ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿಗೆ ಅಂಡಮಾನ್ ಮತ್ತು ನಿಕೋಬಾರ್ ರಾಜ್ಯದ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಅಧ್ಯಯನ ಪ್ರವಾಸ ತಂಡದ ಸದಸ್ಯರು ಭೇಟಿ ಮಾಡಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ವೀಕ್ಷಿಸಿದರು.ಗ್ರಾಪಂ ವ್ಯಾಪ್ತಿಯ ಅಂಗನವಾಡಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಭೇಟಿ ನಂತರ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಯೋಜನೆಯಗಳ ಸಂವಾದದಲ್ಲಿ ಪಾಲ್ಗೊಂಡರು.
ಇದಕ್ಕೂ ಮುನ್ನ ಒಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿಯ ಮೂಲ ಹೇಗೆ ಎಂಬುದನ್ನು ತಿಳಿದುಕೊಂಡರು. ನರೇಗಾ ಯೋಜನೆ ಮೂಲಕ ಗ್ರಾಮಗಳ ಅಭಿವೃದ್ಧಿ, 15 ಹಣಕಾಸು ಯೋಜನೆ , ಗ್ರಾಪಂ ವ್ಯಾಪ್ತಿ ಕುಟುಂಬ ಮತ್ತು ಜನಸಂಖ್ಯೆ ಮಾಹಿತಿ, ನೀರು ನೈರ್ಮಲ್ಯ, ರಸ್ತೆ ಹಾಗೂ ಚರಂಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ, ವಸತಿ ಯೋಜನೆ, ಡಿಜಿಟಲ್ ಗ್ರಂಥಾಲಯ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ತಿಳಿದರು.ಅಂಡಮಾನ್ ಮತ್ತು ನಿಕೋಬಾರ್ ರಾಜ್ಯದ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಸದಸ್ಯರು ನಮ್ಮಲ್ಲಿ ಅಭಿವೃದ್ಧಿಗೆ ಸರ್ಕಾರದ ಅನುದಾನವನ್ನೇ ಬಳಸಬೇಕು. ನಮ್ಮಲ್ಲೂ ಕೃಷಿ ಹೊಂಡವಿದೆ. ಆದರೆ, ವಿನ್ಯಾಸದಲ್ಲಿ ವ್ಯತ್ಯಾಸವಿದೆ. ಅಲ್ಲದೇ ಲೈಸನ್ಸ್ ಸಹ ನೀಡುವುದಿಲ್ಲ ಎಂದು ವಿವರಣೆ ನೀಡಿದರು.
ಇದೇ ವೇಳೆ ಪಂಚಾಯತ್ ರಾಜ್ ಸಹಾಯಕ ಸಹಾಯಕ ನಿರ್ದೇಶಕ ಪಾರ್ಥಸಾರಥಿ, ತಾಲೂಕು ಐಇಸಿ ಸಂಯೋಜಕ ಸುನಿಲ್ ಕುಮಾರ್, ಗ್ರಾಪಂ ಅಧ್ಯಕ್ಷ ಪ್ರಭು, ಉಪಾಧ್ಯಕ್ಷೆ ನಾಗಮ್ಮ, ಸದಸ್ಯರಾದ ರೂಪರಾಣಿ, ಮಹದೇವಮ್ಮ, ಮಂಗಳಮ್ಮ ಮತ್ತು ಚಿನ್ನಮ್ಮ, ಅಭಿವೃದ್ಧಿ ಅಧಿಕಾರಿ ಆರ್.ಎನ್.ಹಿರಣ್ಣಯ್ಯ, ಕಾರ್ಯದರ್ಶಿ ಚಲುವರಾಜು, ಮತ್ತು ಸಿಬ್ಬಂದಿ ವರ್ಗ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಂಥಾಲಯ ಮೇಲ್ವಿಚಾರಕರು ಇದ್ದರು.