ಪ್ರತಿಭೆಗೆ ಪ್ರೋತ್ಸಾಹ ಸಮಾಜದ ಜವಾಬ್ದಾರಿ: ಡಾ.ಶಶಿಕುಮಾರ್ ಮೆಹರ್ವಾಡೆ

KannadaprabhaNewsNetwork |  
Published : Aug 11, 2026, 01:45 AM IST
10 HRR. 03 & 03Aಹರಿಹರದ ಎಸ್ ಎಸ್ ಕೆ ಹಿತವರ್ಧಕ ಸಂಘದಿಂದ ಆಯೋಜಿಸಿದ್ದಪ್ರತಿಭಾ ಪುರಸ್ಕಾರ  ಕಾರ್ಯಕ್ರಮವನ್ನುಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ್ ಮೆಹರ್ವಾಡೆ ಉದ್ಘಾಟಿಸಿ ಮಾತನಾಡಿದರು.03Aಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿ ಎಂದು ಎಸ್.ಎಸ್.ಕೆ. ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ್ ಮೆಹರ್ವಾಡೆ ತಿಳಿಸಿದ್ದಾರೆ.

- ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಹಿತವರ್ಧಕ ಸಂಘದಿಂದ ಪ್ರತಿಭಾ ಪುರಸ್ಕಾರ

- - -

ಕನ್ನಡಪ್ರಭ ವಾರ್ತೆ ಹರಿಹರ

ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿ ಎಂದು ಎಸ್.ಎಸ್.ಕೆ. ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ್ ಮೆಹರ್ವಾಡೆ ತಿಳಿಸಿದರು.

ನಗರದಲ್ಲಿ ಭಾನುವಾರ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಹಿತವರ್ಧಕ ಸಂಘದಿಂದ ತಮ್ಮ ಮಾತೋಶ್ರಿ ದಿವಂಗತ ಲಕ್ಷ್ಮೀಬಾಯಿ ವಾಸುದೇವಸಾ ಮೆಹರ್ವಾಡೆ ಸ್ಮರಣಾರ್ಥ ಕೆ.ಸಿ.ವಿ. ಐಟಿಐ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳೇ ಸಮಾಜದ ಭವಿಷ್ಯದ ಆಸ್ತಿ ಎಂದರು.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಮೂಲಕ ಮುಂದಿನ ಪೀಳಿಗೆಯ ಪ್ರತಿಭೆಗಳಿಗೆ ಉತ್ತೇಜನ ನೀಡುವ ಸಾರ್ಥಕ ಕಾರ್ಯಕ್ರಮವಾಗಿ ಪ್ರತಿಭಾ ಪುರಸ್ಕಾರ ಸಮಾರಂಭ ಮೂಡಿಬಂದಿದೆ. ಸಮಾಜದ ಯಾವುದೇ ವಿದ್ಯಾರ್ಥಿಗಳು ಉತ್ತಮ ಸಾಧನೆ ಅಂಕ ಪಡೆದಲ್ಲಿ ಅವರನ್ನು ಗೌರವಿಸುವ ಹಾಗೂ ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಸೂಕ್ತ ಮನ್ನಣೆ ನೀಡುವುದಾಗಿ ಭರವಸೆ ನೀಡಿದರು.

ನಗರದ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಶ್ರೀನಿವಾಸ್ ಎಸ್. ಮೆಹರವಾಡೆ ಮಾತನಾಡಿ, 1984ರಲ್ಲಿ ಪ್ರಾರಂಭವಾದ ಹಿತವರ್ಧಕ ಸಂಘ ನಿರಂತರವಾಗಿ ಸಮಾಜದ ಉನ್ನತಿಗಾಗಿ ಶ್ರಮಿಸಿದೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡುವೆ ಕೆಲ ವರ್ಷ ಸ್ಥಗಿತವಾದರೂ, ಸಮಾಜ ಬಾಂಧವರ ಸಹಮತದಿಂದ ಕಳೆದ 3 ವರ್ಷಗಳಿಂದ ಮರುಜನ್ಮ ಪಡೆದಿದೆ ಎಂದರು.

ಕೆ.ಸಿ.ವಿ. ಐಟಿಐ, ಕಾಲೇಜಿನ ಕಾರ್ಯದರ್ಶಿ ಪರಶುರಾಮ್ ಸಿ. ಕಾಟ್ಟೆ ಮಾತನಾಡಿ, ಇಂದಿನ ಯುವಜನತೆ ಮೊಬೈಲ್ ಹೆಚ್ಚು ಬಳಸದೆ, ನಿರಂತರ ಪರಿಶ್ರಮ, ಉತ್ತಮ ಗೆಳೆಯರ ಸಹವಾಸ ಮಾಡಿದಲ್ಲಿ ಇಂಥ ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜದ 100ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಎಸ್.ಎಸ್.ಕೆ. ಹಿತವರ್ಧಕ ಸಂಘದ ಅಧ್ಯಕ್ಷ ತುಳಸೀನಾಥ ಎನ್. ರಾಜೊಳ್ಳಿ ವಹಿಸಿದ್ದರು.

ಬೆಂಗಳೂರಿನ ಲೆಕ್ಕ ಪರಿಶೋಧಕ ಅಮರ್ ವಿ. ಮೆಹರ್ವಾಡೆ, ಮಂಗಳೂರಿನ ಪಬ್ಲಿಕ್ ಪ್ರಾಸಿಕ್ಯೂಟರ್ ಮೋತಿಲಾಲ್ ಚೌಧರಿ, ನಿವೃತ್ತ ಪ್ರಾಂಶುಪಾಲೆ ಜಯಶ್ರೀ ಎಂ. ಚೌಧರಿ, ರಾಯಚೂರಿನ ನರೇಂದ್ರ ಎನ್.ಮಿಸ್ಕಿನ್, ಎಂ.ಬಿ.ಎ., ರಾಣೇಬೆನ್ನೂರಿನ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಕೊಟ್ರೇಶ್ ಆರ್. ಮೆಹರ್ವಾಡೆ, ದಾವಣಗೆರೆಯ ಅಧ್ಯಕ್ಷ ಗಿರಿಧರ್ ಡಿ. ಮೆಹರ್ವಾಡೆ, ಹರಿಹರದ ವೈದ್ಯ ಡಾ.ಮೋಹನ್ ಎನ್. ಮೆಹರ್ವಾಡೆ, ದಾವಣಗೆರೆ ಜಿಲ್ಲಾ ಯೂತ್ ಪ್ರೆಸಿಡೆಂಟ್ ಸಂದೀಪ್ ಎಚ್. ಭೂತೆ, ಎಸ್.ಎಸ್.ಕೆ. ಮಹಿಳಾ ಮಂಡಳಿ ಅಧ್ಯಕ್ಷೆ ರೂಪಾ ವಿ. ಕಾಟ್ಟೆ, ಉಪಾನ್ಯಾಸಕಿ ಶೋಭಾ ವಿ. ಮೆಹರ್ವಾಡೆ, ಉಪಾಧ್ಯಕ್ಷ ಶ್ರೀಧರ ವಿ. ಮೆಹರ್ವಾಡೆ, ಕಾರ್ಯದರ್ಶಿ ಏಕನಾಥಸಾ ಡಿ. ಕಾಟೀಫರ್ ಸಹ ಕಾರ್ಯದರ್ಶಿ ಶ್ರೀಕಾಂತ್ ವಿ. ಮೆಹರ್ವಾಡೆ, ಖಜಾಂಚಿ ಏಳುಕೋಟಿ ಎಚ್. ಕಾಟ್ಟೆ, ಸದಸ್ಯರಾದ ನಾಗೇಂದ್ರಸಾ ಬಿ. ಕಾಟ್ಟೆ, ಲಕ್ಷ್ಮಣಸಾ ಎಸ್. ಮೆಹರ್ವಾಡೆ, ಶಂಕರ್ ಪಿ. ರಂಗ್ರೇಜ್, ಏಳುಕೋಟಿ ಪಿ. ಲದ್ವಾ, ನಾರಾಯಣ ಬಾಕಳೆ, ಸಂದೀಪ್ ಆರ್. ಮೆಹರ್ವಾಡೆ, ರಾಹುಲ್ ಎನ್. ರಾಜೊಳ್ಳಿ, ಆದಿತ್ಯ ಟಿ. ಮೆಹರ್ವಾಡೆ, ವಿದ್ಯಾ ಆರ್. ಮೆಹರ್ವಾಡೆ, ಮಾಲಾ ಎನ್. ಕಾಟ್ಟೆ, ಅರುಣಾ ಆರ್. ಖಿರೋಜಿ, ನಂದಾ ವಿ. ಕಾಟ್ಟೆ ಗೌರವ ಸಲಹೆಗಾರರಾದ ಮನೋಹರಸಾ ಎಸ್. ಸೋಳಂಕಿ, ಮೋಹನ್ ವಿ. ಮೆಹರ್ವಾಡೆ ನಾರಾಯಣಸಾ ಒ. ಖೋಡೆ, ಫಕ್ಕಿರಸಾ ಎಲ್. ಬದಿ, ಮೈಲಾರಲಿಂಗಸಾ ಎಚ್. ಕಾಟ್ಟೆ ಹಾಗೂ ಇತರರು ಉಪಸ್ಥಿತರಿದ್ದರು.

- - -

-10HRR03 & 03A: ಹರಿಹರದ ಎಸ್‌ಎಸ್‌ಕೆ ಹಿತವರ್ಧಕ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ್ ಮೆಹರ್ವಾಡೆ ಉದ್ಘಾಟಿಸಿದರು. -0310HRRA: ಹರಿಹರದ ಎಸ್‌ಎಸ್‌ಕೆ ಹಿತವರ್ಧಕ ಸಂಘದಿಂದ ಪ್ರತಿಭಾ ಪುರಸ್ಕಾರ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಪಟೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ
ಯುವ ಕಾಂಗ್ರೆಸ್ ದೇಶದ ಭವಿಷ್ಯ ಕಟ್ಟುವ ಯುವ ಶಕ್ತಿ: ಪ್ರಸನ್ನಕುಮಾರ್