ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿ ಕೇಂದ್ರದ ಹಿರಿಸಾವೆ ರಸ್ತೆಯ ಎನ್. ಆರ್. ನಟರಾಜ್ ಅವರ ನಿವಾಸದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ರೈತರ ಸಭೆಯಲ್ಲಿ ಮಾತನಾಡಿದರು. ಈ ಬಾರಿ ಹೇಮಾವತಿ ಸಕ್ಕರೆ ಕಾರ್ಖಾನೆ ಸಹಕಾರಿ ಸಂಘದ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಅತ್ಯಧಿಕ ಮತಗಳಿಂದ ಎಲ್ಲಾ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಖಾನೆ ಅಭಿವೃದ್ಧಿಗೆ ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರೇವಣ್ಣ ಸೇರಿ ಹಲವರ ಪರಿಶ್ರಮದಿಂದ ಕಾರ್ಖಾನೆ ಲಾಭದಲ್ಲಿದೆ. ಕಾರ್ಖಾನೆ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಎಚ್ ಡಿ ಸಿ ಸಿ ಬ್ಯಾಂಕಿನ ಖಾತೆಯಲ್ಲಿ ₹24 ಕೋಟಿ ಹಣವಿದೆ ಎಂದು ತಿಳಿಸಿದರು.ಮುಂದಿನ ಏಪ್ರಿಲ್ ನಲ್ಲಿ ನಡೆಯಲಿರುವ 5 ವರ್ಷದ ಆಡಳಿತ ಮಂಡಳಿ ಚುನಾವಣೆಗೆ ತಾಲೂಕಿನ 5 ಕ್ಷೇತ್ರಗಳಿಗೆ ಕಾರ್ಯಕರ್ತರ ಸಭೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇತರೆ ತಾಲೂಕುಗಳಲ್ಲಿ ಸ್ಪರ್ಧಿಸುತ್ತಿರುವ ಜೆಡಿಎಸ್ ಅಭ್ಯರ್ಥಿಗಳಿಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಜೈ ಲಿಂಗೇಗೌಡ ಕಲ್ಕೆರೆ, ಚೌಡೇನಹಳ್ಳಿ ವಾಸು, ಬಸವನಪುರ ಪ್ರಕಾಶ್, ಗಣೇಶ್, ಶಿವಣ್ಣ, ಹಾಗೂ ಎಚ್. ಬಿ. ರಂಗಸ್ವಾಮಿ, ಆಕಾಂಕ್ಷಿಗಳಾಗಿದ್ದರೂ ಶಾಸಕರು ಪ್ರತ್ಯೇಕವಾಗಿ ನಡೆಸಿದ ಚರ್ಚೆ ಬಳಿಕ ಎಲ್ಲರ ಅಭಿಪ್ರಾಯದಂತೆ ಹೊನ್ನಮಾರನಹಳ್ಳಿ ಎಚ್. ಬಿ. ರಂಗಸ್ವಾಮಿ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಯಿತು.
ಸಭೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್ಎಂ. ನಟರಾಜ್, ಜಯಲಿಂಗೇಗೌಡ, ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಟೇಲ್ ಕುಮಾರ್, ಓಬಳಾಪುರ ಬಸವರಾಜ್, ಬೆಳಗಳ್ಳಿ ಪುಟ್ಟಸ್ವಾಮಿ, ಸಂಪತ್ ಕುಮಾರ್, ಎನ್. ಡಿ. ಶಂಕರ್, ಎನ್. ಡಿ. ಶಿವಪ್ಪ, ಎನ್. ಆರ್. ನಟರಾಜ್, ಜಾವೇದ್, ಧರ್ಮರಾಜ್, ಎನ್. ಆರ್. ಮುರಳಿ, ತಾವರೆಕೆರೆ ಮಧು, ಚೌಡೇನಹಳ್ಳಿ ರಮೇಶ್, ಬೆಟ್ಟಯ್ಯ, ಶಿವ ಸ್ವಾಮಿ, ಚಂದ್ರು, ಹತ್ತಿಹಳ್ಳಿ ಹಿರಿಯಣ್ಣ ಗೌಡ, ಎಲ್ಐಸಿ ಕುಮಾರ್, ಅಕ್ಕನಹಳ್ಳಿ ಎಚ್. ದಯಾನಂದ್, ಇತರರು ಹಾಜರಿದ್ದರು.