ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜೆಎಸ್ಎಸ್ ಮಹಿಳಾ ಕಾಲೇಜು ವತಿಯಿಂದ ರಂಗಸಂದ್ರದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಎಂಬುದು ಗಾಂಧೀಜಿ ಅವರ ಕನಸಿನ ಕೂಸು ಎನ್ನುವ ಮುಖಾಂತರ ನಿದರ್ಶನಗಳ ಮೂಲಕ ತಿಳಿಸಿಕೊಟ್ಟರು. ನಂತರ ಸಭೆಯನ್ನು ಉದ್ದೇಶಿಸಿ ಚಾಮರಾಜನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಲ್ಲೇಶ್ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಮತ್ತು ಗುರಿಗಳನ್ನು ತಿಳಿಸಿದರು.
ವಿಲಾಸ್ ಜೋಗೆನ್ನರವರು ಪ್ರಾಂಶುಪಾಲರು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ, ರಂಗಸಂದ್ರ ಇವರು ಶಿಬಿರಾರ್ಥಿಗಳು ಶಿಸ್ತನ್ನು ಪಾಲಿಸುವ ಮುಖಾಂತರ ರಾಷ್ಟ್ರೀಯ ಸೇವಾ ಯೋಜನೆಯ ಸೇವೆಯನ್ನು ಮಾಡಬೇಕೆಂದು ತಿಳಿಸಿದರು. ಜೆಎಸ್ಎಸ್ ಮಹಿಳಾ ಕಾಲೇಜು ಗ್ರಂಥಪಾಲಕ ಗುರುಪ್ರಸಾದ್ ತಾವು ಶಿಬಿರಾರ್ಥಿಯಾಗಿದ್ದ ಅನುಭವಗಳನ್ನು ಹಂಚಿಕೊಂಡರು. ಪ್ರಾಂಶುಪಾಲ ಡಾ. ಎನ್ ಮಹದೇವಸ್ವಾಮಿ ಅಧ್ಯಕ್ಷ ನುಡಿಗಳನ್ನಾಡಿ ಶಿಸ್ತಿನ ಮುಖಾಂತರ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ಮಹೇಶ್ ಪಿ, ಸಹ ಶಿಬಿರಾಧಿಕಾರಿಗಳಾದ ಮಹದೇವ ಪ್ರಸಾದ್ ವಿಎಸ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಕುಮಾರಿ ನಂದಿನಿ ಮತ್ತು ತಂಡದವರು ನಡೆಸಿಕೊಟ್ಟರು. ಜ್ಯೋತಿ ನಿರೂಪಿಸಿದರು, ಶಿವಮ್ಮ ಸ್ವಾಗತ ಕೋರಿದರು, ಸಾರಿಯ ತಬ್ಸುಮ್ ವಂದಿಸಿದರು.