ಕನ್ನಡಪ್ರಭ ವಾರ್ತೆ ಮಂಡ್ಯ
ಯುವ ಜನರು ತಮ್ಮ ಕನಸಿನ ಉದ್ಯೋಗ ಪಡೆಯಲು ಗುರಿ ನಿಗದಿಪಡಿಸಿಕೊಂಡು ಕಾರ್ಯೋನ್ಮುಖರಾಗಬೇಕು. ಉದ್ಯೋಗ ವಿವಿಧ ನಿದರ್ಶನಗಳನ್ನು ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಅರ್ಜಿ ಆಹ್ವಾನಿಸಿದಾಗ ತಮ್ಮ ಸ್ವ-ಸಾಮರ್ಥ್ಯವನ್ನು ಅರ್ಥೈಸಿಕೊಂಡು ಉದ್ಯೋಗ ಪಡೆಯಬೇಕು ಎಂದರು.
ಉದ್ಯೋಗ ಪಡೆಯಲು ಪರಿಣಾಮಕಾರಿ ಸಂವಹನ ಕೌಶಲ್ಯ ಹೊಂದುವುದು ಅವಶ್ಯಕ. ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಮಾರ್ಗದರ್ಶನ ಅವಶ್ಯಕತೆ ಇದ್ದು, ಹೀಗಾಗಿ ಕಾರ್‍ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಪರಂಪರೆಯ ಮಾರ್ಗದರ್ಶಿಗಳಾಗಿರುವ ಯುವಕ ಯುವತಿಯರು ಭವಿಷ್ಯದ ಜೀವನ ಸುಧಾರಿಸಿಕೊಳ್ಳಲು ಆಧಾಯೋತ್ಪನ್ನ ಚಟುವಟಿಕೆಗಳತ್ತ ಗಮನ ಹರಿಸುವುದು ಸೂಕ್ತವಾಗಿದೆ ಎಂದರು.
ಶಿಕ್ಷಣವನ್ನು ಕೇವಲ ಸರ್ಕಾರಿ ಉದ್ಯೋಗಷ್ಟೇ ಸೀಮಿತಗೊಳಿಸದೆ ದೈನಂದಿನ ಬದುಕಿಗೆ ಅವಶ್ಯವಿರುವ ಜ್ಞಾನಕ್ಕಾಗಿ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅವಶ್ಯಕತೆ ಇದೆ. ಇದನ್ನು ಅರ್ಥೈಸಿಕೊಂಡು ಸ್ವಾವಲಂಭಿ ಜೀವನ ನಡೆಸಬೇಕು ಎಂದರು.ಬ್ಯಾಂಕ್ ಆಫ್ ಬರೋಡಾ ಆರ್ಥಿಕ ಸಮಾಲೋಚಕಿ ಕೆ.ಪಿ.ಅರುಣಕುಮಾರಿ ಮಾತನಾಡಿದರು. ಪ್ರಾಧ್ಯಾಪಕ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.