ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದಲ್ಲಿರುವ ಶಿಥಿಲಗೊಂಡ ನೀರಿನ ಟ್ಯಾಂಕ್ ಅನ್ನು ಗ್ರಾಪಂನವರು ತೆರವುಗೊಳಿಸುವ ಮೂಲಕ ಜನತೆಯಲ್ಲಿದ್ದ ಆತಂಕ ಹೋಗಲಾಡಿಸಿದ್ದಾರೆ.
ಇದನ್ನು ಮನಗಂಡು ''''ಕನ್ನಡಪ್ರಭ'''' ಆ. 22ರಂದು ''''ನೀರಿನ ಟ್ಯಾಂಕ್ ಶಿಥಿಲ ಆತಂಕದಲ್ಲಿ ನಿವಾಸಿಗಳು'''' ಎಂಬ ತಲೆಬರಹದಡಿ ವರದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಆಡಳಿತ ಶನಿವಾರ ಬೆಳಗ್ಗೆ ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ.
ವರದಿಗೆ ಶ್ಲಾಘನೆ:ನಾವು ಅನೇಕ ಸಲ ಹೇಳಿದರೂ ಪಂಚಾಯಿತಿಯವರು ಕೇಳಿರಲಿಲ್ಲ. ''''ಕನ್ನಡಪ್ರಭ''''ದಲ್ಲಿ ಸುದ್ದಿ ಬಿತ್ತರವಾದ ನಂತರ ನೀರಿನ ಟ್ಯಾಂಕ್ ತೆರವುಗೊಳಿಸಿದ್ದಾರೆ. ಈಗ ನಮ್ಮಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ ಎಂದು ಕನ್ನಡಪ್ರಭಕ್ಕೆ ಧನ್ಯವಾದ ತಿಳಿಸಿದ್ದಾರೆ.
ತೆರವುಬಹು ದಿನಗಳ ಬೇಡಿಕೆಯಾಗಿದ್ದ ಶಿಥಿಲಾವಸ್ಥೆಯ ನೀರಿನ ಟ್ಯಾಂಕ್ ಮೊದಲೇ ತೆರವುಗೊಳಿಸಬೇಕಾಗಿತ್ತು. ಕೆಲ ಅನಿವಾರ್ಯ ಕಾರಣಗಳಿಂದ ಶನಿವಾರ ತೆರವು ಕಾರ್ಯ ಮಾಡುವ ಮೂಲಕ ಜನರಲ್ಲಿದ್ದ ಆತಂಕಕ್ಕೆ ತೆರೆ ಎಳೆಯಲಾಗಿದೆ.ಮಹೇಶ ಕಾಳಗಿ, ಅಧ್ಯಕ್ಷರು ಗ್ರಾಪಂ ದೋಟಿಹಾಳ.