ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ವತಿಯಿಂದ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಶಿವಮೊಗ್ಗ ನಗರದ ವಿವಿಧ ಬಿ.ಎಡ್. ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಗಮಕ ವಾಚನ ವ್ಯಾಖ್ಯಾನ ಕಲಿಕಾ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಗಮಕ ಅತ್ಯಂತ ಶ್ರೀಮಂತ ಕಲೆ. ಲಲಿತ ಕಲೆಗಳ ಅಭ್ಯಾಸದಿಂದ ನಮ್ಮ ಬದುಕಿನಲ್ಲಿ ಉತ್ತಮ ವ್ಯಕ್ತಿತ್ವ ಶ್ರೀಮಂತಿಕೆ ಸಾಧ್ಯ. ಅಂತಹ ಕಲೆಗಳ ಇತಿಹಾಸದ ಅರಿವು ಯುವ ಸಮೂಹಕ್ಕೆ ಬೇಕಿದೆ. ಇತಿಹಾಸವನ್ನು ಸಮರ್ಥವಾಗಿ ಅರಿತಾಗ ಮಾತ್ರ ಮುಂದಿನ ಭವಿಷ್ಯ ಕಟ್ಟಲು ಸಾಧ್ಯವಾಗಲಿದ್ದು ಕಲೆಗಳು ಸಂಸ್ಕಾರ ಕಲಿಸುವ ಸತ್ವ ನೀಡುತ್ತದೆ ಎಂದು ಹೇಳಿದರು.ಶಿಕ್ಷಣ ಕಲಿಸುವ ಶಿಕ್ಷಕರಿಗೆ ಎಲ್ಲಾ ಪ್ರಕಾರಗಳ ಕಲಿಕೆ ಅತ್ಯಗತ್ಯ. ಸಂವಹನ ಎಂಬುದು ಬದುಕಿನ ಒಂದು ದೊಡ್ಡ ಕಲೆ. ಒಳ್ಳೆಯ ಸಂವಹನ ಹೊಂದಿದ ಶಿಕ್ಷಕ ಮಾತ್ರ ವಿದ್ಯಾರ್ಥಿಗಳ ಮೆಚ್ಚಿನ ಗುರುವಾಗುತ್ತಾರೆ. ತಿಳುವಳಿಕೆ ಬಹಳ ಮುಖ್ಯವಲ್ಲ ತಿಳಿವಳಿಕೆಗಿಂತ ನಡವಳಿಕೆ ಬಹಳ ಮುಖ್ಯ ಎಂದರು.
ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಎನ್.ಕೆ. ಚಿದಾನಂದ ಮಾತನಾಡಿ, ಅನೇಕ ಕಲೆಗಳು ಸರಿಯಾದ ದಾಖಲಿಕರಣಗೊಳ್ಳದೆ ನಶಿಸಿ ಹೋಗಿವೆ. ಸಂಗೀತ ಮತ್ತು ಕಲೆಯಿಂದ ಜ್ಞಾನದ ವರ್ಗಾವಣೆ ನಡೆದಿದ್ದು ಅದುವೇ ಪಂಚಮವೇದ. ಅಂತಹ ಜ್ಞಾನದ ಬೃಹತ್ ಕೋಶ ನೀಡುವ ಸಂಗೀತ ಕಲೆ ಸದಾ ನಮ್ಮಯ ಅಸ್ಮಿತೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಗಮಕ ಎಂದರೇನು? ಕುರಿತಾಗಿ ಎಂ.ಎನ್.ವಿನಾಯಕ, ವಾಚನ ವೈವಿಧ್ಯ ಕುರಿತು ಚಿತ್ರದುರ್ಗ ಚಂಪಕಾ ಶ್ರೀಧರ್, ವ್ಯಾಖ್ಯಾನ ವಿಶೇಷತೆ ಕುರಿತು ರಾಜಾರಾಮಮೂರ್ತಿ, ಗಮಕ ಕಲೆಯಲ್ಲಿ ಆಸಕ್ತಿ ಮೂಡಿಸುವುದು ಹೇಗೆ ಕುರಿತಾಗಿ ಕಲಾಶ್ರೀ ಗಣೇಶ ಉಡುಪ, ಗಮಕ ವಾಚನ ವ್ಯಾಖ್ಯಾನ ಕುರಿತು ಡಾ.ಸನತ್ ಕುಮಾರ್, ಕಲಾಶ್ರೀ ಗೋಪಾಲ ಮಾತನಾಡಿದರು.
-1ಎಸ್‌ಎಂಜಿಕೆಪಿ06: