ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಹೇರಿ ವಾರಣಾಸಿ ಹಿರೇಮಠದಲ್ಲಿ ಲಿಂಗೈಕ್ಯ ಶ್ರೀಗುರು ಕೊಟ್ಟೂರೇಶ್ವರರ 51ನೇ ಪುಣ್ಯ ಆರಾಧನಾ ಮಹೋತ್ಸವ ಹಾಗೂ ತ್ರಿಕಾಲ ಇಷ್ಟಲಿಂಗ ತಪೋಭೂಷಣ, ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಲಿಂ. ಗಂಗಾಧರ ಶಿವಾಚಾರ್ಯರ 2ನೇ ವರ್ಷದ ಪುಣ್ಯ ಆರಾಧನಾ ಮಹೋತ್ಸವದ ಅಂಗವಾಗಿ ಲಿಂ. ಶ್ರೀಗುರು ಗಂಗಾಧರ ಶ್ರೀಗಳ ಜೀವನ ದರ್ಶನ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ನಾಡಿಗೆ ಮಠ-ಮಂದಿರಗಳ ಕೊಡುಗೆ ಅಪಾರವಾಗಿದೆ. ಅಕ್ಷರ-ಅನ್ನದ ಜೋತೆಗೆ ಉತ್ತಮ ಸಂಸ್ಕಾರವನ್ನು ಮೂಡಿಸುವ ಕಾರ್ಯದಲ್ಲಿ ಇಲ್ಲಿನ ಮಠಮಾನ್ಯಗಳು ಖ್ಯಾತಿಯನ್ನು ಪಡೆದಿವೆ. ಈ ಭಾಗದ ಪ್ರಮುಖ ಮಠವಾದ ಎಲ್ಹೇರಿ ವಾರಣಾಸಿ ಹಿರೇಮಠದ ಹಿರಿಯ ಪೂಜ್ಯರಾದ ಲಿಂ. ಗಂಗಾಧರ ತಾತನವರು ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದರು.ತಮ್ಮ ಇಡೀ ಜೀವನವನದ ಸಮಯವನ್ನು ನಿರಾಡಂಬರಾಗಿ ಪೂಜಾ ಪಾಠದಲ್ಲಿ ತೊಡಗಿ ಜನರನ್ನು ಸಂಸ್ಕಾರವಂತರನ್ನಾಗಿಸುವಲ್ಲಿ ಕಳೆದಿದ್ದಾರೆ. ಪೂಜ್ಯರು ತ್ರಿಕಾಲ ಪೂಜಾನಿಷ್ಠರಾಗಿ, ಮಹಾತಪಸ್ವಿಗಳಾಗಿ ಕರ್ನಾಟಕ, ಆಂದ್ರ ಮತ್ತು ತೆಲಗಾಂಣದಲ್ಲಿ ಪ್ರಮುಖ ಮಠಗಳನ್ನು ಸ್ಥಾಪಿಸಿ, ಜನತೆಗೆ ಧರ್ಮಭೋದೆಯನ್ನು ಮಾಡಿದ್ದಾರೆ, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಗಳ ಕಾರ್ಯ ಅನನ್ಯವಾದ್ದು. ಯಾವತ್ತೂ ಎಲ್ಹೇರಿ ವಾರಣಾಸಿ ಮಠದ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದೇನೆ ಎಂದರು.
ಶ್ರೀಗುರು ಕೊಟ್ಟೂರೇಶ್ವರ ಮಠ ಹರ್ಲಾಪುರದ ಶ್ರೀ ಅಭಿನವ ಡಾ. ಕೊಟ್ಟೂರೇಶ್ವರ ಮಹಾಸ್ವಾಮೀಜಿಗಳು ಲಿಂ. ಗುರುಗಂಗಾಧರ ಶ್ರೀಗಳ ಜೀವನ ದರ್ಶನ ಪುರಾಣ ಪ್ರವಚನ ಆರಂಭಿಸಿದರು.
ಮೇ 21ರಂದು ಪುಣ್ಯಾರಾಧನೆ, ಪುರಾಣ ಮಹಾಮಂಗಲ: ಮೇ 21ರಂದು ಎಲ್ಹೇರಿ ಗ್ರಾಮದ ವಾರಣಾಸಿ ಹಿರೇಮಠದಲ್ಲಿ ಲಿಂ. ಕೊಟ್ಟೂರೇಶ್ವರ, ಲಿಂ. ಗಂ ಗಾಧರ ಶ್ರೀಗಳ ಪುಣ್ಯಾರಾಧನೆ ನಿಮಿತ್ತವಾಗಿ ನಡೆದ ಪುರಾಣವು ಸಂಜೆ 5.30ಕ್ಕೆ ಮಹಾ ಮಂಗಲಗೊಳ್ಳುವುದು. ಇದಕ್ಕೂ ಮುಂಚೆ ಬೆಳಿಗ್ಗೆ 7ಗಂಟೆಗೆ ಉಭಯ ಪೂಜ್ಯರ ಗದ್ದುಗೆಗೆ ಮಹಾರಾರುದ್ರಾಬಿಷೇಕ, ಮಧ್ಯಾಹ್ನ 12 ಗಂಟೆಗೆ 101 ಮುತೈದೆಯರಿಗೆ ಊಡಿತುಂಬುವ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ ಪಲ್ಲಕ್ಕಿ ಮೆರವಣಿಗೆಯು ಪುರವತರ ಕುಣಿತ ನಂದಿಕೋಲು ಸೇವೆ ಮಂಗಳವಾದ್ಯಗಳೊಂದಿಗೆ ನೆರವೇರುವುದು.
ಸಚಿವ ಶರಣಪ್ರಕಾಶ ಪಾಟೀಲ್, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ನ್ಯಾಯವಾದಿ ಎಸ್ ಬಿ ಪಾಟೀಲ, ಕಲ್ಯಾಣಪ್ಪ ಪಾಟೀಲ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಎಲ್ಹೇರಿ-ಮಳಖೇಡ ಉಭಯ ಮಠದ ಪೂಜ್ಯರಾದ ಕೊಟ್ಟೂರೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ.