ಚುನಾವಣೆಯೇ ಬೇರೆ, ಸಂಬಂಧದಲ್ಲಿ ವಿಶ್ವಾಸವೇ ಬೇರೆ: ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ

KannadaprabhaNewsNetwork |  
Published : Mar 23, 2024, 01:03 AM IST
ಪ್ರಭಾ  | Kannada Prabha

ಸಾರಾಂಶ

ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ಗೌರವ ನೀಡುವುದು, ಸಂಬಂಧಗಳ ನಡುವೆ ವಿಶ್ವಾಸ ಹೊಂದಿರುವುದು ಇದೆ. ನಾವು ನಮ್ಮ ಪಕ್ಷದ ಪ್ರಣಾಳಿಕೆ, ಅಭಿವೃದ್ಧಿ ವಿಚಾರಗಳ ಮೇಲೆ ಜನರ ಬಳಿ ಹೋಗಿ, ಮತ ಕೇಳುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ಗೌರವ ನೀಡುವುದು, ಸಂಬಂಧಗಳ ನಡುವೆ ವಿಶ್ವಾಸ ಹೊಂದಿರುವುದು ಇದೆ. ನಾವು ನಮ್ಮ ಪಕ್ಷದ ಪ್ರಣಾಳಿಕೆ, ಅಭಿವೃದ್ಧಿ ವಿಚಾರಗಳ ಮೇಲೆ ಜನರ ಬಳಿ ಹೋಗಿ, ಮತ ಕೇಳುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂಸ್ಕೃತಿಯಲ್ಲಿ ಹಿರಿಯರಿಗೆ ಗೌರವಿಸುವುದು, ಸಂಬಂಧಗಳ ಮಧ್ಯೆ ವಿಶ್ವಾಸ ಹೊಂದುವುದು ಇದೆ. ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆ, ಅಭಿವೃದ್ಧಿ ವಿಚಾರಗಳ ಆಧಾರದಲ್ಲಿ ಮತ ಕೇಳುತ್ತೇವೆಂದು ಎದುರಾಳಿ ಅಭ್ಯರ್ಥಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ದಾವಣಗೆರೆ ಕ್ಷೇತ್ರದ ಪ್ರಜ್ಞಾವಂತ ಮತದಾರರು ಅಭಿವೃದ್ಧಿಯ ಅಲೆ ನೋಡಿಯೇ ತಮ್ಮನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ವಿಶ್ವಾಸವಿದೆ. ಹತ್ತು ವರ್ಷಗಳಿಂದ ನರೇಂದ್ರ ಮೋದಿ ಅಲೆಯನ್ನು ಜನ ನೋಡುತ್ತಿದ್ದಾರೆ. ಈ ಸಲ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು, ಅತ್ಯಧಿಕ ಮತಗಳನ್ನು ನೀಡಿ, ತಮ್ಮನ್ನು ಗೆಲ್ಲಿಸುವಂತೆ ಜನತೆಗೆ ಮನವಿ ಮಾಡಿದರು.

ಎಸ್‌.ಎಸ್‌. ಕೇರ್ ಟ್ರಸ್ಟ್‌ನಿಂದ ಕೈಗೊಂಡ ‍ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವ ಮೂಲಕ ಜನರಿಗೆ ತಲುಪುವ ಕೆಲಸ ಮಾಡಲಾಗುವುದು. ದಾವಣಗೆರೆ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ, ನೀರಿನ ಸಮಸ್ಯೆ ನಿವಾರಿಸುವ, ಭದ್ರಾ ನಾಲೆಯ ನೀರು ಕೊನೆಯ ಭಾಗಕ್ಕೆ ತಲುಪಿಸುವ, ಅನುದಾನಕ್ಕೆ ಅನುಗುಣವಾಗಿ ಯೋಜನಾಬದ್ಧವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದೂ ಒಳಗೊಂಡಂತೆ ಕ್ಷೇತ್ರದ ಬಗ್ಗೆ ಅನೇಕ ಕನಸು, ಚಿಂತನೆ, ಆಲೋಚನೆ ಹೊಂದಿದ್ದೇನೆ ಎಂದು ತಿಳಿಸಿದರು.

- - - ಬಾಕ್ಸ್

ಭಿನ್ನಮತವಿದ್ರೆ ಎಸ್‌ಎಸ್‌, ಎಸ್‌ಎಸ್‌ಎಂ ಕರೆಸಿ ಮಾತಾಡ್ತಾರೆ: ಡಾ.ಪ್ರಭಾ ಹೇಳಿಕೆ ದಾವಣಗೆರೆ: ದಾವಣಗೆರೆ ಕ್ಷೇತ್ರದ ಕಾಂಗ್ರೆಸ್‌ನ ಎಲ್ಲ ಶಾಸಕರು ತಮಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿದ್ದು, ಯಾವುದೇ ಭಿನ್ನಮತವಿದ್ದರೆ ಅಂತಹವರನ್ನು ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರು ಕರೆಸಿ, ಮಾತನಾಡುತ್ತಾರೆ. ಎಲ್ಲವನ್ನೂ ಬಗೆಹರಿಸುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

1998ರ ಲೋಕಸಭೆ ಉಪ ಚುನಾವಣೆಯಿಂದಲೂ ಮಾವ ಶಾಮನೂರು ಪರ ಪ್ರಚಾರ ಮಾತ್ತಿದ್ದೇನೆ. ಮಲ್ಲಿಕಾರ್ಜುನ್‌ ಅವರ ಪರವಾಗಿಯೂ ಪ್ರಚಾರ ಮಾಡಿದ್ದೇನೆ. ಇಬ್ಬರಿಗೂ ತಾವು ಮಾಡಿದ್ದ ಅಭಿವೃದ್ಧಿ ಕಾರ್ಯ ಸಾಧನೆ ಬೆನ್ನಿಗೆ ಇತ್ತು. ಈ ಇಬ್ಬರ ಪರ ಮತ ಕೇಳುವುದು ಸುಲಭವಾಗಿತ್ತು. ಈಗ ನಾನು ನನ್ನ ಪರವಾಗಿಯೇ ಮತ ಕೇಳಬೇಕಿದೆ. 40 ದಿನಗಳಲ್ಲೇ 1200 ಹಳ್ಳಿ ತಲುಪುವುದು ಕಷ್ಟವಾದರೂ, ತಾಲೂಕು, ಬ್ಲಾಕ್ ಮುಖಂಡರ ಮೂಲಕ ಎಲ್ಲರ ಸಹಕಾರದಿಂದ ಪ್ರಚಾರ ಮಾಡುವೆ. ಕಾಂಗ್ರೆಸ್ಸಿನ ಎಲ್ಲ ಶಾಸಕರೂ ಬೇಷರತ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ನಾನು ಗೆಲ್ಲದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಮೋದಿ ಅಲೆಗಿಂತಲೂ ಗ್ರೌಂಡ್ ರಿಯಾಲಿಟಿ ಆಧಾರದಲ್ಲಿ ಜನತೆ ಮತ ಚಲಾಯಿಸುವರು ಎಂದು ಅಭಿಪ್ರಾಯಿಸಿದರು.

- - - ಕೋಟ್‌ ಬಿಜೆಪಿ ಭಿನ್ನಮತ ಒಳಗೊಂಡತೆ ಎದುರಾಳಿ ಪಕ್ಷದ ಯಾವುದೇ ವಿಚಾರಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜನರಿಗೆ ಕೆಲಸ ತಲುಪಿಸುವ, ಮೂಲಭೂತ ಸೌಕರ್ಯ ಒದಗಿಸುವ ಸಿಂಗಲ್ ಪಾಯಿಂಟ್‌ನೊಂದಿಗೆ ಮತ ಕೇಳುತ್ತೇವೆ. ಕೆಲಸ, ಸೇವೆ ಮಾಡುವವರಿಗೆ ಜನರು ಮತ ನೀಡುವರು ಎಂಬ ವಿಶ್ವಾಸವಿದೆ

- ಡಾ.ಪ್ರಭಾ ಮಲ್ಲಿಕಾರ್ಜುನ, ಕಾಂಗ್ರೆಸ್ ಅಭ್ಯರ್ಥಿ, ದಾವಣಗೆರೆ ಕ್ಷೇತ್ರ

- - - -(ಫೋಟೋ ಇದೆ):

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!