ಕನ್ನಡಪ್ರಭ ವಾರ್ತೆ ರಾಮನಾಥಪುರ
ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ. ದಿ. ಗೌರಮ್ಮ ಪುಟ್ಟಸೋಮಪ್ಪ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಶಾಲಾ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುತ್ತೂರು ಮಠದ ಹಿಂದಿನ ಜಗದ್ಗುರುಗಳು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಹುಟ್ಟು ಹಾಕಿದ ಪಿತಾಮಹರು. ಅವರು ಹುಟ್ಟುಹಾಕಿದ ಪರಿಷತ್ತು ದೇಶ ವಿದೇಶಗಳಲ್ಲಿಯೂ ಉತ್ತಮ ಕಾರ್ಯ ನಿರ್ವಹಿಸಿಕೊಂಡು ಬರಲು ಕಾರಣಿಭೂತರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ತಾಲೂಕು ಅಧ್ಯಕ್ಷರು ಅಮೃತೇಶ್, ಸಾಹಿತಿ ಕೆ.ಎನ್. ರವಿಕುಮಾರ್ ಹಾಗೂ ಸಂತೋಷ್ ಕುಮಾರ್, ಪದಾಧಿಕಾರಿಗಳು ಭಾಗವಹಿಸಿದ್ದರು. ಶಿಕ್ಷಕಿ ಆರ್.ಎಸ್. ಸುಬ್ಬಲಕ್ಷಿ, ಸ್ವಾಗತಿಸಿ, ಡಿ.ಎಚ್. ಗೀತಾ ವಂದಿಸಿದರು.