ಸುರಕ್ಷಿತ ಸಂಚಾರಕ್ಕೆ ಅತಿಕ್ರಮಣ ತೆರವು ಅನಿವಾರ್ಯ

KannadaprabhaNewsNetwork |  
Published : Jul 26, 2024, 01:37 AM IST
25 ರೋಣ 1. ರಸ್ತೆ ಅತೀಕ್ರಮಣ ತೆರವು, ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಕುರಿತು ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಸಭೆ ಜರುಗಿತು.25 ರೋಣ 1. ಎ. ರೋಣ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿಪಿಐ ಎಸ್.ಎಸ್.ಬಿಳಗಿ, ಪುರಸಭೆ ಮುಖ್ಯಾಧಿಕಾರಿ ರಮೇಶ ಗೊಂದಕರ, ಲೋಕೋಪಯೋಗಿ ಇಲಾಖೆ ಎಇಇ ಬಲವಂತ ನಾಯಕ   ಅತೀಕ್ರಮಣ ತೆರವು, ಸುಗಮ ಸಂಚಾರಕ್ಕೆ ಜಾಗೃತಿ ಮೂಡಿಸಿದರು | Kannada Prabha

ಸಾರಾಂಶ

ರಸ್ತೆ ಅಗಲೀಕರಣ ಸಂದರ್ಭದಲ್ಲಿ ಅತಿಕ್ರಮಣ ಅಂಗಡಿ ತೆರವುಗೊಳಿಸಲಾಗುವುದು. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಣ್ಣಪುಟ್ಟ ತೊಂದರೆಯಾಗಲಿದೆ. ಆದರೆ ಇದನ್ನೆ ಮುಂದಿಟ್ಟು ಅಭಿವೃದ್ಧಿ ಕಾರ್ಯಕ್ಕೆ ಅಡತಡೆ ಮಾಡದೇ ಸಾರ್ವಜನಿಕರು ಸಹಕರಿಸಬೇಕು

ರೋಣ: ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ರಸ್ತೆ ಅತಿಕ್ರಮಣ ಮಾಡಿದ್ದನ್ನು ಕೂಡಲೇ ತೆರವುಗೊಳಿಸಲಾಗುವುದು. ಆದರಿಂದ ಅಟೋ, ಕಾರು ಸೇರಿದಂತೆ ವಾಹನ ಸವಾರರು, ಬೀದಿ ಬದಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ರಸ್ತೆ ಅತಿಕ್ರಮಣ ತೆರವಿಗೆ ಹಾಗೂ ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕು ಎಂದು ರೋಣ ಲೋಕೋಪಯೋಗಿ ಇಲಾಖೆ ಎಇಇ ಬಲವಂತ ನಾಯಕ ಹೇಳಿದರು.

ಅವರು ಗುರುವಾರ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಲಹೆ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿದರು.

ರೋಣ ಪಟ್ಟಣದ ಲಿಂಗನಗೌಡ್ರ ಪೆಟ್ರೋಲ್ ಪಂಪ್ ನಿಂದ ಸೂಡಿ ವೃತ್ತ, ಮುಲ್ಲನಬಾವಿ ವೃತ್ತ, ಗದಗ ರಸ್ತೆಯಲ್ಲಿನ ಮಲಪ್ರಭಾ ಕಾಲುವೆವರೆಗಿನ ರಸ್ತೆಯನ್ನು ₹20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ರಸ್ತೆ ಎರಡು ಬದಿ ಗಟಾರ ನಿರ್ಮಾಣ, ಪಾದಚಾರಿಗಳಿಗೆ ಪುಟ್ ಪಾತ್ ಸೇರಿದಂತೆ ರಸ್ತೆ ಸೌಂದರ್ಯ ಹೆಚ್ಚಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಲ್ಲಿ ಯೋಜನೆ ರೂಪಿಸಲಾಗಿದೆ. ಆದ್ದರಿಂದ ಈ ಮಾರ್ಗದುದ್ದಕ್ಕೂ ಇರುವ ಬೀದಿಬದಿ ವ್ಯಾಪಾರಸ್ಥರು, ಅಂಗಡಿ ಮುಂಗಟ್ಟು ಹೊಂದಿದವರು, ಅಟೋ ಚಾಲಕ, ಮಾಲಿಕರು, ಕಾರು ಚಾಲಕ ಮಾಲಕರು ಸೇರಿದಂತೆ ಯಾರೇ ಆಗಲಿ ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದಲ್ಲಿ ಕೂಡಲೇ ತೆರವುಗೊಳಿಸಿ ಅಭಿವೃದ್ಧಿ ಕಾರ್ಯಕ್ಕೆ ಸ್ಪಂದಿಸಬೇಕು ಎಂದು ವಿನಂತಿಸಿದರು.

ಸಿಪಿಐ ಎಸ್.ಎಸ್. ಬೀಳಗಿ ಮಾತನಾಡಿ, ರಸ್ತೆ ಅಗಲೀಕರಣ ಸಂದರ್ಭದಲ್ಲಿ ಅತಿಕ್ರಮಣ ಅಂಗಡಿ ತೆರವುಗೊಳಿಸಲಾಗುವುದು. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಣ್ಣಪುಟ್ಟ ತೊಂದರೆಯಾಗಲಿದೆ. ಆದರೆ ಇದನ್ನೆ ಮುಂದಿಟ್ಟು ಅಭಿವೃದ್ಧಿ ಕಾರ್ಯಕ್ಕೆ ಅಡತಡೆ ಮಾಡದೇ ಸಾರ್ವಜನಿಕರು ಸಹಕರಿಸಬೇಕು. ಪಟ್ಟಣದಲ್ಲಿ ಅಲ್ಲಲ್ಲಿ ದ್ವಿಚಕ್ರ ಹಾಗೂ ಅಟೋಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ವಾಹನಗಳಿಗೆ ನಂಬರ್ ಪ್ಲೇಟ್ ಕಡ್ಡಾಯವಾಗಿದ್ದು, ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುವ ವಾಹನ ಸೀಜ್ ಮಾಡಲಾಗುವುದು ಎಂದರು.

ಈ ವೇಳೆ ಪಿಡಬ್ಲೂಡಿ ಅಭಿಯಂತರ ಎಸ್.ಕೆ. ಕರಡ್ಡಿ, ಪುರಸಭೆ ಸದಸ್ಯ ಸಂತೋಷ ಕಡಿವಾಲ, ಎಸ್.ಬಿ. ಭದ್ರಾಪೂರ, ಪಿಎಸ್ಐ ಪ್ರಕಾಶ ಬಣಕಾರ ಮಾತನಾಡಿದರು.

ಸಭೆ ಬಳಿಕ ಪಟ್ಟಣದಾದ್ಯಂತ ಪುರಸಭೆ, ಲೋಕೋಪಯೋಗಿ ಇಲಾಖೆ, ಆರಕ್ಷಕ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ರಸ್ತೆಯೂದ್ದಕ್ಕು ಇರುವ ಬೀದಿ ಬದಿ ವ್ಯಾಪಾರಸ್ಥರಿಗೆ ಅತಿಕ್ರಮಣ ತೆರವಿಗೆ ಜಾಗೃತಿ ಮೂಡಿಸಿದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ರಮೇಶ ಗೊಂದಕರ, ವಿಜಯಲಕ್ಷ್ಮೀ ಹಿರೇಮಠ, ಸುಧಾಕರ ಗೋಟೂರ, ವೀರಪ್ಪ ತೆಗ್ಗಿನಮನಿ ಸೇರಿದಂತೆ ಬೀದಿಬದಿ ವ್ಯಾಪಾರಸ್ಥರು, ಅಟೋ, ಕಾರು ಚಾಲಕ, ಮಾಲಿಕರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ