ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹ । ಕಾಂಗ್ರೆಸ್ ತುಷ್ಟೀಕರಣ ನೀತಿಯಿಂದಾಗಿ ಮುಸ್ಲಿಮರ ಪುಂಡಾಟ ಹೆಚ್ಚಳ
ಕನ್ನಡಪ್ರಭ ವಾರ್ತೆ ಹೊನ್ನಾಳಿಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಶಿವಮೊಗ್ಗ ನಗರದ ರಾಗಿಗುಡ್ಡ ಪ್ರದೇಶದಲ್ಲಿ ಗಲಭೆ, ಅಶಾಂತಿ ಸೃಷ್ಟಿಸಿದ ಆರೋಪಿಗಳ ಕೇವಲ ಬಂಧಿಸಿದರೆ ಸಾಲದು ಅವರ ಎನ್‍ಕೌಂಟರ್ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ ಹಿಂದೂಗಳ ಜೀವಕ್ಕೆ ಬೆದರಿಕೆ ಒಡ್ಡಿದ್ದಲ್ಲದೆ ಶಿವಮೊಗ್ಗ ಎಸ್‌ಪಿಯವರ ಮೇಲೆ ಕಲ್ಲು ತೂರಲು ಯತ್ನಿಸಿದ ದೇಶ ದ್ರೋಹಿಗಳಿಗೆ ಎನ್‍ಕೌಂಟರ್ ಸರಿಯಾದ ಶಿಕ್ಷೆ ಎಂದು ಹೇಳಿದರು. ಪ್ರತಿ ಬಾರಿಯೂ ದೇಶದೆಲ್ಲೆಡೆ ಗಣೇಶ ವಿಸರ್ಜನೆ ವೇಳೆ ಲಕ್ಷಾಂತರ ಭಕ್ತರು ಸೇರಿ ಭವ್ಯ ಮೆರವಣಿಗೆಯಾದಾಗ ಚಿಕ್ಕ ಗಲಾಟೆಯೂ ಆಗುವುದಿಲ್ಲ ಆದರೆ ಮುಸ್ಲಿಮರು ಮೆರವಣಿಗೆ ಮಾಡುವಾಗ ಹಿಂದೂಗಳ ಟಾರ್ಗೆಟ್ ಮಾಡಿ ಗಲಾಟೆ ಉಂಟು ಮಾಡುವುದು ಇವರಿಗೆ ಪರಿಪಾಠವಾಗಿದೆ ಎಂದು ಮುಸ್ಲಿಂ ಪುಂಡರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಸಚಿವ ರಾಮಲಿಂಗಾರೆಡ್ಡಿ ಕ್ಷಮೆಯಾಚಿಸಲಿ:
ಶಿವಮೊಗ್ಗದ ರಾಗಿಗುಡ್ಡದ ಗಲಭೆಯಲ್ಲಿ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ, ಹಿಂದೂಗಳು ಎಂದು ದೊಂಬಿ, ಗಲಾಟೆಗೆ ಹೋಗುವವರಲ್ಲ, ಮುಸ್ಲಿಮರ ತುಷ್ಟೀಕರಣಕ್ಕಾಗಿ ಹಿಂದೂ ಸಮಾಜದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿರುವ ಸಚಿವ ರಾಮಲಿಂಗಾರೆಡ್ಡಿ ಕೂಡಲೇ ಹಿಂದೂ ಸಮಾಜದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.ಗಲಾಟೆಗೆ ಜಿಲ್ಲಾಡಳಿತ ನಿರ್ಲಕ್ಷ್ಯ ಕಾರಣ:
ಈದ್‌ಮಿಲಾದ್ ಮೆರವಣಿಗೆ ಸಂಚರಿಸುವ ಹಾದಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಬೇಕಿತ್ತು. ಮೆರವಣಿಗೆ ದಾರಿಯಲ್ಲಿ ಮತಾಂಧ ಟಿಪ್ಪು ಹಾಗೂ ಔರಂಗಜೇಬ್ ಭಾವಚಿತ್ರ ಹಾಕಿದ್ದಲ್ಲದೆ ಹಿಂದೂ ಸೈನಿಕರ ಅವಮಾನಿಸುವ ಫ್ಲೆಕ್ಸ್ ಹಾಕಿದಾಗ ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಂಡು ತೆರವುಗೊಳಿಸಬೇಕಿತ್ತು ಎಂದು ರೇಣುಕಾಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ಡಿ.ಜೆ., ಕೆ.ಜೆ. ಹಳ್ಳಿ ಪ್ರಕರಣ ಹಿಂಪಡೆಯಬಾರದು:
ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ, ಹುಬ್ಬಳ್ಳಿ ಹಾಗೂ ಶಿವಮೊಗ್ಗದಲ್ಲಿ ಗಲಭೆ ನಡೆಸಿದ ಅಲ್ಪಸಂಖ್ಯಾತ ಸಮುದಾಯದ ಗೂಂಡಾಗಳ ಮೇಲೆ ದಾಖಲಾದ ಪ್ರಕರಣಗಳ ಯಾವುದೇ ಕಾರಣಕ್ಕೂ ಹಿಂಪಡೆಯಬಾರದು. ಕಾಂಗ್ರೆಸ್ ನಾಯಕರ ಮುಸ್ಲಿಮರ ತುಷ್ಟೀಕರಣ ಪರಿಣಾಮ ಮುಸ್ಲಿಮರು ಹಿಂದೂಗಳ ಮೇಲೆ ಎರಗಿ ಹಲ್ಲೆ ಮಾಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ನಾಯಕರು ಮುಸ್ಲಿಂ ತುಷ್ಟೀಕರಣ ಕೈಬಿಡಲಿ, ನೀವು ಅಧಿಕಾರಕ್ಕೆ ಬರಲು ಕೇವಲ ಅಲ್ಪಸಂಖ್ಯಾತರು ಮಾತ್ರ ಕಾರಣರಲ್ಲ, ಹಿಂದೂಗಳು ನಿಮಗೆ ಮತ ಹಾಕಿದ್ದಾರೆ ಎಂಬುದು ಮರೆಯಬೇಡಿ ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಎಸ್.ಎಸ್.ಬೀರಪ್ಪ, ಪಾಲಕ್ಷಪ್ಪ, ಎಂ.ಎಸ್.ಪಾಲಕ್ಷಪ್ಪ, ತರಗನಹಳ್ಳಿ ರಮೇಶ್, ರಾಜು ಫಲ್ಲವಿ, ಬಸವನಹಳ್ಳಿ ರಮೇಶ್, ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ್, ಕುಂದೂರು ಅನಿಲ್ ಇತರರಿದ್ದರು.
----------------ದ್ವಿಮುಖ ಧೋರಣೆ ಕೈಬಿಡಿ
ಶಿವಮೊಗ್ಗದ ರಾಗಿಗುಡ್ಡದಲ್ಲಿ ಮುಸ್ಲಿಂ ಪುಂಡರು ತಲವಾರ್ ಗಳ ಬೀದಿಯಲ್ಲಿ ಪ್ರದರ್ಶಿಸಿ ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ ತುಷ್ಟೀಕರಣ ನೀತಿಯಿಂದಾಗಿ ಮುಸ್ಲಿಮರ ಪುಂಡಾಟ ಹೆಚ್ಚಾಗಿದೆ, ಇಂತಹ ದ್ವಿಮುಖ ಧೋರಣೆ ಕೈಬಿಡಿ ಇಲ್ಲದಿದ್ದರೆ ಹಿಂದೂಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಗೃಹ ಸಚಿವರು ಇದೊಂದು ಸಣ್ಣ ಪ್ರಕರಣ ಎಂದು ಹೇಳಿ ಗಲಭೆಕೋರರ ಪ್ರಚೋದಿಸುವ ಹೇಳಿಕೆ ನೀಡಿರುವುದು ದುರದೃಷ್ಟಕರ ಸಂಗತಿ.ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವಗಲಭೆ ಪ್ರಕರಣ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ
ಶಿವಮೊಗ್ಗದ ರಾಗಿಗುಡ್ಡದಲ್ಲಿ ಸಂಭವಿಸಿದ ಗಲಭೆ ಪ್ರಕರಣವನ್ನು ಹಾಲಿ ನ್ಯಾಯಧೀಶರಿಂದ ತನಿಖೆ ನಡೆಸಿದರೆ ಅಲ್ಪಸಂಖ್ಯಾತ ಗೂಂಡಾಗಳ ದೌರ್ಜನ್ಯಕ್ಕೆ ಒಳಗಾದ ಹಿಂದೂಗಳಿಗೆ ನ್ಯಾಯ ಸಿಗಬಹುದು ಆದ್ದರಿಂದ ಕೂಡಲೇ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒತ್ತಾಯಿಸಿದರು. ಶಿವಮೊಗ್ಗ ಎಸ್‌ಪಿ ಹೇಳಿಕೆ ಕೊಡುವಾಗ ಹಿಂದೂಗಳ ಮೇಲೆ ಗೂಬೆ ಕೂರಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇಬ್ಬರದ್ದು ತಪ್ಪು ಎನ್ನುವ ರೀತಿಯಲ್ಲಿ ಸರ್ಕಾರದ ಒತ್ತಡದಿಂದ ಹೇಳಿಕೆ ಕೊಡುತ್ತಿರುವುದು ಸರಿಯಲ್ಲ ಎಂದು ರೇಣುಕಾಚಾರ್ಯ ಹೇಳಿದರು.