ಕನ್ನಡಪ್ರಭ ವಾರ್ತೆ ಮದ್ದೂರು
ನಗರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ 2026-27ನೇ ಆಯವ್ಯಯ (ಬಜೆಟ್) ಕುರಿತಾಗಿ ಸ್ಥಳೀಯ ಸಾರ್ವಜನಿಕರು, ಸಂಘ-ಸಂಸ್ಥೆ ಪದಾಧಿಕಾರಿಗಳು, ಮಾಜಿ ಸದಸ್ಯರು ಮತ್ತು ಅಧಿಕಾರಿಗಳ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದ ರಾಂರಹೀಂ ನಗರ, ಚನ್ನೇಗೌಡ ಬಡಾವಣೆ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಆಸ್ತಿ ತೆರಿಗೆ ನಿರ್ಧರಣಾ ಪಟ್ಟಿ ಪ್ರಕಟ ಸಂಬಂಧ ಅಗತ್ಯ ಕ್ರಮ ವಹಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಕರೆದು ಚರ್ಚಿಸುವುದಾಗಿ ಹೇಳಿದರು.ಪಟ್ಟಣದ ರಾಂ ರಹೀಂ ನಗರ, ಚನ್ನೇಗೌಡ ಬಡಾವಣೆ ಇನ್ನಿತರೆ ಸ್ಥಳಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಕಂದಾಯ ನಿಗಧಿಗೆ ಕ್ರಮ, ಮೂಲ ಸೌಲಭ್ಯ ಕಲ್ಪಿಸುವ ಮೂಲಕ ನಗರಸಭೆಗೆ ಹೆಚ್ಚಿನ ಆದಾಯದ ಮೂಲ ದೊರಕಿಸಬೇಕು ಎಂದು ಮಾಜಿ ಉಪಾಧ್ಯಕ್ಷ ಮುನ್ಸೂರ್‌ಖಾನ್ ಸಭೆಗೆ ತಿಳಿಸಿದರು.
ನಗರಸಭೆ ಮಾಜಿ ಸದಸ್ಯ ಎಸ್.ಮಹೇಶ್ ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ಪುರಸಭೆಯಿಂದ ಪ್ರತಿ ವರ್ಷದ ಆಯವ್ಯಯ ಮಂಡನೆಯಲ್ಲಿ ಸಾರ್ವಜನಿಕರು, ಸದಸ್ಯರಿಂದ ಸಂಗ್ರಹಿಸುವ ಅಭಿಪ್ರಾಯಗಳು ಕೇವಲ ಕಾಗದಕಷ್ಟೇ ಮೀಸಲಾಗಿ ಯಾವುದೇ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೊಪಿಸಿದರು.ಈ ವೇಳೆ ಡೀಸಿ ಡಾ.ಕುಮಾರ್ ಮಾತನಾಡಿ, ನಗರಸಭೆ ವ್ಯಾಪ್ತಿ ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಕಾರ್ಯ ಯೋಜನೆ ಸಿದ್ಧಗೊಂಡಿದೆ. ಶಾಸಕ ಕೆ.ಎಂ.ಉದಯ್ ಶ್ರಮದಿಂದ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ ಎಂದರು.
ಪಟ್ಟಣ ವ್ಯಾಪ್ತಿಯ ಸಾರ್ವಜನಿಕ ಸ್ಮಶಾನಗಳ ಅಭಿವೃದ್ಧಿ, ಕೋಳಿ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯ ಸಮರ್ಪಕ ವಿಲೇವಾರಿ, ಒಳ ಚರಂಡಿ ಅವ್ಯವಸ್ಥೆ, ನಗರಸಭೆಗೆ ಆದಾಯದ ಮೂಲ ಹೆಚ್ಚಿಸುವ ಕಾರ್ಯಗಳ ನಿಯೋಜನೆ ಇನ್ನಿತರೆ ವಿಚಾರವಾಗಿ ಸಾರ್ವಜನಿಕರು ಸಲಹೆ ಸೂಚನೆ ನೀಡಿದರು.ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಮಹಮ್ಮದ್‌ಸಾಲಾರ್, ಸುರೇಶ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸದಸ್ಯರಾದ ಎಸ್.ಮಹೇಶ್, ಕಮಲ್‌ನಾಥ್, ಸಿದ್ದರಾಜು, ಮರಿದೇವರು, ಬಸವರಾಜು, ಮನೋಜ್, ಮನ್ಸೂರ್ ಅಲಿಖಾನ್, ಡಿ.ಎಸ್.ಎಸ್ ಜಿಲ್ಲಾಧ್ಯಕ್ಷ ಆನಂದ್, ವಿಶ್ವಕರ್ಮ ಸಂಘಟನೆ ತಾಲೂಕು ಅಧ್ಯಕ್ಷ ಮಹೇಶ್ ಇತರರು ತಮ್ಮ ಸಲಹೆ ನೀಡಿದರು.
ಜಿಲ್ಲಾ ಯೋಜನಾಧಿಕಾರಿ ನರಸಿಂಹಮೂರ್ತಿ, ನಗರಸಭೆ ಆಯುಕ್ತೆ ಎನ್.ಎಸ್.ರಾಧಿಕಾ, ಪರಿಸರ ಅಭಿಯಂತರೆ ಅರ್ಚನಾ, ಎಇಇ ರಾಜೇಶ್, ಕಂದಾಯ ಅಧಿಕಾರಿ ಪುಟ್ಟಸ್ವಾಮಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಸಭೆ ವೇಳೆ ಉಪಸ್ಥಿತರಿದ್ದರು.