ವಿದ್ಯುತ್ ಸ್ಪರ್ಶ: ಮೇಯಲು ಹೋಗಿದ್ದ ನಾಲ್ಕು ಕುರಿಗಳು ಸಾವು

KannadaprabhaNewsNetwork |  
Published : Jun 01, 2025, 02:30 AM IST
31ಕೆಎಂಎನ್ ಡಿ11 | Kannada Prabha

ಸಾರಾಂಶ

ಕೋಡಿಪುರ ಗ್ರಾಮದ ವಾಸಿ ಬಸವೇಗೌಡರ ಪುತ್ರ ಸಿದ್ದರಾಮು ಅವರು ಕುರಿ ಸಾಕಾಣಿಕೆ ಮಾಡಿಕೊಂಡಿ ಜೀವನ ನಡೆಸುತ್ತಿದ್ದರು. ಎಂದಿನಂತೆ ತಮ್ಮ ಕುರಿಗಳನ್ನು ಮೇಯಿಸಲು ಅಗಸನಪುರ ವ್ಯಾಪ್ತಿಯ ಚಿಕ್ಕತಮ್ಮಯ್ಯ ಅವರ ಜಮೀನಿನಲ್ಲಿ ಮೇಯಲು ಬಿಡಲಾಗಿತ್ತು. ಈ ವೇಳೆ ತುಂಡಾದ ವಿದ್ಯುತ್ ತಂತಿ ತುಳಿದು ಪರಿಣಾಮ ಸ್ಥಳದಲ್ಲೇ ನಾಲ್ಕು ಕುರಿಗಳು ಮೃತಪಟ್ಟವು.

ಕನ್ನಡಪ್ರಭ ವಾರ್ತೆ ಹಲಗೂರು

ಮೇಯಲು ಹೋಗಿದ್ದ ನಾಲ್ಕು ಕುರಿಗಳು ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಸಾವೀಗೀಡಾದ ಘಟನೆ ಸಮೀಪದ ಅಗಸನಪುರ ಹೊರವಲಯದಲ್ಲಿ ನಡೆದಿದೆ.

ಮೂಲತಃ ಕೋಡಿಪುರ ಗ್ರಾಮದ ವಾಸಿ ಬಸವೇಗೌಡರ ಪುತ್ರ ಸಿದ್ದರಾಮು ಅವರು ಕುರಿ ಸಾಕಾಣಿಕೆ ಮಾಡಿಕೊಂಡಿ ಜೀವನ ನಡೆಸುತ್ತಿದ್ದರು. ಎಂದಿನಂತೆ ತಮ್ಮ ಕುರಿಗಳನ್ನು ಮೇಯಿಸಲು ಅಗಸನಪುರ ವ್ಯಾಪ್ತಿಯ ಚಿಕ್ಕತಮ್ಮಯ್ಯ ಅವರ ಜಮೀನಿನಲ್ಲಿ ಮೇಯಲು ಬಿಡಲಾಗಿತ್ತು.

ಈ ವೇಳೆ ತುಂಡಾದ ವಿದ್ಯುತ್ ತಂತಿ ತುಳಿದು ಪರಿಣಾಮ ಸ್ಥಳದಲ್ಲೇ ನಾಲ್ಕು ಕುರಿಗಳು ಮೃತಪಟ್ಟವು. ಅದೃಷ್ಟವಶಾತ್ ಇತರೆ ಕುರಿಗಳು ಅಪಾಯದಿಂದ ಪಾರಾಗಿವೆ. ಪಶು ವೈದ್ಯಾಧಿಕಾರಿ ಡಾ.ಸಂದೇಶ್ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು.

ಸಿದ್ದರಾಮ ಮಾತನಾಡಿ, ನಮ್ಮ ಜೀವನ ಉಪಯೋಗಕ್ಕಾಗಿ ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ನಾಲ್ಕು ಕುರಿಗಳು ಮೃತಪಟ್ಟಿರುವುದರಿಂದ ನಮಗೆ ನಷ್ಟ ಉಂಟಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿವಂತೆ ಮನವಿ ಮಾಡಿದ್ದಾರೆ.

ಹಲಗೂರು ಪೊಲೀಸ್‌ ಠಾಣೆ ಎಎಸ್‌ಐ ರಮೇಶ್ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಹಸಿರೆಲೆ ಗೊಬ್ಬರ, ಬಿತ್ತನೆ ಬೀಜ ವಿತರಣೆ: ದೀಪಕ್

ಮಳವಳ್ಳಿ:

ಈ ಬಾರಿ ಪೂರ್ವ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಮುಸುಕಿನ ಜೋಳ, ದ್ವಿದಳ ಧಾನ್ಯ ಬಿತ್ತನೆ ಬೀಜಗಳು ಹಾಗೂ ಹಸಿರೆಲೆ ಗೊಬ್ಬರ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದೊರೆಯಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್ ತಿಳಿಸಿದ್ದಾರೆ.ತಾಲೂಕಿನಲ್ಲಿ ಮೇ ತಿಂಗಳ ಅಂತ್ಯದವರೆಗೆ 167.1 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಈವರೆಗೆ 258.7 ಮಿಮೀ ಮಳೆಯಾಗಿರುತ್ತದೆ. ತಾಲೂಕಿನ ರೈತ ಬಾಂಧವರು ಈಗ ಬಿದ್ದಿರುವ ಮಳೆಯನ್ನು ಉಪಯೋಗಿಸಿಕೊಂಡು ತಮ್ಮ ಜಮೀನುಗಳನ್ನು ಹದಗೊಳಿಸಿ ಕೊಟ್ಟಿಗೆ ಗೊಬ್ಬರವನ್ನು ಮುಖ್ಯ ಭೂಮಿಗೆ ಸೇರಿಸಬೇಕು. ತಾಲೂಕಿನ ಎಲ್ಲ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನಿಗೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಮುಸುಕಿನ ಜೋಳ, ದ್ವಿದಳ ಧಾನ್ಯ ಬಿತ್ತನೆ ಬೀಜಗಳು ಹಾಗೂ ಹಸಿರೆಲೆ ಗೊಬ್ಬರ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳಲ್ಲೂ ದೊರೆಯಲಿವೆ. ಹೀಗಾಗಿ ರೈತ ಬಾಂಧವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಜರುಪಡಿಸಿ ಸಹಾಯಧನದಲ್ಲಿ ಬಿತ್ತನೆ ಬೀಜವನ್ನು ಪಡೆಯಬಹುದು.

ಎಲ್ಲ ಹೋಬಳಿಗಳಲ್ಲಿ ರಸಗೊಬ್ಬರಗಳ ದಾಸ್ತಾನು ಮಾರಾಟಗಾರರಲ್ಲಿ ಲಭ್ಯವಿದೆ. ರೈತರು ಇದನ್ನು ಸದುಪಯೋಗ ಪಡಿಸಿಕೊಂಡು ಇಳಜಾರಿಗೆ ಅಡ್ಡಲಾಗಿ ಬಿತ್ತನೆ ಕ್ರಮ ಕೈಗೊಳ್ಳುವಂತೆ ಎಂದು ತಿಳಿಸಿದ್ದಾರೆ.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು