ಧಾರವಾಡ:
ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಯಾಗುವುದು ಆಡಳಿತಾತ್ಮಕವಾಗಿ ಸಾರ್ವಜನಿಕರಿಗೆ ಅತಿ ಅವಶ್ಯ. ವಿಕೇಂದ್ರಕರಣದಿಂದ ಸರ್ವರಿಗೂ ಸಮಯ ಹಾಗೂ ಖರ್ಚು ಉಳಿತಾಯವಾಗಲಿದೆ. ಎರಡೂ ಪಾಲಿಕೆಗಳಿಗೆ ಹೆಚ್ಚಿನ ಅನುದಾನ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಈ ಹೋರಾಟಕ್ಕೆ ನಮ್ಮ ಬೆಂಬಲ ಎಂದು ಎಂಜಿನಿಯರ್ಸ್ ಹೇಳಿದರು.
ಧಾರವಾಡದ ಅಸ್ಮಿತೆ ವಿಷಯ ಬಂದಾಗ ಒಗ್ಗೂಡಿ ಹೋರಾಟುವುದು ನಮ್ಮ ಧರ್ಮ. ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ರಾಜಕೀಯ ಮಾಡದೇ ಒಕ್ಕೂರಲಿನಿಂದ ಧಾರವಾಡ ಜನರ ಬೇಡಿಕೆ ಈಡೇರಿಸಬೇಕೆಂದರು.ಈ ಸಂದರ್ಭದಲ್ಲಿ ಬಿ.ಡಿ. ಹಿರೇಮಠ, ಮನೋಜ ಪಾಟೀಲ, ವೆಂಕಟೇಶ ಮಾಚಕನೂರ, ಮಹಾದೇವ ಹೊರಟ್ಟಿ, ಗುರುರಾಜ ಹುಣಶಿಮರದ, ವಿಠ್ಠಲ್, ಮೋಹನ ರಾಮದುರ್ಗ, ತುಳಜಪ್ಪ ಪೂಜಾರ, ಈಶ್ವರ ಶಿವಳ್ಳಿ, ರಾಜಶೇಖರ ಕಮತಿ, ವಸಂತ ಅರಕಾಚಾರಿ, ಶಿವಶಂಕರ ಹಪ್ಪಣ್ಣವರ, ಮಲ್ಲಿಕಾರ್ಜುನ ಮುತ್ತಾಳ, ಸತೀಶ ನಾಯ್ಕರ, ಶಿವಾಜಿ ರಾಣೊಜಿ, ಆನಂದ ಹಿರೇಕೇರಿ, ಆನಂದ ದೇಶಮುಖ, ಸಂತೋಷ ಅಂಚಟಗೇರಿ ಮತ್ತಿತರರು ಇದ್ದರು.