ಬ್ಯಾಟರಿ ಬ್ಲಾಸ್ಟ್‌ ಆಗಿ ಎಲೆಕ್ಟ್ರಿಕಲ್‌ ಬೈಕ್‌ ಭಸ್ಮ

KannadaprabhaNewsNetwork |  
Published : Jan 21, 2024, 01:34 AM IST
ಸಂಕೇಶ್ವರ | Kannada Prabha

ಸಾರಾಂಶ

ಬೈಕ್ ಬ್ಯಾಟರಿ ಬ್ಲಾಸ್ಟ್‌ ಆಗಿ, ಬೆಂಕಿ ಕಾಣಿಸಿಕೊಂಡು ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಸಮೀಪದ ಗೋಟುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಸಂಕೇಶ್ವರ: ಎಲೆಕ್ಟ್ರಿಕಲ್‌ ಓಕೆನವಾ ಕಂಪನಿಗೆ ಸೇರಿದ ಬೈಕ್ ಬ್ಯಾಟರಿ ಬ್ಲಾಸ್ಟ್‌ ಆಗಿ, ಬೆಂಕಿ ಕಾಣಿಸಿಕೊಂಡು ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಸಮೀಪದ ಗೋಟುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಗೋಟುರ ಗ್ರಾಮದ ರೈತ ಶಂಕರಗೌಡ ಪಾಟೀಲ ಅವರಿಗೆ ಸೇರಿದ ಎಲೆಕ್ಟ್ರಿಕಲ್ ಬೈಕ್ ಇದಾಗಿದೆ. ಶುಕ್ರವಾರ ರಾತ್ರಿ ಮನೆಯ ಮುಂದೆ ನಿಲ್ಲಿಸಲಾಗಿದ್ದ ವೇಳೆ ರಾತ್ರಿ ಅವಘಡ ನಡೆದಿದೆ. ಬ್ಯಾಟರಿ ಬ್ಲಾಸ್ಟ್‌ ಆಗಿದ್ದರಿಂದ ಬೆಂಕಿ ಹೊತ್ತುಕೊಂಡು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ನಂತರ ಸುತ್ತಮುತ್ತಲಿನ ಜನರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ. ಅಂದಾಜು ₹90 ಸಾವಿರ ಮೌಲ್ಯದ ಬೈಕ್‌ ಬೆಂಕಿಗೆ ಆಹುತಿಯಾಗಿದೆ. ಎಲೆಕ್ಟ್ರಿಕ್ ಬೈಕ್ ಬೆಂಕಿಗಾಹುತಿಯಿಂದ ಜನತೆ ಕೂಡ ಬೆಚ್ಚಿ ಬಿದ್ದಿದ್ದಾರೆ. ಘಟನೆ ಸಂಕೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

-------------

ಲಾಡ್ಜ್‌ ಮ್ಯಾನೇಜರ ಸಾವು: ಮತ್ತೊಬ್ಬನ ಸೆರೆಕನ್ನಡಪ್ರಭ ವಾರ್ತೆ ಬೆಳಗಾವಿನಿಪ್ಪಾಣಿ ನಗರದ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದಾಗಿ ಹೇಳಿ ಬೆದರಿಕೆ ಹಾಕಿ, ಲಾಡ್ಜ್‌ ಮ್ಯಾನೇಜರ್‌ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.ಮಾಧ್ಯಮ ವರದಿಗಾರ ಎಂದು ಹೇಳಿಕೊಂಡಿದ್ದ ಮೂಡಲಗಿ ತಾಲೂಕಿನ ಬೈರನಹಟ್ಟಿ ಗ್ರಾಮದ ಜಾನ್ ಮಾರುತಿ ಕರೆಪ್ಪಗೋಳ (35) ಬಂಧಿತ. ನಿಪ್ಪಾಣಿ ನಗರದಲ್ಲಿರುವ ಗೋಲ್ಡನ್ ಸ್ಟಾರ್‌ ಲಾಡ್ಜ್‌ಗೆ ತೆರಳಿದ ಆರೋಪಿಗಳಿಬ್ಬರು ಲಾಡ್ಜ್‌ ಮ್ಯಾನೇಜರ್‌ ಆಗಿದ್ದ ಕಿರಣ ಕಾಂಬಳೆಗೆ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದಾಗಿ ಹೇಳಿ ಬೆದರಿಕೆ ಹಾಕಿದ್ದರು.ಇದರಿಂದ ಹೆದರಿದ ಕಿರಣ ಅವರು ಲಾಡ್ಜ್‌ ಮೇಲಿಂದ ಬಿದ್ದು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬೆಳಗಾವಿ ತಾಲೂಕಿನ ಗೋಡಿಹಾಳ ಗ್ರಾಮದ ಬಾಳಪ್ಪಾ ಬಸವಂತ ಗುಡಗೇನಟ್ಟಿ (28) ಬೆಳಗಾವಿ ವೈಭವ ನಗರದ ನಿತೇಶ ಶ್ಯಾಮ ಕಿತ್ತೂರ (29) ಎಂಬುವವರನ್ನು ಬಂಧಿಸಿದ್ದರು. ಈ ವೇಳೆ ಆರೋಪಿ ಜಾನ್ ಕರೆಪ್ಪಗೋಳ ಪರಾರಿಯಾಗಿದ್ದ. ಈತನ ಬೆನ್ನು ಬಿದ್ದಿದ್ದ ಖಾಕಿಪಡೆ ಬೆಳಗಾವಿ ನಗರದಲ್ಲಿ ಬಂಧಿಸಿದ್ದಾರೆ. ಈ ಕುರಿತು ನಿಪ್ಪಾಣಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ