- ಉಪ ಕೃಷಿ ನಿರ್ದೇಶಕರ ಕಚೇರಿ- ರೈತ ತರಬೇತಿ ಕೇಂದ್ರ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶುಕ್ರವಾರ ಪಟ್ಟಣದ ಹೊರವಲಯದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಉಪ ಕೃಷಿ ನಿರ್ದೇಶಕರ ಕಚೇರಿ ಹಾಗೂ ರೈತ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿಗೆ ರೈತರು ಒಂದೇ ಬೆಳೆಯನ್ನು ಬೆಳೆಯಲು ಮುಂದಾಗಿದ್ದಾರೆ. ಇದು ಭವಿಷ್ಯತ್ತಿನಲ್ಲಿ ರೈತರು ತೊಂದರೆಗೆ ಒಳಗಾಗಬಹುದು. ಆದ್ದರಿಂದ ಮಿಶ್ರಬೆಳೆಗೆ ರೈತರು ಆದ್ಯತೆ ನೀಡಲಿ ಎಂದರು.
ಇವತ್ತು ಅಡಕೆಗೆ ಹೆಚ್ಚು ಬೆಲೆ ಇದೆ ಎಂದು ಎಲ್ಲರೂ ಅಡಕೆ ಬೆಳೆಗೆ ಮುಂದಾಗುತ್ತಿದ್ದಾರೆ. ಆದರೆ, ಅಡಕೆಗೆ ಇವತ್ತಿನ ಬೆಲೆಯೇ ಸ್ಥಿರವಾಗಿರುತ್ತದೆ ಎಂದು ಗ್ಯಾರಂಟಿ ಇಲ್ಲ. ಅದನ್ನು ರೈತರಿಗೆ ಅಧಿಕಾರಿಗಳು ಮನದಟ್ಟು ಮಾಡಿಕೊಡಬೇಕು ಎಂದ ಅವರು, ರೈತರು ಕೃಷಿಯಿಂದ ವಿಮುಖರಾಗದಂತೆ ನೋಡಿಕೊಳ್ಳುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಕರ್ತವ್ಯ ಮೆರೆಯಬೇಕು ಎಂದರು.ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ನೂತನ ಕಚೇರಿಯಲ್ಲಿ ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ಮೂರು ತಾಲೂಕಿನ ರೈತರಿಗೆ ಯಾವ ಬೆಳೆಗಳನ್ನು ಬೆಳೆದರೆ ಎಷ್ಟು ಆದಾಯ ಸಿಗುತ್ತದೆ, ಅದರ ಸಾಧಕ ಬಾಧಕಗಳ ಬಗ್ಗೆ ಸಂಪೂರ್ಣ ತರಬೇತಿ ನೀಡಿದರೆ ರೈತರು ಕೃಷಿಯಲ್ಲಿ ಆದಾಯ ನೋಡುತ್ತಾರೆ. ಇಲ್ಲದಿದ್ದರೆ ಬೆಳೆ ನಷ್ಟ ಎಂದು ಆಕಾಶದತ್ತ ಮುಖ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಕೃಷಿ ಉಪನಿರ್ದೇಶಕ ರೇವಣ್ಣಸಿದ್ದನಗೌಡ ಮಾತನಾಡಿ, ನೂತನ ಕಚೇರಿಯಲ್ಲಿ ನಿತ್ಯ ತರಬೇತಿ ಕೊಡಲು ನಾವು ಸಿದ್ಧರಾಗಿದ್ದೇವೆ. ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಎಲ್ಲ ಆಸಕ್ತ ರೈತರಿಗೆ ತರಬೇತಿ ನೀಡುತ್ತೇವೆ. ಪ್ರಗತಿಪರ ರೈತರನ್ನು ಕರೆಸಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಗಳಿಸುವ ಬಗ್ಗೆಯೂ ತಿಳಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತೇವೆ ಎಂದರು.
- - - -8ಎಚ್.ಎಲ್,ಐ2: