ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಬ್ಲಾಕ್ ಬಿಜೆಪಿ ವತಿಯಿಂದ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಕ್ತಿ ವಂದನ ಅಭಿಯಾನ-2024 ಕಾರ್ಯಕ್ರಮಕ್ಕೆ ಭಾರತ ಮಾತೆಗೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರು ಮಹಿಳೆಯರ ಸಲೀಕರಣಕ್ಕಾಗಿ ಹಾಗೂ ಮಹಿಳೆಯರ ಏಳಿಗೆಗಾಗಿ, ಆರ್ಥಿಕವಾಗಿ ಮಹಿಳೆಯರನ್ನು ಸದೃಢಗೊಳಿಸಲು ನೀಡಿದ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರಲ್ಲದೆ, ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆ ತಲುಪಿಸಿ ಅವುಗಳ ಬಗ್ಗೆ ಅರಿವೂ ಮೂಡಿಸಬೇಕೆಂದರು.ಜಿಲ್ಲಾ ಸಂಚಾಲಕಿ ಅನಿತಾ ಸರೋದೆ ಹಾಗೂ ರಾಜ್ಯ ಪದಾಧಿಕಾರಿ ಭಾಗೀರಥಿ ಪಾಟೀಲ ಮಾತನಾಡಿ, ದೇಶವು ಸರ್ವತೋನ್ಮುಖ ಅಭಿವೃದ್ಧಿಯತ್ತ ಸಾಗಲು ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ದೇಶದ ಸುಭದ್ರತೆ ಕಾಪಾಡುವ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವ ರಾಜಕಾರಿಣಿಗಳನ್ನು ಆರಿಸಿ ತರುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಅಭಿಯಾನ ಸಹಸಂಚಾಲಕ ಶಿವಲೀಲಾ ಪಟ್ಟಣಶೆಟ್ಟಿ ನಿರೂಪಿಸಿದರು. ಅಭಿಯಾನ ಸಂಚಾಲಕಿ ಶಶಿಕಲಾ ಮಜ್ಜಗಿ ಸ್ವಾಗತಿಸಿದರು. ಮಂಡಲ ಕಾರ್ಯದರ್ಶಿ ಜಯಶ್ರೀ ಏಕಬೋಟೆ ವಂದಿಸಿದರು.