ಬಸವಣ್ಣನವರ ಆದರ್ಶ, ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ: ಶಾಸಕ ರಮೇಶ ಬಂಡಿಸಿದ್ದೇಗೌಡ

KannadaprabhaNewsNetwork |  
Published : Feb 18, 2024, 01:34 AM IST
17ಕೆಎಂಎನ್ ಡಿ39 | Kannada Prabha

ಸಾರಾಂಶ

ಜಾತಿ ಪದ್ಧತಿ ಹೋಗಲಾಡಿಸಿ ಸಮ ಸಮಾಜವನ್ನು ನಿರ್ಮಿಸಲು ಅಂತರ್ಜಾತಿ ವಿವಾಹಗಳ ಮೂಲಕ ಕಲ್ಯಾಣ ಕ್ರಾಂತಿಯನ್ನುಂಟು ಮಾಡಿದರು ಬಸವಣ್ಣ. ಅವರ ವಚನದಲ್ಲಿರುವ ಸಪ್ತಸೂತ್ರವನ್ನು ಜನರು ಅಳವಡಿಸಿಕೊಂಡು ಇಂತಹ ಮಹಾನ್ ವ್ಯಕ್ತಿಯ ವಚನಗಳನ್ನು ನಾವೆಲ್ಲರೂ ಸ್ಮರಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬಸವಣ್ಣನವರ ಆದರ್ಶ ಮೌಲ್ಯಗಳನ್ನು ಈಗಿನ ಪೀಳಿಗೆಯವರು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾತನಾಡಿ, 12ನೇ ಶತಮಾನದಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ಹಾಗೂ ಜಾತಿ ರಹಿತ ಸಮಾಜವನ್ನು ನಿರ್ಮಾಣ ಮಾಡಲು ಬಸವಣ್ಣನವರು ಶ್ರಮಿಸಿದ್ದರು ಎಂದರು.

ಜಾತಿ ಪದ್ಧತಿಯನ್ನು ಹೋಗಲಾಡಿಸಿ ಸಮಾನ ಸಮಾಜವನ್ನು ನಿರ್ಮಿಸಲು ಅಂತರ್ಜಾತಿ ವಿವಾಹಗಳ ಮೂಲಕ ಕಲ್ಯಾಣ ಕ್ರಾಂತಿಯನ್ನುಂಟು ಮಾಡಿದರು. ಬಸವಣ್ಣ ರವರ ವಚನದಲ್ಲಿರುವ ಸಪ್ತಸೂತ್ರವನ್ನು ಜನರು ಅಳವಡಿಸಿಕೊಂಡು ಇಂತಹ ಮಹಾನ್ ವ್ಯಕ್ತಿಯ ವಚನಗಳನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.

ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

ಮಹಾಕ್ರಾಂತಿ ಮಾಡಿದ ವಿಶ್ವ ನಾಯಕ ಬಸವಣ್ಣ: ಚನ್ನಕೇಶವನಾಗಮಂಗಲ:ಜನರಲ್ಲಿದ್ದ ಅಸಮಾನತೆ ಹೋಗಲಾಡಿಸಲು 12ನೇ ಶತಮಾನದಲ್ಲಿಯೇ ಮಹಾ ಕ್ರಾಂತಿ ಮಾಡಿದ ವಿಶ್ವ ನಾಯಕ ಬಸವಣ್ಣ ಎಂದು ಐಟಿಐ ಕಾಲೇಜಿನ ಅಧಿಕಾರಿ ಚನ್ನಕೇಶವ ಹೇಳಿದರು.

ಪಟ್ಟಣದ ಹೊರವಲಯ ದೇವಲಾಪುರ ಹ್ಯಾಂಡ್ ಪೋಸ್ಟ್ ಬಳಿ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶನಿವಾರ ನಡೆದ ವಿಶ್ವಗುರು ಸಾಂಸ್ಕೃತಿಕ ರಾಯಭಾರಿ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಸವಣ್ಣ ಅವರು ಅನೇಕ ದುರ್ಬಲ ವರ್ಗದವರಿಗೆ ನಾಯಕತ್ವ ನೀಡಿದ್ದರು. ಬಸವಣ್ಣ ಅವರ ತತ್ವ, ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಸಾಧನೆಯ ಗುರಿಯೊಂದಿಗೆ ಶಿಕ್ಷಣ ಪಡೆಯಬೇಕು ಎಂದರು.

ಈ ವೇಳೆ ಸಂಸ್ಥೆ ತರಬೇತಿ ಅಧಿಕಾರಿ ಕರುಣಾ ವಿರಕ್ತಿ ಮಠ, ಕಿರಿಯ ತರಬೇತಿ ಅಧಿಕಾರಿಗಳಾದ ಕೆ.ಪಿ.ಚಾಮರಾಜು, ಜಿ. ಬೊಮ್ಮನಹಳ್ಳಿ ವಿಜಯಕುಮಾರ್, ವಸಂತ್ ಕುಮಾರ್ ರಾಘವೇಂದ್ರ, ತಮ್ಮಣ್ಣ ಗೌಡ, ಸುಪ್ರಿಯಾ ಗೌಡ, ಮೇಘಶ್ರೀ, ಎಸ್.ಎಂ.ಇ. ಮೋಹನ್, ನಾಗರಾಜು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ