ಕನ್ನಡಪ್ರಭ ವಾರ್ತೆ ಗದಗ
ನಗರದ ತೋಂಟಾದರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2817ನೇ ಶಿವಾನುಭವದ ಸಮ್ಮುಖವನ್ನು ವಹಿಸಿ ಮಾತನಾಡಿದ ಅವರು, ದೇಹದಲ್ಲಿ ಹೃದಯದ ಬಡಿತ ಚೆನ್ನಾಗಿದ್ದರೆ, ನಮ್ಮ ಬದುಕು ಚೆನ್ನಾಗಿರುತ್ತದೆ. ಹೃದಯದ ಆರೋಗ್ಯ ಕಾಯ್ದುಕೊಳ್ಳಲು ಇಂದಿನ ಒತ್ತಡದ ಕಾಲದ ಮಧ್ಯೆಯು ಬಿಡುವು ಮಾಡಿಕೊಂಡು ವ್ಯಾಯಾಮ, ಆಧ್ಯಾತ್ಮ, ಉತ್ತಮ ಆರೋಗ್ಯ ಪೂರ್ಣ ಆಹಾರ, ಉತ್ತಮ ಜೀವನಶೈಲಿಯನ್ನು ಹೊಂದಿ ಬದುಕಬೇಕೆಂದರು.
ಪ್ರತಿ ಮನೆಯಲ್ಲಿಯ ಅಡುಗೆಮನೆಯು ಔಷಧಾಲಯವಿದ್ದಂತೆ ಇರಬೇಕು. ನಾವು ಮಾಡುವ ಊಟವೇ ಔಷಧವಾಗಬೇಕೇ ಹೊರತು ಔಷಧಗಳನ್ನು ಆಹಾರದಂತೆ ಸೇವಿಸಬಾರದು. ಡಾ. ಆನಂದ ಪಾಂಡುರಂಗಿ ಅವರು ಶ್ರೀಮಠದ ಪರಮಭಕ್ತರಾಗಿದ್ದರು. ಜಾತ್ರೆಯಾದಿಯಾಗಿ ಮಠದ ಯಾವುದೇ ಕಾರ್ಯಕ್ರಮಗಳಲ್ಲಿ ತ್ರಿಕರಣಪೂರ್ವಕವಾಗಿ ಒಳಗೊಳ್ಳುತ್ತಿದ್ದರು. ಅವರು ತಮ್ಮಲ್ಲಿ ಬರುವ ರೋಗಿಗಳ ಮನಸ್ಸಿನೊಂದಿಗೆ ಮಾತನಾಡಿ ಔಷಧವಿಲ್ಲದೆ ಗುಣಮುಖರನ್ನಾಗಿ ಮಾಡುವ ಮಾಂತ್ರಿಕ ಶಕ್ತಿ ಅವರಲ್ಲಿತ್ತು. ಅವರ ಅಗಲುವಿಕೆ ವೈದ್ಯಲೋಕಕ್ಕೆ ತುಂಬಲಾರದ ನಷ್ಟವೆಂದರು.ಪ್ರಾಧ್ಯಾಪಕ ಡಾ. ಶಂಭು ಪುರದ ಮಾತನಾಡಿ, ಹೃದಯದ ಸಂರಕ್ಷಣೆ, ಕಾರ್ಯ, ನಮ್ಮ ಕೆಟ್ಟ ಜೀವನ ಶೈಲಿಯಿಂದ ಹೃದಯಕ್ಕೆ ಉಂಟಾಗುವ ಹಾನಿ, ಅದರ ರಕ್ಷಣೆಯ ಕುರಿತು ವಿಡಿಯೋ ಮೂಲಕ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.
ಈ ವೇಳೆ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಚನ್ನಬಸಪ್ಪ ಐಲಿ ಅವರನ್ನ ಸನ್ಮಾನಿಸಿ, ಗೌರವಿಸಲಾಯಿತು. ಬಸವದಳದ ಮಾಜಿ ಅಧ್ಯಕ್ಷ ವಿ.ಕೆ. ಕರಿಗೌಡರ, ಬಸವ ಸಮುದಾಯ ಭವನದ ಕಟ್ಟಡ ಸಮಿತಿ ಅಧ್ಯಕ್ಷ ಎಂ.ಬಿ. ಲಿಂಗದಾಳ, ಬಸವದಳದ ನೂತನ ಅಧ್ಯಕ್ಷ ಪ್ರಕಾಶ ಅಸುಂಡಿ ಅವರನ್ನು ಪೂಜ್ಯರು ಸನ್ಮಾನಿಸಿದರು. ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಅಭಿಷೇಕ್ ಹುಬ್ಬಳ್ಳಿ, ವಚನ ಚಿಂತನ ಚಂದನ ಬಳಿಗೇರ ನೆರವೇರಿಸಿದರು. ದಾಸೋಹ ಸೇವೆಯನ್ನು ಕೆವಿಎಸ್ಆರ್ ಕಾಲೇಜಿನ ನಿವೃತ್ತ ಪ್ರಾ. ವಿ.ಎಸ್. ದಲಾಲಿ ಕೈಗೊಂಡಿದ್ದರು.