ಸೊರಟೂರು ಕೃಷಿ ಪತ್ತಿನ ಸಂಘಕ್ಕೆ ನೂತನ ನಿರ್ದೇಶಕರ ಆಯ್ಕೆ

KannadaprabhaNewsNetwork |  
Published : Oct 13, 2026, 01:30 AM IST
12ಎಚ್ಎಲ್.ಐ1 ತಾಲೂಕಿನ ಸೊರಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರುಗಳು, ಹಾಗೂಚುನಾವಣಾಧಿಕಾರಿ ರಾಘವೇಂದ್ರ   ಇದ್ದಾರೆ. | Kannada Prabha

ಸಾರಾಂಶ

ಹೊನ್ನಾಳಿ ತಾಲೂಕಿನ ಸೊರಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 5 ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗಾಗಿ ಅ.11ರಂದು ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಸೊರಟೂರು ಗ್ರಾಮ ಪಂಚಾಯಿತಿ ಪಿಡಿಒ ರಾಘವೇಂದ್ರ ಕರ್ತವ್ಯ ನಿರ್ವಹಿಸಿದರು.

- 5 ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಸೊರಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 5 ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗಾಗಿ ಅ.11ರಂದು ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಸೊರಟೂರು ಗ್ರಾಮ ಪಂಚಾಯಿತಿ ಪಿಡಿಒ ರಾಘವೇಂದ್ರ ಕರ್ತವ್ಯ ನಿರ್ವಹಿಸಿದರು.

ಅ.11ರಂದು ಭಾನುವಾರ ಚುನಾವಣೆ ನಡೆದಿದ್ದು, ಮತ ಎಣಿಕೆ ಅಂದೇ ರಾತ್ರಿಯವರೆಗೆ ನಡೆದು ಅಂತಿಮ ಫಲಿತಾಂಶವನ್ನು ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲಗಾರರ ಕ್ಷೇತ್ರಕ್ಕೆ 11 ಹಾಗೂ ಸಾಲಗಾರರಲ್ಲದ ಕ್ಷೇತ್ರಕ್ಕೆ 1 ಸ್ಥಾನಗಳಿದ್ದು, ಸಾಲಗಾರರ ಕ್ಷೇತ್ರಕ್ಕ ಓಟ್ಟು 729 ಮತದಾರರಿದ್ದು, ಈ ಪೈಕಿ 624 ಜನ ಮತ ಚಲಾಯಿಸಿದರು. ಸಾಲಗಾರರಲ್ಲದ ಕ್ಷೇತ್ರಕ್ಕೆ ಒಟ್ಟು 73 ಮತದಾರರ ಈ ಪೈಕಿ 67 ಮತದಾರರು ಮತದಾನ ಮಾಡಿದ್ದಾರೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.

14 ಸಿಬ್ಬಂದಿ 4 ಬೂತ್‌ಗಳಲ್ಲಿ ಚುನಾವಣೆ ಕೆಲಸ ಮಾಡಿದ್ದು, ಸಾಲಗಾರರ ಕ್ಷೇತ್ರದ 11 ಸ್ಥಾನಗಳಲ್ಲಿ ಎರಡು ಜನ ಅವಿರೋಧ ಅಯ್ಕೆಯಾದರು. ಇನ್ನುಳಿದ 9 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಟಿ.ನರಸಪ್ಪ (ಎಸ್.ಟಿ.) ಹಾಗೂ ಕೆ.ಎಚ್. ಹನುಮಂತಪ್ಪ (ಹಿಂದುಳಿದ ಅ ವರ್ಗ) ಅವಿರೋಧ ಆಯ್ಕೆಯಾಗಿದ್ದಾರೆ.

ಚುನಾವಣೆ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು:

ಸಾಮಾನ್ಯ ಮೀಸಲಾತಿಯಡಿ ಸಿ.ಸಂತೋಷ್, ಕೆ.ಎಸ್. ಚಂದ್ರಪ್ಪ, ಜಿ. ರಾಮನಗೌಡ, ಬಿ.ಗುರುಮೂರ್ತಿ ಆಚಾರಿ, ಎಂ.ಎನ್. ಕುಮಾರ ರಾವ್, ಟಿ. ರೇಖಾ, (ಮಹಿಳಾ ಮೀಸಲು) ಒ.ಕಾವೇರಿ, (ಮ.ಮೀಸಲು). ಕೆ.ರೇಣುಕಾ (ಪ.ಜಾತಿ) ಜಿ. ಶಂಕ್ರಪ್ಪ (ಹಿಂದುಳಿದ ಬ ವರ್ಗ). ಸಾಲಗಾರರಲ್ಲದ ಕ್ಷೇತ್ರದಿಂದ (ಸಾಮಾನ್ಯ) ಹನುಮಂತಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಸಂಘದ ಒಟ್ಟು 12 ನಿರ್ದೇಶಕರ ಸಂಖ್ಯೆಯಲ್ಲಿ 2 ಅವಿರೋಧ, ಸಾಮಾನ್ಯ 5, ಮಹಿಳಾ ಮೀಸಲಾತಿ 2 , ಎಸ್ಸಿ ಮಹಿಳೆ 1, ಹಿಂದುಳಿದ ವರ್ಗದಿಂದ 1 ಒಟ್ಟು, ಸಾಲಗಾರರ ಕ್ಷೇತ್ರದಿಂದ ಒಟ್ಟು 09, ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ 01, ಎಲ್ಲಾ ಸೇರಿ 10 ಸ್ಥಾನಗಳು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.

- - -

-12ಎಚ್ಎಲ್.ಐ1:

ಹೊನ್ನಾಳಿ ತಾಲೂಕಿನ ಸೊರಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರ ಆಯ್ಕೆ ನಡೆದಿದ್ದು, ಆಭಿನಂದಿಸಲಾಯಿತು. ಚುನಾವಣಾಧಿಕಾರಿ ರಾಘವೇಂದ್ರ ಮತ್ತಿತರರು ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸಚಿವ ವಿ.ಸೋಮಣ್ಣ ಕಾರಿಗೆ ಮುತ್ತಿಗೆ ಯತ್ನ
ಬಿಎಸ್‌ಸಿ ಕುಟುಂಬದ ಶ್ರಮ ನಿಜಕ್ಕೂ ಶ್ಲಾಘನೀಯ: ಬಿ.ಎಸ್. ಯಡಿಯೂರಪ್ಪ