ರಾಯಚೂರು: ಕ್ಯಾಷೋಟೆಕ್ ಹಾಗೂ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶರಣಬಸಪ್ಪ ಪಟ್ಟೇದ್ ಅವರ ಮನೆ ಹಾಗೂ ಕಚೇರಿ ಮೇಲೆ ಸೋಮವಾರ ಲೋಕಾಯುಕ್ತ ದಾಳಿ ನಡೆದಿದೆ. ಸ್ಥಳೀಯ ಐಡಿಎಸ್‌ಎಂಟಿ ಲೇಔಟನ್ ಗಂಗಾಪರಮೇಶ್ವರಿ ಕಾಲೋನಿಯಲ್ಲಿರುವ ಮನೆ ಹಾಗೂ ರಾಯಚೂರು ತಾಲೂಕಿನ ಶಕ್ತಿನಗರದಲ್ಲಿರುವ ಮನೆ, ಕ್ಯಾಶುಟೆಕ್ ಕಚೇರಿ ಮತ್ತು ಲಿಂಗಸುಗೂರಿನಲ್ಲಿ ಏಕಕಾಲಕ್ಕೆ ದಾಳಿ ಜರುಗಿದೆ. ಲೋಕಾಯುಕ್ತ ಎಸ್ಪಿ ಡಾ.ರಾಮ್ ಎಲ್. ಅರಸಿದ್ಧಿ ನೇತೃತ್ವದಲ್ಲಿ ಇಪ್ಪತ್ತು ಜನರ ಅಧಿಕಾರಿಗಳ ತಂಡವು ಏಕಕಾಲಕ್ಕೆ ದಾಳಿ ನಡೆಸಿ ಅಗತ್ಯ ಮಾಹಿತಿ ಕಲೆಹಾಕಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಕ್ಯಾಷೋಟೆಕ್ ಸಂಸ್ಥೆ ಹಾಗೂ ನಿರ್ಮಿತಿ ಕೇಂದ್ರದಲ್ಲಿ ಯೋಜನಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಶರಣಬಸಪ್ಪ ಪಟ್ಟೇದ್ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ, ಜಿಲ್ಲೆಗೇ ಯಾವುದೇ ಹೊಸ ಜಿಲ್ಲಾಧಿಕಾರಿಗಳು ಬಂದರೂ ಸಹ ಅವರೊಂದಿಗೆ ಅನ್ಯೂನ್ಯತೆ ಬೆಳೆಸಿಕೊಂಡು ನಿಯಮ ಬಾಹೀರವಾಗಿ ಕೆಲಸಗಳನ್ನು ಪಡೆದುಕೊಳ್ಳುತ್ತಿದ್ದರು. ಜೊತೆಗೆ ಕೈಗೊಂಡ ಕಾಮಗಾರಿಯಲ್ಲಿ ಕಳಪೆ, ಅನುದಾನ ಬಳಕೆಯಲ್ಲಿ ಅಕ್ರಮ ಹೀಗೆ ಹತ್ತು ಹಲವು ರೀತಿಯ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಅಗತ್ಯವಾದ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ದಾಳಿಯಲ್ಲಿ ಚಿರ-ಸ್ಥಿರಾಸ್ತಿ, ಚಿನ್ನಾಭರಣ, ಜಮೀನು, ಬ್ಯಾಂಕ್ ಖಾತೆ, ಸಾಲ ಸೇರಿ ಮತ್ತಿತರ ಮಾಹಿತಿಯನ್ನು ಲೋಕಾ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ------------- 30ಕೆಪಿಆರ್‌ಸಿಆರ್01 ಶರಣಬಸಪ್ಪ ಪಟ್ಟೇದ್ 30ಕೆಪಿಆರ್‌ಸಿಆರ್02 ರಾಯಚೂರಿನ ಕ್ಯಾಷೋಟೆಕ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶರಣಬಸಪ್ಪ ಪಟ್ಟೇದ್ ಅವರು ವಾಸವಿರುವ ನಗರದ ಐಡಿಎಸ್‌ಎಂಟಿ ಲೇಔಟ್‌ನ ಗಂಗಾಪರಮೇಶ್ವರಿ ಕಾಲೋನಿಯಲ್ಲಿನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.