ಕುಶಾಲನಗರ: ಗ್ರಾಮೀಣ ಕ್ರೀಡಾ ಸಂಸ್ಕೃತಿಯು ಗ್ರಾಮೀಣ ಕ್ರೀಡಾ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆ
ಸಂಸ್ಕೃತಿ ಪ್ರೋತ್ಸಾಹಿಸಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದಲ್ಲಿ ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವಿಯ ಗ್ರಾಮ ದೇವತೆ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಹಬ್ಬ ಹರಿದಿನ ದೇವಸ್ಥಾನ, ರಸ್ತೆ ಹಾಗೂ ಇನ್ನಿತರ ಅಗತ್ಯ ಕಾಮಗಾರಿಗಳ ಅಭಿವೃದ್ಧಿ ಮತ್ತು ಗ್ರಾಮದಲ್ಲಿ ಸಾಮರಸ್ಯದ ಬದುಕಿಗೆ ಬೇಕಿರುವ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತೇನೆ ಎಂದು ಶಾಸಕ ಡಾ. ಮಂತರ್ ಗೌಡ ಗ್ರಾಮಸ್ಥರಿಗೆ ಭರವಸೆ ನೀಡಿದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಗ್ರಾಮದಲ್ಲಿ ಯುವ ಜನಾಂಗವು ಹಿರಿಯರ ಮಾರ್ಗದರ್ಶನದಲ್ಲಿ ಪರಸ್ಪರ ಪ್ರೀತಿ- ವಿಶ್ವಾಸ ಹಾಗೂ ಸೌಹಾರ್ದತೆಯಿಂದ ಬದುಕು ನಡೆಸುವ ಮೂಲಕ ಗ್ರಾಮದ ಐಕ್ಯತೆ ಎತ್ತಿ ಹಿಡಿಯಬೇಕು ಎಂದರು.ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮ ಕುಮಾರ್ ಮಾತನಾಡಿದರು.
ನಟೇಶ್ ಗೌಡ ಮಾತನಾಡಿದರು.ಅಂತಾರಾಷ್ಟ್ರೀಯ ಮ್ಯಾರಥಾನ್ ಕ್ರೀಡಾಪಟು ತೊರೆನೂರು ಗ್ರಾಮದ ಟಿ.ಎಚ್. ಗಣೇಶ್ ಅವರನ್ನು ಗ್ರಾಮದ ಕ್ರೀಡಾ ಸಮಿತಿ ಪರವಾಗಿ ಗೌರವಿಸಲಾಯಿತು.ಕುಶಾಲನಗರ ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷ ಎಚ್.ಬಿ. ಚಂದ್ರಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಬಿ.ಡಿ. ಅಣ್ಣಯ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಕೆ.ಎಸ್. ಕೃಷ್ಣೇ ಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಟಿ.ಕೆ. ಬಸವರಾಜ್, ದೇವಸ್ಥಾನ ಸಮಿತಿ ಟ್ರಸ್ಟ್ ನ ಕಾರ್ಯಾಧ್ಯಕ್ಷ ಟಿ.ಜಿ. ಶಿವಣ್ಣ, ಉಪಾಧ್ಯಕ್ಷ ಟಿ.ಬಿ. ಚಿದಾನಂದ, ನಿರ್ದೇಶಕರಾದ ಟಿ.ಸಿ. ತ್ರಿಣೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ರವಿ, ಪಿಡಿಒ ಶ್ಯಾಮ್, ಕೂಡಿಗೆ ಗ್ರಾಪಂ ಮಾಜಿ ಸದಸ್ಯ ಅನಂತ, ಕ್ರೀಡಾ ಸಮಿತಿ ಅಧ್ಯಕ್ಷ ಟಿ.ಎ. ರವಿಚಂದ್ರ, ಉಪಾಧ್ಯಕ್ಷ ಟಿ.ಎಚ್. ಲೋಕೇಶ್, ನಿರ್ದೇಶಕರಾದ ವಕೀಲ ಟಿ.ಜೆ. ಪ್ರವೀಣ್, ಟಿ.ಆರ್. ಉಮೇಶ್, ಶಿಕ್ಷಕ ಟಿ.ಜಿ. ರಮೇಶ್, ಟಿ.ಆರ್. ದಿನೇಶ್, ಟಿ.ಎಸ್. ಮಹೇಶ್, ಮ್ಯಾರಥಾನ್ ಕ್ರೀಡಾಪಟು ಟಿ.ಎಚ್. ಗಣೇಶ್, ಕ್ರೀಡಾ ಸಮಿತಿ ಪದಾಧಿಕಾರಿಗಳು, ಟ್ರಸ್ಟ್ ಪದಾಧಿಕಾರಿಗಳು ಇದ್ದರು.