ರಾಜ್ಯಾಧಿಕಾರ ಪ್ರಜ್ಞೆ ಇದ್ದಾಗ ಚುನಾವಣಾ ಗೆಲುವು ಸಾಧ್ಯ: ಶಿವಶಂಕರ್

KannadaprabhaNewsNetwork |  
Published : Apr 17, 2025, 12:04 AM ISTUpdated : Apr 17, 2025, 12:05 AM IST
೧೬ಕೆಎಂಎನ್‌ಡಿ-೩೦ಮಂಡ್ಯದ ಪತ್ರಕರ್ತರಭವನದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಬಿಎಸ್‌ಪಿ ಸಂಸ್ಥಾಪನಾ ದಿನ ಮತ್ತು ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ  ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್ ಚಾಲನೆ ನೀಡಿದರು. | Kannada Prabha

ಸಾರಾಂಶ

ದೇಶದಲ್ಲಿ ಬಿಎಸ್‌ಪಿ ಸ್ಥಾಪನೆಯಾಗಿ 41 ವರ್ಷಗಳಾಗಿವೆ, ಬಹುಜನ ಚಳುವಳಿಯ ಮೂಲಕ ಕಾನ್ಸಿರಾಂ ಅವರು ಜನರಲ್ಲಿ ರಾಜಕೀಯ ಪ್ರಜ್ಞೆ ಮತ್ತು ಅಂಬೇಡ್ಕರ್ ಸಿದ್ದಾಂತಗಳ ಬಗ್ಗೆ ಅರಿವು ಹೆಚ್ಚಿಸಿದರು ಎಂದು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯಬಹುಜನರು ರಾಜ್ಯಾಧಿಕಾರದ ಪ್ರಜ್ಞೆ ಹೆಚ್ಚಿಸಿಕೊಂಡರೆ ಸ್ಥಳೀಯ ಚುನಾವಣೆ ಗೆಲ್ಲಬಹುದು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಶಿವಶಂಕರ್ ಅಭಿಪ್ರಾಯಪಟ್ಟರು.ನಗರದಲ್ಲಿರುವ ಪತ್ರಕರ್ತರ ಭವನದಲ್ಲಿ ಬಹುಜನ ಸಮಾಜ ಪಕ್ಷ ಜಿಲ್ಲಾ ಸಮಿತಿ ಆಯೋಜಿಸಿದ್ದ ಬಹುಜನ ಸಮಾಜ ಪಕ್ಷ ಸಂಸ್ಥಾಪನಾ ದಿನ ಮತ್ತು ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದಲ್ಲಿ ಬಿಎಸ್‌ಪಿ ಸ್ಥಾಪನೆಯಾಗಿ 41 ವರ್ಷಗಳಾಗಿವೆ, ಬಹುಜನ ಚಳುವಳಿಯ ಮೂಲಕ ಕಾನ್ಸಿರಾಂ ಅವರು ಜನರಲ್ಲಿ ರಾಜಕೀಯ ಪ್ರಜ್ಞೆ ಮತ್ತು ಅಂಬೇಡ್ಕರ್ ಸಿದ್ದಾಂತಗಳ ಬಗ್ಗೆ ಅರಿವು ಹೆಚ್ಚಿಸಿದರು ಎಂದು ಸ್ಮರಿಸಿದರು.ಇಂದಿಗೆ ಬಿಎಸ್ಪಿ ಪಕ್ಷವು ದೇಶದ ಪ್ರತಿ ಹಳ್ಳಿ ಹಳ್ಳಿಯ ಮತದಾರರಲ್ಲಿ ವಿಶ್ವಾಸ ಹೆಚ್ಚಿಸಿ ರಾಜಕೀಯ ಪ್ರಜ್ಞೆ ಮೂಡುವಂತೆ ಮಾಡಿದೆ, ಸಾಕಷ್ಟು ರಾಜಕೀಯ ಲೆಕ್ಕಾಚಾರವನ್ನು ತಲಕೆಳಗಾಗಿಸಿ, ಹೊಸ ದಿಕ್ಸೂಚಿ ಬರೆಯಲು ಮುಂದಾಗಿದೆ, ಹಲವು ಬಲಾಡ್ಯ ಪಕ್ಷಗಳಿಗೆ ನಿದ್ದೆಗೆಡಿಸಿದೆ ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ಸ್ಥಳೀಯ ಚುನಾವಣೆಗಳಾದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಪಕ್ಷ ಸಂಘಟನೆಯೊಂದಿಗೆ ಬೂತ್ ಮಟ್ಟದಲ್ಲಿ ಅನೆಬಲ ಪ್ರದರ್ಶನ ನೀಡಲಿದೆ ಎಂದು ತಿಳಿಸಿದರು.ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಚಲುವರಾಜ್ ಚಿಕ್ಕಗಾಡಿಗನಹಳ್ಳಿ, ಜಿಲ್ಲಾ ಉಸ್ತುವಾರಿ ವೀರಭದ್ರಯ್ಯ, ಮದ್ದೂರು ಬೋರಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿ.ವಿನಯ್‌ಕುಮಾರ್, ವಿವಿಧ ತಾಲೂಕಿನ ಅಧ್ಯಕ್ಷರಾದ ಹೆಚ್.ಜೆ.ಸತೀಶ್, ನವೀನ್‌ಕುಮಾರ್, ಶಂಕರ್ ಹಾಗೂ ಇತರೆ ಪದಾಧಿಕಾರಿಗಳಿದ್ದರು.

೧೬ಕೆಎಂಎನ್‌ಡಿ-೩೦

ಮಂಡ್ಯದ ಪತ್ರಕರ್ತರಭವನದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಬಿಎಸ್‌ಪಿ ಸಂಸ್ಥಾಪನಾ ದಿನ ಮತ್ತು ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!