ನಾಪೋಕ್ಲು: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯ ಸ್ಥಳ ದಾನಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೋಮವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು ಕಾಲೇಜಿನಲ್ಲಿ ಭೇಟಿಯಾಗಿ ಶಾಲೆಯ ಜಾಗ ಒತ್ತುವರಿಯಾಗಿರುವ ಬಗ್ಗೆ ಸ್ಪಷ್ಟನೆ ಕೋರಿದರು.
ಒತ್ತುವರಿ ಜಾಗ ತೆರವು, ಮುಂದೆ ಆಗಬಹುದಾದಂತಹ ಭೂಕಬಳಿಕೆಯನ್ನು ತಡೆಗಟ್ಟ ಬೇಕಾಗಿದೆ
ಎಂದು ಸ್ಥಳ ದಾನಿಗಳ ಕುಟುಂಬಸ್ಥರು, ಹಳೆ ವಿಧ್ಯಾರ್ಥಿಗಳು, ಆಡಳಿತ ಮಂಡಳಿಯವರು ಸಭೆಯಲ್ಲಿ ಅಭಿಪ್ರಾಯಪಟ್ಟರು.ನಾಪೋಕ್ಲು ಕಾಲೇಜಿನ ಜಾಗದಲ್ಲಿ ಶಾದಿಮಹಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಶಾಸಕರು ಶಾದಿ ಮಹಲ್ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದಾರೆ. ಈ ಸ್ಥಳವು ಕಾಲೇಜಿಗೆ ಸೇರಿದ್ದೋ ಅಥವಾ ಶಾದಿಮಹಲ್ ಫಲಾನುಭವಿಗಳಿಗೆ ಸೇರಿದ್ದೋ ಎಂಬುವುದು ಗೊಂದಲದಲ್ಲಿದ್ದು, ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಯವರು ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿಗೆ ಲಿಖಿತವಾಗಿ ಅರ್ಜಿ ನೀಡಿದ್ದು, ಸರ್ವೆ ಕಾರ್ಯ ಮಾಡಿ ಈ ಗೊಂದಲವನ್ನು ನಿವಾರಿಸಿಕೊಡಬೇಕೆಂದು ಕೇಳಿಕೊಂಡಿದ್ದರೂ
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಶಾಲ ಕುಶಾಲಪ್ಪ, ಉಪ ಪ್ರಾಂಶುಪಾಲ ಶಿವಣ್ಣ ಎಂ. ಎಸ್., ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಎಸ್. ಉದಯಶಂಕರ್ ಪ್ರತಿಕ್ರಿಯಿಸಿ, ತಾವು ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮಾಹಿತಿ ನೀಡಿದ್ದಲ್ಲದೆ ಪತ್ರ ವ್ಯವಹಾರ ಮಾಡಿದ ದಾಖಲೆ ಪತ್ರದೊಂದಿಗೆ ಮನವರಿಗೆ ಮಾಡಿಕೊಟ್ಟರು.
ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಶಿವಚಳಿಯಂಡ ಜಗದೀಶ್, ಕುಂಡ್ಯೋಳಂಡ ವಿಶು ಪೂವಯ್ಯ, ಪಾಡಿಯಮ್ಮoಡ, ಮನು ಮಹೇಶ್ , ಬಿದ್ದಾ ಟಂಡ ಸಂಪತ್, ಕಂಗಾಂಡ ಜಾಲಿ ಪೂವಪ್ಪ, ಬಾಳೆಯಡ ಮೇದಪ್ಪ ಉಪಸ್ಥಿತರಿದ್ದರು.