ಧಾರವಾಡದ ಎಂಜಿನಿಯರ್‌ ಅಶೋಕ ಬಳಿ ₹6.11 ಕೋಟಿ ಆಸ್ತಿ

KannadaprabhaNewsNetwork |  
Published : Jun 25, 2025, 01:18 AM IST
ಧಾರವಾಡದ ಮಲಪ್ರಭಾ ಯೋಜನೆ ಎಂಜಿನಿಯರ್‌ ಕಚೇರಿ. | Kannada Prabha

ಸಾರಾಂಶ

ಅಧಿಕಾರಿ ಅಶೋಕ ಅವರ ಧಾರವಾಡದ ಕೆವಿಜಿ ಬ್ಯಾಂಕ್‌ ಬಳಿ ಇರುವ ಮನೆ ಹಾಗೂ ಲೋಕಾಯುಕ್ತ ಕಚೇರಿ ಪಕ್ಕದಲ್ಲಿಯೇ ಇರುವ ಮಲಪ್ರಭಾ ಮುಖ್ಯ ಎಂಜಿನಿಯರ್‌ ಕಚೇರಿ ಸೇರಿದಂತೆ ಬೆಳಗಾವಿ, ಬಾಗಲಕೋಟ, ಹಾಸನ ಸೇರಿ ವಿವಿಧ 8 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳಿರುವ ತಂಡಗಳು ಶೋಧ ನಡೆಸಿವೆ.

ಧಾರವಾಡ: ಇಲ್ಲಿಯ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮಲಪ್ರಭಾ ಪ್ರಾಜೆಕ್ಟ್ ಜೋನ್ ಮುಖ್ಯ ಅಭಿಯಂತರ ಅಶೋಕ ವಾಸನದ ಎಂಬುವರ ಧಾರವಾಡ ಸೇರಿದಂತೆ ರಾಜ್ಯದ ವಿವಿಧೆಡೆ ಇರುವ 8 ಸ್ಥಳಗಳಲ್ಲಿ ಮಂಗಳವಾರ ಏಕಕಾಲಕ್ಕೆ ಶೋಧ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು ₹6.11 ಕೋಟಿ ಮೊತ್ತದ ಆಸ್ತಿಯನ್ನು ಬಯಲಿಗೆ ಎಳೆದಿದ್ದಾರೆ.

ಅಧಿಕಾರಿ ಅಶೋಕ ಅವರ ಧಾರವಾಡದ ಕೆವಿಜಿ ಬ್ಯಾಂಕ್‌ ಬಳಿ ಇರುವ ಮನೆ ಹಾಗೂ ಲೋಕಾಯುಕ್ತ ಕಚೇರಿ ಪಕ್ಕದಲ್ಲಿಯೇ ಇರುವ ಮಲಪ್ರಭಾ ಮುಖ್ಯ ಎಂಜಿನಿಯರ್‌ ಕಚೇರಿ ಸೇರಿದಂತೆ ಬೆಳಗಾವಿ, ಬಾಗಲಕೋಟ, ಹಾಸನ ಸೇರಿ ವಿವಿಧ 8 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳಿರುವ ತಂಡಗಳು ಶೋಧ ನಡೆಸಿವೆ. ಧಾರವಾಡದಲ್ಲಿ ಲೋಕಾಯುಕ್ತ ಎಸ್ಪಿ ಹನುಮಂತರಾಯ್‌ ಅವರು ನೇತೃತ್ವ ವಹಿಸಿದ್ದರು.

ಇಷ್ಟೊಂದು ಆಸ್ತಿ ಪತ್ತೆ: ಎಂಜಿನಿಯರ್‌ ಅಶೋಕ ಹೆಸರಿನಲ್ಲಿ ಅಥವಾ ಅವರಿಗೆ ಸಂಬಂಧಿಸಿದ 7 ನಿವೇಶನಗಳು, ಮೂರು ವಾಸದ ಮನೆಗಳು, 19.03 ಎಕರೆ ಕೃಷಿ ಭೂಮಿ ಸೇರಿ ₹3.15 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೆಯೇ, ₹1.61 ಲಕ್ಷ ನಗದು, ₹1.74 ಕೋಟಿ ಬ್ಯಾಂಕ್ ಬ್ಯಾಲೆನ್ಸ್, ₹96.67 ಲಕ್ಷ ಮೌಲ್ಯದ ಬೆಲೆ ಬಾಳುವ ಚಿನ್ನಾಭರಣಗಳು, ₹13.40 ಲಕ್ಷ ಬೆಲೆಬಾಳುವ ವಾಹನಗಳು, ₹10 ಲಕ್ಷ ಬೆಲೆಬಾಳುವ ಇತರೆ ವಸ್ತುಗಳು ಎಲ್ಲ ಸೇರಿ ಚರಾಸ್ತಿ ₹2.95 ಕೋಟಿ ಸೇರಿದಂತೆ ಒಟ್ಟು ₹6.11 ಕೋಟಿ ಮೊತ್ತದ ಆಸ್ತಿ ಪತ್ತೆಯಾಗಿದ್ದು, ಈ ಕುರಿತು ಧಾರವಾಡ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ