ಚಿತ್ರದುರ್ಗ ಸಿಟಿ ಇನ್ ಸ್ಟಿಟ್ಯೂಟ್ ಗೆ ಇಂದು ಚುನಾವಣೆ

KannadaprabhaNewsNetwork | Published : Nov 30, 2024 12:45 AM

ಸಾರಾಂಶ

ಚಿತ್ರದುರ್ಗದ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಸಟ್ ಗೆ ನವೆಂಬರ್ 30ರ ಶನಿವಾರ ಚುನಾವಣೆ ನಡೆಯಲಿದ್ದು, ಭಾರೀ ಪೈಪೋಟಿ ಏರ್ಪಟ್ಟಿದೆ. ಇನ್ ಸ್ಟಿಟ್ಯೂಟ್ ಇತಿಹಾಸದಲ್ಲಿ ಎಂದೂ ಈ ತರಹದ ವಾತಾವರಣ ಸೃಷ್ಟಿಯಾಗಿರಲಿಲ್ಲ. ಆಡಳಿತಾಧಿಕಾರಿಗಳ ನೇಮಕವಾಗಿ ಚುನಾವಣೆ ನಡೆಯುತ್ತಿರುವುದು ವಿಶೇಷವಾಗಿದೆ.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಸಟ್ ಗೆ ನವೆಂಬರ್ 30ರ ಶನಿವಾರ ಚುನಾವಣೆ ನಡೆಯಲಿದ್ದು, ಭಾರೀ ಪೈಪೋಟಿ ಏರ್ಪಟ್ಟಿದೆ. ಇನ್ ಸ್ಟಿಟ್ಯೂಟ್ ಇತಿಹಾಸದಲ್ಲಿ ಎಂದೂ ಈ ತರಹದ ವಾತಾವರಣ ಸೃಷ್ಟಿಯಾಗಿರಲಿಲ್ಲ. ಆಡಳಿತಾಧಿಕಾರಿಗಳ ನೇಮಕವಾಗಿ ಚುನಾವಣೆ ನಡೆಯುತ್ತಿರುವುದು ವಿಶೇಷವಾಗಿದೆ.

ಸಿಟಿ ಇನ್ ಸ್ಟಿಟ್ಯೂಟ್ ನ 130 ಮಂದಿ ಸದಸ್ಯರಿಗೆ ಹೈಕೋರ್ಟ್ ಮತದಾನದ ಹಕ್ಕು ನೀಡಿರುವುದು ಕುತೂಹಲ ಕೆರಳಿಸಿದೆ. ಹಿಂದಿನ ಬಾರಿ ಸ್ಫರ್ದಿಸಿದ್ದ ಬಿ. ಚಿತ್ರಲಿಂಗಪ್ಪ ಹಾಗೂ ವೆಂಕಟೇಶರೆಡ್ಡಿ ಅವರ ನಡುವೆ ಕಾರ್ಯದರ್ಶಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.ಚುನಾವಣೆಗೆ ಸಂಬಂದಿಸಿದಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ. ಚಿತ್ರಲಿಂಗಪ್ಲ, ತಮ್ಮ ಮೇಲೆ ಅನಗತ್ಯವಾದ ಆರೋಪಗಳ ಹೊರಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಇದಲ್ಲದೇ 200 ಕ್ಕೂ ಹೆಚ್ಚು ಸದಸ್ಯರಿಗೆ ಮತದಾನದ ಹಕ್ಕು ಲಭ್ಯವಾಗದಂತೆ ನೋಡಿಕೊಳ್ಳಲಾಗಿತ್ತು. ಅವರಲ್ಲಿ 130 ಜನರಿಗೆ ಹೈಕೋರ್ಟ್ ಮತದಾನ ಮಾಡುವ ಅವಕಾಶ ಕಲ್ಪಿಸಿದೆ ಎಂದರು.ನಮ್ಮ ಅಧಿಕಾರಾವಧಿಯಲ್ಲಿ ಎಲ್ಲವನ್ನು ಪಾರದರ್ಶಕವಾಗಿಯೇ ನಿರ್ವಹಿಸಲಾಗಿತ್ತು. ಆದರೂ ಕೆಲವರು ಕುತಂತ್ರ ಮಾಡಿ ಆರೋಪಿಸಿದ್ದರು. ಘನ ನ್ಯಾಯಾಲಯ ವಾಸ್ತವಾಂಶಗಳ ಅವಲೋಕಿಸಿ ಮತದಾನದ ಹಕ್ಕು ನೀಡಿದೆ. ಸಿಂಧುತ್ವ ನೀಡಿ ಆದೇಶಿಸಿದೆ. ನ್ಯಾಯಾಲಯದ ಮೇಲೆ ವಿಶ್ವಾಸವಿದ್ದ ಕಾರಣ ನಮಗೆ ನ್ಯಾಯ ದೊರೆತಿದೆ ಎಂದು ತಿಳಿಸಿದರು.

ಮಾಜಿ ಖಜಾಂಚಿ ಅಜಿತ್ ಪ್ರಸಾದ್ ಜೈನ್ ಮಾತನಾಡಿ, ಈ ಹಿಂದೆ ಕ್ಲಬ್ ಇತಿಹಾಸದಲ್ಲಿ ಎಂದಿಗೂ ಒಂದ ಪೈಸೆ ಠೇವಣಿ ಇಡಲಾಗಿದ್ದಿಲ್ಲ. ನೌಕರರಿಗೆ ಸಂಬಳ ಕೊಡಲು ಕಷ್ಟದಲ್ಲಿ ಇತ್ತು. ನಮ್ಮ ಆಡಳಿತದ ಅವಧಿಯಲ್ಲಿ ಎರಡುವರೆ ಕೋಟಿ ರು. ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. ಉಳಿತಾಯ ರೂಪದ ಹಣದಲ್ಲಿ ಅಮೆರಿಕಾದ ಬ್ರಾಂಡೆಡ್ ಕಂಪನಿಯ ಸೂಟ್‌ಕೇಸ್‌ಗಳನ್ನು ಸದಸ್ಯರಿಗೆ ನೀಡಿದ್ದೇವೆ ಎಂದರು.

ಸದಸ್ಯ ಎಚ್.ಜೆ. ರವೀಂದ್ರ, ಎಚ್.ಸಿ. ನಿರಂಜನಮೂರ್ತಿ, ಲೋಕೇಶ್, ಚಂದ್ರಶೇಖರ್, ವಿಜಯಕುಮಾರ್, ಕುಮಾರಸ್ವಾಮಿ ಇದ್ದರು.

Share this article