ಕನ್ನಡಪ್ರಭ ವಾರ್ತೆ ಕೋಲಾರಹೈನುಗಾರಿಕೆಯು ನಮ್ಮ ಕಸುಬಾಗಿದ್ದು, ಅದರಿಂದಾಗಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಹೈನುಗಾರಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ಸಲುವಾಗಿ ಶುದ್ಧ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಿ ಎಂದು ಕೋಮುಲ್ ನಿರ್ದೇಶಕಿ ಕಾಂತಮ್ಮ ಸೋಮಣ್ಣ ಹೇಳಿದರು.ನಗರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆಯಿಂದ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಉತ್ಪಾದನೆ ಹೆಚ್ಚಿಸಲು ಪಣ
ತರಬೇತಿ ಕಾರ್ಯಾಗಾರದಿಂದ ಸಾಕಷ್ಟು ಅನುಕೂಲತೆಗಳಿವೆ. ಅವುಗಳನ್ನು ಅಳವಡಿಸಿಕೊಂಡರೆ ಸಂಘಗಳೂ ಉತ್ತಮವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು, ಗುಣಮಟ್ಡದ ಹಾಲು ನೀಡುವ ಶಪಥ ಮಾಡಿದರೆ ಎಲ್ಲರಿಗೂ ಅನುಕೂಲ ಎಂದು ಹೇಳಿದರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಡಿ.ಆರ್.ರಾಮಚಂದ್ರೇ ಗೌಡ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಮೂರಾಂಡಹಳ್ಳಿ ಡಾ.ಇ.ಗೋಪಾಲಪ್ಪ, ಪೆಮ್ಮಶೆಟ್ಟಿಹಳ್ಳಿ ಸುರೇಶ್, ಪಿ.ಎಂ.ವೆಂಕಟೇಶ್, ಎಸ್.ವಿ.ಗೋವರ್ಧನರೆಡ್ಡಿ, ಎನ್.ನಾಗರಾಜ್, ವಿ.ರಘುಪತಿರೆಡ್ಡಿ, ಶಂಕರನಾರಾಯಣಗೌಡ ಎನ್, ಕೆ.ಎಂ.ಮಂಜುನಾಥ್, ವಿ.ಪಾಪಣ್ಣ, ಕೆ.ಎಂ.ವೆಂಕಟೇಶಪ್ಪ, ಶೇಖ್ ಮಹಮದ್, ಕೋಲಾರ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಚೇತನ್ ಎಂ.ಪಿ, ಉಪ ವ್ಯವಸ್ಥಾಪಕಿ ಸ್ಟೆಫ್ ವಿಭಾಗದ ವಿಜಯಲಕ್ಷ್ಮಿ.ಆರ್, ನಳಿನಿ, ಮಂಜುನಾಥಯ್ಯ, ಒಕ್ಕೂಟದ ಸಿಇಒ ಕೆ.ಎಂ.ಭಾರತಿ ಇದ್ದರು.