ಮಹಾಲಿಂಗಪುರ ತಾಲೂಕು ಘೋಷಿಸದಿದ್ದರೆ ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ

KannadaprabhaNewsNetwork |  
Published : Apr 22, 2025, 01:47 AM IST
ಮಹಾಲಿಂಗಪುರ ತಾಲೂಕು ಘೋಷಣೆಗೆ ಆಗ್ರಹಿಸಿ ಪಟ್ಟಣ, ಸುತ್ತಲಿನ ಗ್ರಾಮಗಳ ಪ್ರಮುಖರ ಸಭೆ ನಡೆಸಿ ಚರ್ಚಿಸಿದರು. | Kannada Prabha

ಸಾರಾಂಶ

ಬಹುದಿನಗಳ ಬೇಡಿಕೆಯಾದ ಮಹಾಲಿಂಗಪುರ ನೂತನ ತಾಲೂಕು ಘೋಷಣೆಗೆ ಸರ್ಕಾರದ ವಿಳಂಬ ನೀತಿ ಖಂಡಿಸಿ, ಹೋರಾಟ ಸಮಿತಿ ಸ್ಥಳೀಯ ಬನಶಂಕರಿ ದೇವಸ್ಥಾನ ಸಭಾಭವನದಲ್ಲಿ ಶನಿವಾರ ಸಭೆ ಸೇರಿ ಮುಂಬರುವ ತಾಪಂ, ಜಿಪಂ ಚುನಾವಣೆ ಬಹಿಷ್ಕರಿಸುವ ಮತ್ತು ಇನ್ನಿತರ ವಿದ್ಯಮಾನಗಳ ಬಗ್ಗೆ ಪರಾಮರ್ಶೆ ನಡೆಸಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬಹುದಿನಗಳ ಬೇಡಿಕೆಯಾದ ಮಹಾಲಿಂಗಪುರ ನೂತನ ತಾಲೂಕು ಘೋಷಣೆಗೆ ಸರ್ಕಾರದ ವಿಳಂಬ ನೀತಿ ಖಂಡಿಸಿ, ಹೋರಾಟ ಸಮಿತಿ ಸ್ಥಳೀಯ ಬನಶಂಕರಿ ದೇವಸ್ಥಾನ ಸಭಾಭವನದಲ್ಲಿ ಶನಿವಾರ ಸಭೆ ಸೇರಿ ಮುಂಬರುವ ತಾಪಂ, ಜಿಪಂ ಚುನಾವಣೆ ಬಹಿಷ್ಕರಿಸುವ ಮತ್ತು ಇನ್ನಿತರ ವಿದ್ಯಮಾನಗಳ ಬಗ್ಗೆ ಪರಾಮರ್ಶೆ ನಡೆಸಿತು.

ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಪ್ರಮುಖರು ಚುನಾವಣೆ ಬಹಿಷ್ಕರಿಸುವ ನಿಟ್ಟಿನ ಸಾಧಕ ಬಾಧಕಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ ಮುಕ್ತವಾಗಿ ಚರ್ಚಿಸಿ ತಾಲೂಕು ಘೋಷಣೆ ಆಗ್ರಹಿಸಿ ನಡೆದಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಪಟ್ಟಣದ ಎಲ್ಲ ಪಕ್ಷಗಳು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಭೆ ಕರೆದು ಅಭಿಪ್ರಾಯ ಕ್ರೋಡೀಕರಿಸಿ, ಹೋರಾಟಕ್ಕೆ ಇನ್ನಷ್ಟು ಬಲ ನೀಡುವ ಕುರಿತು ಮನವಿ ಮಾಡಲು ನಿರ್ಣಯಿಸಲಾಯಿತು.

ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಧರೆಪ್ಪ ಸಾಂಗಲಿಕರ, ರಂಗನಗೌಡ ಪಾಟೀಲ, ಸುಭಾಶ ಶಿರಬೂರ, ಮಹಾಂತೇಶ ಹಿಟ್ಟಿನಮಠ, ಮಹಾದೇವ ಮಾರಾಪುರ, ಗಂಗಾಧರ ಮೇಟಿ, ಸುರೇಶ ಹಾದಿಮನಿ, ವೀರೇಶ ಆಸಂಗಿ, ಮಹಮ್ಮದ್ ಹೂಲಿಕಟ್ಟಿ ಮಾತನಾಡಿದರು.

ನಿಂಗಪ್ಪ ಬಾಳಿಕಾಯಿ, ಸಿದ್ದು ಶಿರೋಳ, ಮಹಾಲಿಂಗಪ್ಪ ಸನದಿ, ದುಂಡಪ್ಪ ಜಾಧವ, ಚನ್ನು ದೇಸಾಯಿ, ಭೀಮಶಿ ಸಸಾಲಟ್ಟಿ, ಮಡಿವಾಳಯ್ಯ ಕಂಬಿ, ಪರಪ್ಪ ಬ್ಯಾಕೋಡ, ಚನ್ನಪ್ಪ ಪಟ್ಟಣಶೆಟ್ಟಿ ಮತ್ತು ರಫೀಕ್ ಮಾಲದಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?