ಆದರ್ಶಗಳನ್ನು ಮೈಗೂಡಿಸಿಕೊಂಡು ಶ್ರೇಷ್ಠ ವ್ಯಕ್ತಿಗಳಾಗಿ

KannadaprabhaNewsNetwork |  
Published : Feb 25, 2026, 03:15 AM IST
ಮುದ್ದೇಬಿಹಾಳ | Kannada Prabha

ಸಾರಾಂಶ

ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಭಯಕ್ಕೆ ಒಳಗಾಗದೇ ವಿದ್ಯಾರ್ಥಿ ಜೀವನದಲ್ಲೇ ಗುಣಮಟ್ಟ ಶಿಕ್ಷಣ ಪಡೆದುಕೊಳ್ಳುವ ಮೂಲಕ ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳುವುದರ ಜತೆಗೆ ದೇಶಕ್ಕೆ ಹಾಗೂ ಹೆತ್ತವರ, ಗುರುಗಳ ಶಾಲೆಯ ಕೀರ್ತಿ ತರುವಂತವರಾಗಬೇಕು ಎಂದು ಬಿ.ಎ.ಎಸ್‌.ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮಹಾಂತಗೌಡ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಭಯಕ್ಕೆ ಒಳಗಾಗದೇ ವಿದ್ಯಾರ್ಥಿ ಜೀವನದಲ್ಲೇ ಗುಣಮಟ್ಟ ಶಿಕ್ಷಣ ಪಡೆದುಕೊಳ್ಳುವ ಮೂಲಕ ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳುವುದರ ಜತೆಗೆ ದೇಶಕ್ಕೆ ಹಾಗೂ ಹೆತ್ತವರ, ಗುರುಗಳ ಶಾಲೆಯ ಕೀರ್ತಿ ತರುವಂತವರಾಗಬೇಕು ಎಂದು ಬಿ.ಎ.ಎಸ್‌.ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮಹಾಂತಗೌಡ ಬಿರಾದಾರ ಹೇಳಿದರು.ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿ.ಎ.ಎಸ್‌.ಅಂತಾರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಿಎಎಸ್‌ ಟ್ಯಾಲೆಂಟ್‌ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಈ ಬಾರಿಯ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 1080 ವಿದ್ಯಾರ್ಥಿಗಳ ಪೈಕಿ 804 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಈ ಪರೀಕ್ಷೆಯಲ್ಲಿ ತರಗತಿಯೊಂದಕ್ಕೆ 40 ವಿದ್ಯಾರ್ಥಿಗಳಂತೆ 240 ವಿದ್ಯಾರ್ಥಿಗಳು ಅಂಕಗಳಿಕೆ ಆಧಾರ ಮೇಲೆ ಶುಲ್ಕದಲ್ಲಿ ರಿಯಾಯತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ಯುವ ಪೀಳಿಗೆ ಮೊಬೈಲ್ ಗೀಳಿಗೆ ಒಳಗಾಗಿ ವ್ಯರ್ಥ ಸಮಯ ಹಾಳು ಮಾಡಿಕೊಳ್ಳದೇ ಹೆಚ್ಚು ಶಿಕ್ಷಣದ ಬಗ್ಗೆ ಆಸಕ್ತಿ ತೊರಬೇಕು. ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಆದರೆ, ಯಾವುದು ಒಳ್ಳೆಯದು? ಯಾವುದು ಕೆಟ್ಟದ್ದು ಎಂಬುವುದನ್ನು ಅರಿತು ಜಾಗೃತದಿಂದ ಉಪಯೋಗಿಸಬೇಕು. ಇಂದಿನ ತಮ್ಮ ಕಠಿಣ ಪರಿಶ್ರಮ ಮುಂದೊಂದು ದಿನ ತಮ್ಮ ಬದುಕಿನ ಅರ್ಥ ತಿಳಿಸುತ್ತದೆ. ವಿದ್ಯಾರ್ಥಿಗಳು ಇಂದಿನಿಂದಲೇ ಶ್ರಮ ವಹಿಸಿ ಕಲಿತರೇ ಜೀವನ ಎಂಬ ಪರೀಕ್ಷೆಯಲ್ಲಿ ಶ್ರಮಪಡುವ ಅನಿವಾರ್ಯತೆ ಇರುವುದಿಲ್ಲ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಮಾತನಾಡಿ, ಬಿಎಎಸ್ ಶಾಲೆಯೂ 8 ಎಕರೆ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಸಕಲ ಸೌಲಭ್ಯಗಳನ್ನು ಹೊಂದಿದೆ. ಕಳೆದ ವರ್ಷ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ ಈ ವರ್ಷ ಸಂಖ್ಯೆ ನೂರು ಹೆಚ್ಚಾಗಿದೆ ಎಂದರು.ರಾಯಚೂರಿನ ನವೋದಯ ತರಬೇತಿದಾರ ಅಮರೇಶ ಪಾಟೀಲ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ತಾಳ್ಮೆ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಪಾಲಕರು ಬೆಳೆಸಬೇಕಿದೆ. ಪಾಲಕರು ಒತ್ತಡಕ್ಕೊಳಗಾಗದೇ ಮಕ್ಕಳನ್ನು ಬೆಳೆಸಬೇಕು. ಅಂಕಗಳಿಕೆಗಷ್ಟೇ ಮಕ್ಕಳನ್ನು ಸಿಮೀತಗೊಳಿಸದೇ ಇನ್ನುಳಿದ ಚಟುವಟಿಕೆಗಳಲ್ಲೂ ಕೂಡಾ ಸಕ್ರಿಯರನ್ನಾಗಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು ಮಾತನಾಡಿ, ಇಂದಿನ ಯುವ ಪೀಳಿಗೆ ಮೊಬೈಲ್ ಗೀಳಿಗೆ ಒಳಗಾಗಿದೆ. ತಂದೆ-ತಾಯಿಯಂದಿರು ಉತ್ತಮ ಭವಿಷ್ಯ ಕಟ್ಟುವ ನಿಟ್ಟಿನಲ್ಲಿ ಯೋಚಿಸುತ್ತಿರುತ್ತಾರೆ. ಗುಣಮಟ್ಟದ ಶಿಕ್ಷಣ ಬಹಳ ಮುಖ್ಯ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮೆಡಲ್‌ಗಳನ್ನು ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್, ಸಂಸ್ಥೆಯ ನಿರ್ದೇಶಕರಾದ ಗೀತಾ ಬಿರಾದಾರ, ಸುಮಂಗಲಾ ಬಿರಾದಾರ, ಮಾರ್ಗದರ್ಶಕ ಶಿವನಗೌಡ ಬಿರಾದಾರ, ಪ್ರಾಚಾರ್ಯೆ ರಷಿಕಾ ನಾಯಕ ಸೇರಿದಂತೆ ಶಿಕ್ಷಕ ವೃಂದ, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ವಿನಯ ಪಾಟೀಲ ಸ್ವಾಗತಿಸಿದರು. ರಾಜಮಾ ಕಂದಗಲ್ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕು. ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಇತಿಹಾಸ ಅರಿಯುವ ಕೆಲಸವನ್ನು ಮಾಡಬೇಕು. ಸಮಾಜ ಬದಲಿಸುವ ಶಕ್ತಿ ವಿದ್ಯಾರ್ಥಿಗಳಿಗೆ ಇದೆ. ಯಶಸ್ವಿ ಎರಡನೇ ವರ್ಷ ಬಿ.ಎ.ಎಸ್‌ ಟ್ಯಾಲೆಂಟ್‌ ಅವಾರ್ಡ್‌ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಜ್ಞಾನ ಪ್ರತಿಭೆ ಪ್ರದರ್ಶಿಸಿದ್ದಾರೆ.

-ಮಹಾಂತಗೌಡ ಬಿರಾದಾರ, ಬಿ.ಎ.ಎಸ್‌.ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು.

ಕಲಿಕೆಗೆ ಪೂರಕವಾದ ವಾತವರಣದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಪ್ರಥಮ ಆದ್ಯತೆಯಾಗಿದ್ದು, ಪಾಲಕರ ವಿಶ್ವಾಸ ಉಳಿಸಿಕೊಳ್ಳಲಿದೆ.

-ಪ್ರಭುಗೌಡ ಬಿರಾದಾರ, ಸಂಸ್ಥೆಯ ಆಡಳಿತಾಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಯಶಸ್ಸು ನೆತ್ತಿಗೆರಬಾರದು