ಭೀಮೆಗೆ ನೀರು ಹರಿಸುವಂತೆ ಆಗ್ರಹಿಸಿ ನಡೆಸಿದ ಉಪವಾಸ ಸತ್ಯಾಗ್ರಹ ಅಂತ್ಯ

KannadaprabhaNewsNetwork |  
Published : Mar 28, 2024, 12:49 AM IST
ಅಫಜಲ್ಪುರ ತಾಲೂಕಿನ ಭೀಮಾ ನದಿಗೆ ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ಕುಡಿಯುವ ನೀರಿಗಾಗಿ 1 ಟಿಎಂಸಿ ನೀರು ಹರಿಸಲು ಸರ್ಕಾರ ಸೂಚನೆ ನೀಡಿದ್ದರಿಂದ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಹೋರಾಟಗಾರ ಶಿವಕುಮಾರ ನಾಟಿಕಾರ ಅವರು ಕಳೆದ 12 ದಿನಗಳಿಂದ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು | Kannada Prabha

ಸಾರಾಂಶ

ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ನಂತರ ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಗೆ ಭೇಟಿ ನೀಡಿ ಭೀಮಾ ನದಿಯಲ್ಲಿ ಸ್ನಾನ ಪೂಜಾದಿಗಳನ್ನು ಮುಗಿಸಿ ಭೀಮಾ ನದಿ ನೀರು ಸೇವನೆ

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಅಫಜಲ್ಪುರ ತಾಲೂಕಿನ ಭೀಮಾ ನದಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಳೆದ 12 ದಿನಗಳಿಂದ ಹೋರಾಟಗಾರ ಶಿವಕುಮಾರ ನಾಟಿಕಾರ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು. ತಾಲೂಕಿನ ಭೀಮಾ ನದಿಗೆ ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ಕುಡಿವ ನೀರಿಗಾಗಿ 1 ಟಿಎಂಸಿ ನೀರು ಹರಿಸಲು ಸರ್ಕಾರ ಸೂಚನೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ಕೈ ಬಿಡಲಾಗಿದೆ ಎಂದು ಹೋರಾಟಗಾರ ಶಿವಕುಮಾರ ನಾಟಿಕಾರ ಹೇಳಿದರು. ಅವರು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ನಂತರ ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಗೆ ಭೇಟಿ ನೀಡಿ ಭೀಮಾ ನದಿಯಲ್ಲಿ ಸ್ನಾನ ಪೂಜಾದಿಗಳನ್ನು ಮುಗಿಸಿ ಭೀಮಾ ನದಿ ನೀರು ಸೇವಿಸಿ ಮಾತನಾಡಿ. ಭೀಮಾ ನದಿಗೆ ನಾರಾಯಣಪುರ ಜಲಾಶಯದಿಂದ 1 ಟಿಎಂಸಿ ನೀರು ಹರಿಸಲು ಆದೇಶ ಹೊರಡಿಸಲಾಗಿದೆ. ಆದರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪಕ್ಷಾತೀತವಾಗಿ ಹೋರಾಟ ನಡೆಸಿ ಭೀಮಾ ನದಿ ಉಳಿವಿಗಾಗಿ ಹೋರಾಟ ನಡೆಸಲಾಗಿದೆ. ವೈಯಕ್ತಿಕ ಹಿತದೃಷ್ಟಿಯಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿಲ್ಲ.ಎಂದು ಹೇಳಿದರು

ಈ ಸಂದರ್ಭದಲ್ಲಿ ಮರುಳರಾಧ್ಯ ಶಿವಾಚಾರ್ಯರು ಚಿದಾನಂದ ಮಠ ಮಲ್ಲಿಕಾರ್ಜುನ ಸಿಂಗೆ ರಾಜಕುಮಾರ ಉಕ್ಕಲಿ ಶ್ರೀಕಾಂತ ದಿವಾಣಜಿ ಅಮೋಲ ಮೋರೆ ಬಸಣ್ಣ ಜಕಾಪೂರ ಮಹಾಂತಗೌಡ ಪಾಟೀಲ ಸಿದ್ದುಗೌಡ ಹವಳಗಾ, ಮಲ್ಲಿಕಾರ್ಜುನ ಪೂಜಾರಿ ಸಿದ್ರಾಮ ಚಿಕ್ಕಮಣೂರ ಮಲಕಣ್ಣ ಹೊಸೂರಕರ ಅಪ್ಪಾಸಾಬ ಹೊಸೂರಕರ ಭಗವಂತ ಜಮಾದಾರ ಚಂದ್ರಕಾಂತ ದೈತನ ಹಣಮಂತ ನಾವಾಡಿ ಶಾಮರಾಯಗೌಡ ಪಾಟೀಲ ಲಾಡ್ಲೇಮಶಾಕ ಗೌರ ಸಂತೋಷ ಗೋಪಗೊಂಡ ಬಸವರಾಜ ಜನ್ನಾ ಸಂಜೀವಕುಮಾರ ನನ್ನಾಜಿ ಶರಣಪ್ಪ ಸುತಾರ ಸತೀಷ ಬುಸಿ ಪ್ರಭಾವತಿ ಮೇತ್ರೆ ಪ್ರತಿಭಾ ಮಹಿಂದ್ರಕರ ದಶರಥ ನಾವಾಡಿ ಸಿದ್ದಾರಾಮ ಬದನಿಕಾಯಿ ಶಿವಪುತ್ರ ನಾವಾಡಿ ಅವ್ವಣ್ಣ ಲಾಳಸಂಗಿ ಮಹಾಂತಪ್ಪ ಹಡಪದ ಸೇರಿದಂತೆ ಇತರರಿದ್ದರು

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!