ನಾರಾಯಣ ಗುರು ಆದರ್ಶ ಮೈಗೊಡಿಸಿಕೊಳ್ಳಿ: ಕೇಂದ್ರ ಸಚಿವ ವಿ. ಸೋಮಣ್ಣ

KannadaprabhaNewsNetwork |  
Published : Oct 27, 2024, 02:01 AM IST
ನಾರಾಯಣಗುರುಗಳ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ವಿ. ಸೋಮಣ್ಣ | Kannada Prabha

ಸಾರಾಂಶ

ಸಮಾಜದ ಅಸಮಾನತೆ ದೂರಾಗಬೇಕು, ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು ಎಂಬ ಸಂದೇಶ ಸಾರಿದ ಮಹರ್ಷಿ ನಾರಾಯಣ ಗುರುಗಳು ಧ್ವನಿ ಇಲ್ಲದ ಸಮಾಜದ ಧ್ವನಿಯಾಗಿದ್ದರು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ತುಮಕೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಮಾಜದ ಅಸಮಾನತೆ ದೂರಾಗಬೇಕು, ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು ಎಂಬ ಸಂದೇಶ ಸಾರಿದ ಮಹರ್ಷಿ ನಾರಾಯಣ ಗುರುಗಳು ಧ್ವನಿ ಇಲ್ಲದ ಸಮಾಜದ ಧ್ವನಿಯಾಗಿದ್ದರು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಾಭಿಮಾನಕ್ಕೆ ಹೆಸರಾದ ಈಡಿಗ ಸಮಾಜದವರು ಯಾರಿಗೂ ಕೈ ಚಾಚುವುದಿಲ್ಲ, ತಮ್ಮ ದುಡಿಮೆಯಲ್ಲಿ ಕೈ ನೀಡಿ ಕೊಡುವ ಸಮಾಜ. ಎಲ್ಲಾ ಸಮಾಜಗಳೂ ದೇಶದ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ. ಪ್ರಧಾನಿ ಮೋದಿ ದೂರದೃಷ್ಟಿಯ ಚಿಂತನೆಗಳು ದೇಶದ ಪ್ರಗತಿಗೆ ಪೂರಕವಾಗಿವೆ. ಅದರ ಪರಿಣಾಮ ದೇಶದಲ್ಲಿ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ಹೇಳಿದರು.ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಕರಾಳ ಜಾತಿ ವ್ಯವಸ್ಥೆಯ ಕಾಲದಲ್ಲಿ ನಾರಾಯಣ ಗುರುಗಳು ಎಲ್ಲಾ ಜಾತಿಯವರು ಸಮಾನರು ಎಂಬ ಸಂದೇಶ ಸಾರಿದ್ದರು. ಆಗಿನ ಕಠಿಣ ಕಟ್ಟುಪಾಡುಗಳ ವಿರುದ್ಧ ಜನಜಾಗೃತಿ ಮೂಡಿಸಿ ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದ್ದರು. ಇವರು ಒಂದು ಜಾತಿಗೆ ಸೀಮಿತವಲ್ಲ, ಎಲ್ಲಾ ಸಮಾಜದ ಗೌರವಕ್ಕೆ ಪಾತ್ರರು. ಈಗಲೂ ಅಂತಹ ಕರಾಳ ಆಚರಣೆಗಳು ಕೆಲವು ಕಡೆ ಮುಂದುವರೆದಿವೆ, ಇವು ಬದಲಾಗಬೇಕು ಎಂದರು.ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ಆದರ್ಶ ಸಮಾಜ ನಿರ್ಮಾಣಕ್ಕೆ ನಾರಾಯಣ ಗುರುಗಳು ನೀಡಿರುವ ಸಂದೇಶ ಎಲ್ಲಾ ಕಾಲದಲ್ಲೂ ಸಲ್ಲುವಂತಾದ್ದು, ದೇವಸ್ಥಾನ, ಪ್ರತಿಷ್ಠಾನ ಇಲ್ಲದ ವರ್ಗದವರಿಗೆ ಧ್ವನಿಯಾಗಿಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಗುರುಗಳು ಶ್ರೇಷ್ಠರಾಗಿದ್ದಾರೆ ಎಂದು ತಿಳಿಸಿದರು.ಕೊರಟಗೆರೆ ಜಮೀನ್ದಾರರಾದ ಮಾಧು ಸಾಹುಕಾರ್, ಜಿಲ್ಲಾ ಆರ್ಯ ಈಡಿಗ ಸಂಘದ ಉಪಾಧ್ಯಕ್ಷ ಆರ್.ನಾರಾಯಣಸ್ವಾಮಿ, ಉದ್ಯಮಿ ನ್ಯಾತೇಗೌಡ, ಕರಾಟೆ ಗುರು ಕರಾಟೆ ಕೃಷ್ಣಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್, ಉದ್ಯಮಿ ಟಿ.ಕೆ.ರವಿ, ಮಾಜಿ ಸೈನಿಕ ಪಿ.ಎಂ.ಸಂತೋಷ್‌ಕುಮಾರ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಇದಕ್ಕೂ ಮೊದಲು ನಗರದ ಬಿಜಿಎಸ್ ವೃತ್ತದಿಂದ ನಾರಾಯಣಗುರುಗಳ ಮೂರ್ತಿ ಹಾಗೂ ವಿಖ್ಯಾತನಂದ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿಯವರನ್ನು ಅಲಂಕೃತ ರಥದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಶಾಸಕ ಸುನಿಲ್‌ಕುಮಾರ್ ಅವರು ಮೆರವಣಿಗೆ ಉದ್ಘಾಟಿಸಿದರು. ಪೂರ್ಣಕುಂಭ, ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ತೀರ್ಥಹಳ್ಳಿಯ ನಿಟ್ಟೂರು ಮಠದ ಪೀಠಾಧ್ಯಕ್ಷರಾದ ರೇಣುಕಾನಂದ ಸ್ವಾಮೀಜಿ ಸಮಾರಂಭದ ಸಾನಿಧ್ಯವಹಿಸಿದ್ದರು. ಜಿಲ್ಲಾ ಆರ್ಯ ಈಡಿಗ ಸಂಘದ ಎಂ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಸಂಸ್ಥಾಪಕರಾದ ಅಜಯ್‌ಕುಮಾರ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜೆ.ಪಿ.ಎನ್.ಪಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ್, ನಾರಾಯಣಗುರು ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಸಂದ್ರ ಶಿವಣ್ಣ, ಸಂಘದ ಉಪಾಧ್ಯಕ್ಷರಾದ ಆರ್.ನಾರಾಯಣಸ್ವಾಮಿ, ಖಜಾಂಚಿ ಹೆಚ್.ಎಂ.ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಓ.ಎಲ್.ಪುರುಷೋತ್ತಮ್, ರವೀಂದ್ರಕುಮಾರ್, ನಾರಾಯಣ್, ಮುಖಂಡರಾದ ಕೆ.ವೇದಮೂರ್ತಿ, ಎಂ.ಜಿ.ಶ್ರೀನಿವಾಸಮೂರ್ತಿ ಭಾಗವಹಿಸಿದ್ದರು.

ಸಮಾಜ ಕೊಡುಗೆ ನೀಡಿದ ಜ್ಞಾನಿ: ಮುಖಂಡ ಎನ್.ಕೆ. ನಿಧಿಕುಮಾರ್‌ತುಮಕೂರು: ನಗರದ ಅಮಾನಿಕೆರೆ ಪಾರ್ಕ್ ಆವರಣದಲ್ಲಿ ವಿಶ್ವಮಾನವ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಆಚರಿಸಲಾಯಿತು. ಮುಖಂಡ ಎನ್.ಕೆ. ನಿಧಿಕುಮಾರ್‌ ಮಾತನಾಡಿ, ನಾರಾಯಣಗುರುಗಳ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿದ್ದ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವಲ್ಲಿ ಅವರ ಪಾತ್ರ ಅತ್ಯಂತ ಹಿರಿಮೆ ತಂದಿದೆ. ಅವರು ನಾನಾ ಕಡೆ ಪಾದಯಾತ್ರೆ ಮಾಡಿ ಜನರಲ್ಲಿದ್ದ ಮೂಡನಂಬಿಕೆಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದ್ರಕುಮಾರ್‌ಡಿ.ಕೆ. ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ದಿವಾಕರ್, ಜಿಲ್ಲಾಉಪಾಧ್ಯಕ್ಷ ನಾರಾಯಣ್‌ಎಸ್, ಜಿಲ್ಲಾ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಟೈಲರ್‌ ಜಗದೀಶ್, ಸಹ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಕೆ.ಎನ್, ನಗರಾಧ್ಯಕ್ಷ ಶ್ರೀನಿವಾಸ್.ಡಿ.ಆರ್, ಪದಾಧಿಕಾರಿಗಳಾದ ಇಮ್ರಾನ್, ವಿನಯ್, ನಾಗರಾಜ್,ಕುಮಾರ್,ಗಂಗಾಧರ್‌ಜಿ.ಆರ್, ರಂಗಸ್ವಾಮಯ್ಯ, ದರ್ಶನ್,ಗೋವಿಂದರಾಜ್ ಉಪಸ್ಥಿತರಿದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್