ಹಟ್ಟಿಮಾರಮ್ಮ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಆನೆ ಮೆರವಣಿಗೆ

KannadaprabhaNewsNetwork |  
Published : Nov 24, 2024, 01:48 AM IST
23ಕೆಎಂಎನ್ ಡಿ26 | Kannada Prabha

ಸಾರಾಂಶ

ಇದೇ ಮೊದಲ ಬಾರಿಗೆ ದೇವರ ಕಾರ್ಯಕ್ಕೆ ಆನೆ ಆಗಮಿಸಿದ್ದು, ಆನೆಯನ್ನು ನೋಡಲು ಜನರ ದಂಡೇ ನೆರೆದಿತ್ತು. ಜನರು ಆನೆ ಹಾಗೂ ದೇವರಿಗೆ ಆರತಿ ನೀಡಿ ಭಕ್ತಿ ಪ್ರದರ್ಶಿಸಿದರು. ನಂತರ ಆನೆ ಹಟ್ಟಿ ಮಾರಮ್ಮ ದೇವಾಲಯದ ಆವರಣದಲ್ಲಿ ವಿಶ್ರಾಂತಿ ಪಡೆಯಿತು. ಪೂಜೆ ಹಾಗೂ ಸತ್ತಿಗೆಯನ್ನು ಇಳಿಸಲಾಯಿತು.

ಕನ್ನಡಪ್ರಭ ವಾರ್ತೆ ಭಾರತೀನಗರ

ಅಣ್ಣೂರು ಗ್ರಾಮದಲ್ಲಿ ಹಟ್ಟಿಮಾರಮ್ಮ, ಸಿದ್ದೇಶ್ವರಸ್ವಾಮಿ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ದೇವರ ಪೂಜೆ, ಸಿದ್ದೇಶ್ವರಸ್ವಾಮಿ ಸತ್ತಿಗೆ ಹಾಗೂ ಆನೆ(ಗಜರಾಜ) ಮೆರವಣಿಗೆ ನಡೆಯಿತು.

ಸಂಜೆ ದೇವಾಲಯದಲ್ಲಿ ಪುಣ್ಯಾಹ ಪೂಜಾ ರಕ್ಷಾಬಂಧನ, ಗಣಪತಿ ಹೋಮ, ನವಗ್ರಹ ಹೋಮ, ಸೇರಿದಂತೆ ಮತ್ತಿತರ ಪೂಜಾ ಕಾರ್ಯಗಳು ನಡೆದವು. ನಂತರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯಿಂದ ರಾತ್ರಿ 7 ಗಂಟೆಗೆ ಆನೆ, ಪೂಜೆ, ಸತ್ತಿಗೆ ಮೆರವಣಿಗೆ ಆರಂಭವಾಯಿತು.

ಗ್ರಾಮದ ರಾಮ ಮಂದಿರದ ಮುಂದಿನ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಹೊಲಮಾಳದ ಹುಚ್ಚಮ್ಮ ದೇವಿ ದೇವಾಲಯದಲ್ಲಿ ಪೂಜೆ ಪಡೆದು, ಮಾರಮ್ಮನ ದೇವಾಲಯದ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಾಗಿ ಹಟ್ಟಿ ಮಾರಮ್ಮನ ದೇವಾಲಯ ತಲುಪಿತು.

ಇದೇ ಮೊದಲ ಬಾರಿಗೆ ದೇವರ ಕಾರ್ಯಕ್ಕೆ ಆನೆ ಆಗಮಿಸಿದ್ದು, ಆನೆಯನ್ನು ನೋಡಲು ಜನರ ದಂಡೇ ನೆರೆದಿತ್ತು. ಜನರು ಆನೆ ಹಾಗೂ ದೇವರಿಗೆ ಆರತಿ ನೀಡಿ ಭಕ್ತಿ ಪ್ರದರ್ಶಿಸಿದರು. ನಂತರ ಆನೆ ಹಟ್ಟಿ ಮಾರಮ್ಮ ದೇವಾಲಯದ ಆವರಣದಲ್ಲಿ ವಿಶ್ರಾಂತಿ ಪಡೆಯಿತು. ಪೂಜೆ ಹಾಗೂ ಸತ್ತಿಗೆಯನ್ನು ಇಳಿಸಲಾಯಿತು.

ನ.24 ರಂದು ಹಟ್ಟಿ ಮಾರಮ್ಮನವರ ಪ್ರಾಣಪ್ರತಿಷ್ಠೆ, ಮಹಾಭಿಷೇಕ, ಅಲಂಕಾರ ಪೂಜೆ ಸೇರಿದಂತೆ ಇತ್ಯಾಧಿ ಪೂಜಾ ಕೈಂಕರ್ಯಗಳು ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿತರಣೆ ಜರುಗಲಿದೆ.

ನ.26 ರಂದು ಸಂವಿಧಾನ ಮೆರವಣಿಗೆ ಮತ್ತು ಜಾಗೃತಿ ಕಾರ್ಯಕ್ರಮ: ಹುಲ್ಕೆರೆ ಮಹದೇವು

ಮಂಡ್ಯ:

ಭಾರತ ಸಂವಿಧಾನ ಸಮರ್ಪಣಾ ದಿನದ ಅಮೃತ ಮಹೋತ್ಸವದ ಅಂಗವಾಗಿ ನ.26 ರಂದು ಸಂವಿಧಾನ ಮೆರವಣಿಗೆ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ದಲಿತ ಮುಖಂಡ ಹುಲ್ಕೆರೆ ಮಹದೇವು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಪರಿವರ್ತನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಿಂದ ಅಂದು ಮಧ್ಯಾಹ್ನ 2 ಗಂಟೆಗೆ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯವರೆಗೆ ಮೆರವಣಿಗೆ ನಡೆಸಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಮರ್ಪಿಸಲಾಗುವುದು ಎಂದರು.

ಸಂಜೆ 6 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಕ್ಕಾ ಹಾಗೂ ಐ.ಎ.ಎಸ್ ಅಕಾಡೆಮಿಯ ಮುಖ್ಯಸ್ಥ ಡಾ.ಶಿವಕುಮಾರ್ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಕುಂದ, ಶಿವರುದ್ರಯ್ಯ, ಎಂ.ವಿ.ಕೃಷ್ಣ, ಎಚ್.ಎನ್.ನರಸಿಂಹಮೂರ್ತಿ, ಗುರುಶಂಕರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ