ಇಲ್ಲಿಗೆ ತಲುಪಬೇಕಾದರೆ ಹಲವು ತಾಸು ಪ್ರಯಾಣವನ್ನು ಮಾಡಬೇಕು.ಚಾರ್ಮಾಡಿ ಮತಗಟ್ಟೆಯಲ್ಲಿ ಗದ್ದಲ: ಕಳೆದ ವಿಧಾನಸಭಾ ಚುನಾವಣೆ ವೇಳೆ ಚಾರ್ಮಾಡಿ ಮತಗಟ್ಟೆಯಲ್ಲಿ ಭಾರಿ ಗದ್ದಲ ಕಂಡುಬಂದಿತ್ತು. ಮತದಾನ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿದೆ ಎಂದು ಆರಂಭದಿಂದಲೇ ಗೊಂದಲ ಏರ್ಪಟ್ಟು ತಡವಾಗಿ ಮತದಾನ ಮುಗಿದು, ಮತ ಪೆಟ್ಟಿಗೆ ಹೊತ್ತ ವಾಹನವನ್ನು ಸ್ಥಳೀಯ ಕೆಲವರು ತಡೆಗಟ್ಟಿದ ಘಟನೆಯೂ ನಡೆದಿತ್ತು. ಹಲವು ಅನಗತ್ಯ ಚಟುವಟಿಕೆಗಳು ನಡೆದು ಪೊಲೀಸರಿಂದ ಲಘು ಲಾಠಿ ಪ್ರಹಾರವು ನಡೆದಿತ್ತು. ಮಧ್ಯರಾತ್ರಿಯ ಬಳಿಕವಷ್ಟೇ ಪರಿಸ್ಥಿತಿ ಹತೋಟಿಗೆ ಬಂದಿತ್ತು.
ಎಳನೀರು ಮತಗಟ್ಟೆಯ ವ್ಯಾಪ್ತಿಯಲ್ಲಿ ತಾಪಂ ಇಒ ನೇತೃತ್ವದಲ್ಲಿ ಮಂಗಳವಾರ ಮತದಾನ ಜಾಗೃತಿ ಕಾರ್ಯಕ್ರಮ ನಡೆದಿದೆ.
ಬಾಂಜಾರು ಮಲೆಯ ಮತದಾರರೆಲ್ಲರೂ ಒಂದೇ ಕಡೆ ಸೇರಿಸಿ, ಅವರಿರುವ ಸ್ಥಳಕ್ಕೆ ಹೋಗಿ ಅವರನ್ನು ಭೇಟಿ ಮಾಡಿ ಈ ಬಾರಿ ಶೇ.100 ಮತದಾನ ಮಾಡಿ ದಾಖಲೆ ನಿರ್ಮಿಸಲು ಇಲ್ಲಿನ ಮತದಾರರು ಸಿದ್ಧರಾಗಬೇಕೆಂದು ಕರೆ ಕೊಟ್ಟಿದ್ದೇವೆ.ಅ ವರ ಸಮಸ್ಯೆಗಳನ್ನು ಆಲಿಸಿದ್ದೇವೆ. ಅವರೆಲ್ಲರೂ ಏ.26 ರ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರ ಮೂಲಕ ಎಲ್ಲರೂ ಮತದಾನ ಮಾಡುವ ಭರವಸೆ ನೀಡಿದ್ದಾರೆ- ಡಾ. ಆನಂದ್ ಕೆ., ಸಿಇಒ ಜಿಪಂ, ಹಾಗೂ ಅಧ್ಯಕ್ಷ, ಜಿಲ್ಲಾ ಸ್ವೀಪ್ ಸಮಿತಿ.ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಮ್ಮ ಆಹ್ವಾನವನ್ನು ಮನ್ನಿಸಿ ಬಾಂಜಾರು ಮಲೆ ಮತಗಟ್ಟೆಗೆ ಭೇಟಿ ಕೊಟ್ಟು ಮತದಾರರೊಂದಿಗೆ ಸಂವಾದ ನಡೆಸಿದರು. ಇದರಿಂದ ಈ ಬಾರಿ ಶೇ.100 ಮತದಾನ ಸಾಧಿಸುವ ಗುರಿ ತಲುಪಲು ಮತ್ತಷ್ಟು ಉತ್ಸಾಹ ತಂದಿದೆ
- ವೈಜಣ್ಣ, ತಾಪಂ ಇಒ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ