ಕಮಲಾಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಮಲಾಪುರ ಸಂಚಾಲಕರಾಗಿ ವಿಜಯಕುಮಾರ ಟೈಗರ್ ಹಾಗೂ ತಾಲೂಕು ಅಧ್ಯಕ್ಷರಾಗಿ ಹರೀಶ ಪಟ್ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಸುರೇಶ ಹಾದಿಮನಿ ತಿಳಿಸಿದರು. ಪಟ್ಟಣದ ಪ್ರವಾಸ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ದಲಿತ ಮುಖಂಡ ನಿಂಗಪ್ಪ ಪ್ರಭುದ್ದಕರ್ ಮಾತನಾಡಿ, ಸಂಘಟನಾ ಸಂಚಾಲಕರಾಗಿ ರಮೇಶ್ ಕಾಂಬಳೆ, ಖಜಾಂಚಿಯಾಗಿ ಶ್ರೀಪತಿ ಸಕ್ಪಾಲ್, ಪದಾಧಿಕಾರಿಗಳಾಗಿ ಕಮಲಾಕರ ನೂಲ್ಕರ್, ಸುನಿಲ್ ಮಾಳಗೆ, ಮಹೇಶ್ ಹೋಗಿ, ರಾಜು ಹಾಲು, ಉಮೇಶ್ ಪಂಗರಗಿ, ಕಾಶಿನಾಥ ವಾಲಿಕಾರ್, ಆಯ್ಕೆ ಮಾಡಲಾಗಿದ್ದು, ಬುದ್ಧ ಬಸವ ಅಂಬೇಡ್ಕರ್ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಶೋಷಿತ ವರ್ಗದ ಧ್ವನಿಯಾಗಿ ಸಂಘಟನೆ ಸೋಶಿತರ ಪರವಾಗಿ ಕೆಲಸ ಮಾಡುವುದಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದರು. ಮುಖಂಡರಾದ ಅಮೃತ ಗೌರೆ, ಜೈಭೀಮ್ ಕೊರೋಳಿ, ಶುಭಾಷ ದಾಂಗೆ, ಬಾಬುರಾವ ವಾಲಿ,ರತ್ನಾಕರ್ ಪಂಡಿತ ಸಿಂಗ್ ಇತರರು ಇದ್ದರು.