.ಶಿಕ್ಷಕರ ವೇತನ ತಾರತಮ್ಯ ನಿವಾರಣೆಗೆ ಆದ್ಯತೆ

KannadaprabhaNewsNetwork |  
Published : Jun 11, 2024, 01:37 AM ISTUpdated : Jun 11, 2024, 01:38 AM IST
೧೦ಕೆಎಲ್‌ಆರ್-೧೧ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ನೂತನ ಸದಸ್ಯ ಡಿ.ಟಿ.ಶ್ರೀನಿವಾಸ್ ಅವರು ವಿಧಾನಪರಿಷತ್ ಆಯ್ಕೆಯಾದ ಹಿನ್ನಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಶಿಕ್ಷಕರು ಸನ್ಮಾನಿಸಿದರು. | Kannada Prabha

ಸಾರಾಂಶ

ಶಿಕ್ಷಕರು ವೇತನ ತಾರತಮ್ಯ, ಬಡ್ತಿ ಸಮಸ್ಯೆ, ಕಾಲ್ಪನಿಕ ವೇತನ ಸಮಸ್ಯೆ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಸೇವಾ ಅಭದ್ರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಸಮಸ್ಯೆಗಳ ಪರಿಹಾರಕ್ಕೆ ಶಕ್ತಿ ಮೀರಿ ಶ್ರಮಿಸುವೆ

ಕನ್ನಡಪ್ರಭ ವಾರ್ತೆ ಕೋಲಾರಶಿಕ್ಷಕರು ಎದುರಿಸುತ್ತಿರುವ ವೇತನ ತಾರತಮ್ಯ, ಜೆಒಸಿಯಿಂದ ವಿಲೀನಗೊಂಡು ಶಾಲಾ ಶಿಕ್ಷಣ ಇಲಾಖೆಗೆ ಬಂದಿರುವ ಶಿಕ್ಷಕರ ಹಳೆಯ ಸೇವೆ ಪರಿಗಣನೆ ಸೇರಿದಂತೆ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಬದ್ಧತೆಯಿಂದ ಕೆಲಸ ಮಾಡುವುದಾಗಿ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ನೂತನ ಸದಸ್ಯ ಡಿ.ಟಿ.ಶ್ರೀನಿವಾಸ್ ಭರವಸೆ ನೀಡಿದರು.ವಿಧಾನಪರಿಷತ್ ಆಯ್ಕೆಯಾದ ಹಿನ್ನೆಲೆಯಲ್ಲಿ ಕೆಆರ್.ಪುರಂನ ತಮ್ಮ ನಿವಾಸದಲ್ಲಿ ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಖಜಾಂಚಿ ಟಿ.ಎ.ಪ್ರಕಾಶ್ ಬಾಬು, ಎನ್‌ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ.ಅಶೋಕ್ ನೇತೃತ್ವದಲ್ಲಿ ಶ್ರೀನಿವಾಸಪುರ ತಾಲೂಕಿನ ಶಿಕ್ಷಕರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ವೇತನ ಆಯೋಗ ವರದಿ

೭ನೇ ವೇತನ ಆಯೋಗದ ವರದಿ ಜಾರಿಗೆ ನಮ್ಮ ಸರ್ಕಾರ ಬದ್ದವಾಗಿದೆ, ಈಗಾಗಲೇ ಇದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ, ಇದರ ಜತೆಗೆ ಎನ್‌ಪಿಎಸ್ ರದ್ದತಿ ಕುರಿತು ಕಳೆದ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದು, ಅದರ ಜಾರಿಗೂ ಸರ್ಕಾರ ಕ್ರಮವಹಿಸಲಿದೆ ಎಂದು ತಿಳಿಸಿದರು.ಶಿಕ್ಷಕರು ವೇತನ ತಾರತಮ್ಯ, ಬಡ್ತಿ ಸಮಸ್ಯೆ, ಕಾಲ್ಪನಿಕ ವೇತನ ಸಮಸ್ಯೆ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಸೇವಾ ಅಭದ್ರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಎಲ್ಲ ಸಮಸ್ಯೆಗಳನ್ನು ಒಮ್ಮೆಲೇ ಪರಿಹರಿಸಲು ಅಸಾಧ್ಯವಾದರೂ ಕೈಲಾದಷ್ಟು ಸಮಸ್ಯೆಗಳ ಪರಿಹಾರಕ್ಕೆ ಶಕ್ತಿ ಮೀರಿ ಶ್ರಮಿಸುವೆ ಎಂದರು.ಹಿಂದಿನ ಸೇವೆ ಪರಿಗಣಿಸಿ

ಜೆಒಸಿ ಕೋರ್ಸುಗಳನ್ನು ಮುಚ್ಚಿದ ನಂತರ ವಿವಿಧ ಇಲಾಖೆಗಳಿಗೆ ವಿಲೀನಗೊಂಡ ನೌಕರರು, ಶಿಕ್ಷಕರಿಗೆ ಅವರ ಸುಮಾರು ೨೦ ವರ್ಷಗಳಿಗೂ ಹೆಚ್ಚಿನ ಹಿಂದಿನ ಸೇವೆ ಸಿಗದ ಕಾರಣ ನಿವೃತ್ತಿ ಅಂಚಿನಲ್ಲಿ ಸಂಕಷ್ಟದ ಬದುಕು ಎದುರಿಸುವಂತಾಗಿದೆ ಎಂದು ಗಮನಕ್ಕೆ ತರಲಾಯಿತು. ಇದಕ್ಕೆ ಸ್ಪಂದಿಸಿದ ಅವರು ಜೆಒಸಿಯಿಂದ ವಿಲೀನಗೊಂಡ ಸಿಬ್ಬಂದಿಯ ಕಷ್ಟದ ಅರಿವು ನನಗಿದೆ, ನಿಮ್ಮೊಂದಿಗೆ ಸದಾ ನಾನಿರುವ ಎಂದು ಭರವಸೆ ನೀಡಿದರು.

ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಟಿ.ಎ.ಪ್ರಕಾಶ್‌ಬಾಬು, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ವಿ.ಅಶೋಕ್, ಡಿಡಿಪಿಐ ಕಚೇರಿಯ ವೃತ್ತಿಶಿಕ್ಷಣ ವಿಷಯ ಪರಿವೀಕ್ಷಕ ವೆಂಕಟೇಶಬಾಬು, ಶಿಕ್ಷಕ ಮುಖಂಡರಾದ ಮುಕುಂದ, ಅಪ್ಪೋರು ಮಂಜುನಾಥ್, ಶಿವರಾಜ್‌ಕುಮಾರ್, ಸಿಆರ್‌ಪಿ ಚನ್ನಪ್ಪ, ನಿವೃತ್ತ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ವೃತ್ತಿಶಿಕ್ಷಕ ಚಲಪತಿ, ಇಸಿಒ ಕೋದಂಡಪ್ಪ, ರವಿಕುಮಾರ್, ನಾಗರಾಜ್, ನಾರಾಯಣಸ್ವಾಮಿ, ಸಿಆರ್‌ಪಿಗಳಾದ ವೇಣುಗೋಪಾಲ್, ರಾಮಚಂದ್ರಪ್ಪ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ