ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

KannadaprabhaNewsNetwork |  
Published : Jan 21, 2025, 12:31 AM IST
ಕೆ ಕೆ ಪಿ ಸುದ್ದಿ 02:ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಟಿ. ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರನ್ನು ಪಕ್ಷದ ಮುಖಂಡರು ಹಾಗೂ ಸಂಘದ ಸದಸ್ಯರು ಅಭಿನಂದಿಸಿದರು.  | Kannada Prabha

ಸಾರಾಂಶ

ಕನಕಪುರ ತಾಲೂಕಿನ ರೈತರಿಗೆ ಅನುಕೂಲ ಮಾಡಲು ಏಷ್ಯಾದಲ್ಲೇ ಅತಿ ದೊಡ್ಡ ಹಾಲಿನ ಘಟಕವನ್ನು, ತಾಲೂಕಿನ ಶಿವನಹಳ್ಳಿ ಬಳಿ ನಿರ್ಮಿಸಲಾಗಿದೆ. ನಮ್ಮ ತಾಲೂಕು ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯಲ್ಲಿ ದೇಶಕ್ಕೆ ಮಾದರಿಯಾಗಬೇಕು ಎಂಬುದು ನಮ್ಮ ನಾಯಕರಾದ ಡಿಕೆ ಸಹೋದರರ ಕನಸಾಗಿದೆ.

ಕನಕಪುರ: ಟಿ. ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಮಹದೇವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕಿನ ಕೋಡಿಹಳ್ಳಿ ಹೋಬಳಿಯ ಟಿ. ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು12 ನಿರ್ದೇಶಕರ ಬಲ ಹೊಂದಿರುವ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಹದೇವಯ್ಯ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿ ಮಂಜುನಾಥ್ ಘೋಷಣೆ ಮಾಡಿದರು.

ತಾಪಂ ಮಾಜಿ ಉಪಾಧ್ಯಕ್ಷ ಅಂಬರೀಶ್ ಮಾತನಾಡಿ, ಹಿಂದಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಆಶೀರ್ವಾದವೇ ಕಾರಣವಾಗಿದ್ದು ಮುಂದಿನ ದಿನಗಳಲ್ಲಿ ಸದಸ್ಯರು ಸಂಘದ ಚಟುವಟಿಕೆಯನ್ನು ಹೆಚ್ಚು ಮಾಡಿ, ಈ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಸಾತನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು ಮಾತನಾಡಿ, ಕನಕಪುರ ತಾಲೂಕಿನ ರೈತರಿಗೆ ಅನುಕೂಲ ಮಾಡಲು ಏಷ್ಯಾದಲ್ಲೇ ಅತಿ ದೊಡ್ಡ ಹಾಲಿನ ಘಟಕವನ್ನು, ತಾಲೂಕಿನ ಶಿವನಹಳ್ಳಿ ಬಳಿ ನಿರ್ಮಿಸಲಾಗಿದೆ. ನಮ್ಮ ತಾಲೂಕು ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯಲ್ಲಿ ದೇಶಕ್ಕೆ ಮಾದರಿಯಾಗಬೇಕು ಎಂಬುದು ನಮ್ಮ ನಾಯಕರಾದ ಡಿಕೆ ಸಹೋದರರ ಕನಸಾಗಿದೆ. ಚುನಾವಣೆಯಲ್ಲಿ ಸಹಕರಿಸಿದ ಸಂಘದ ಎಲ್ಲಾ ನಿರ್ದೇಶಕರು ಮತ್ತು ಮುಖಂಡರಿಗೆ ಅಭಿನಂದನೆಗಳನ್ನು ತಿಳಿಸಿದರು.

ಸಾತನೂರು ಬ್ಲಾಕ್ ಆರೋಗ್ಯ ರಕ್ಷಾ ಸಮಿತಿಯ ಮಹಿಳಾ ಅಧ್ಯಕ್ಷೆ ರೂಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹ ಮೂರ್ತಿ, ಜಮೀರ್ ಅಹ್ಮದ್, ಕೆ ರಾಜು,ಕೆಂಪರಾಜು, ಎಂಪಿಸಿಎಸ್ ಅಧ್ಯಕ್ಷರಾದ ಮುತ್ತುರಾಜು,ದೊಡ್ಡಲಿಂಗೇಗೌಡ, ಮಾಜಿ ಉಪಾಧ್ಯಕ್ಷರಾದ ಹೊನ್ನೇಗೌಡ, ಚೂಡಯ್ಯ, ಗ್ರಾಪಂ ಸದಸ್ಯರಾದ ರಾಮು,ಲಲಿತ ವೆಂಕಟೇಶ್, ಕಾವ್ಯ ಗಿರೀಶ್,ನಿರ್ದೇಶಕರಾದ ನಾಗರಾಜ್, ಕೆಂಪರಾಜು,ಕರಿಯಪ್ಪ,ಚಂದ್ರ,ಮಂಜುಳಾ, ಚಂದ್ರಮ್ಮ, ಲೋಕೇಶ್,ಗ್ರಾಮದ ಮುಖಂಡರಾದ ಭದ್ರಗಿರಯ್ಯ, ಟಿ ಎಂ ಶಿವಕುಮಾರ್, ಚಿಕ್ಕಚೂಡಯ್ಯ, ವೆಂಕಟಪ್ಪ ಹಾಜರಿದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್