ದೇಶ ಅಭಿವೃದ್ಧಿಗೆ ಎಂಜನಿಯರ್‌ಗಳ ಕೊಡುಗೆ ಅಪಾರ: ರಾಜೇಂದ್ರ ಕಲ್ಪಾವಿ

KannadaprabhaNewsNetwork |  
Published : Sep 19, 2025, 01:03 AM IST
ಮೂಲ್ಕಿ ಇಂಜಿನಿಯರ್ಸ್ ಡೇ ಹಾಗೂ ಪ್ರಶಸ್ತಿ ಪ್ರದಾನ | Kannada Prabha

ಸಾರಾಂಶ

ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಮೂಲ್ಕಿಯ ಕಾರ್ನಾಡ್ ರೋಟರಿ ಶತಾಬ್ದ ಭವನದಲ್ಲಿ ಇಂಜಿನಿಯರ್ಸ್ ಡೇ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿತು.

ಮೂಲ್ಕಿ: ದೇಶದ ಅಭಿವೃದ್ದಿಯಲ್ಲಿ ಎಂಜಿನಿಯರ್‌ಗಳ ಕೊಡುಗೆ ಮಹತ್ತರದಾಗಿದ್ದು ಎಂಜಿನಿಯರ್ ಗಳು ಹಿಂದಿನ ಸವಾಲಿನ ದಿನಗಳಲ್ಲಿ ತಮ್ಮ ಅಸ್ತಿತ್ವ ಉಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಅಸೋಸಿಯೇಷನ್‌ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ಹೇಳಿದ್ದಾರೆ.

ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಮೂಲ್ಕಿಯ ಕಾರ್ನಾಡ್ ರೋಟರಿ ಶತಾಬ್ದ ಭವನದಲ್ಲಿ ಜರಗಿದ ಇಂಜಿನಿಯರ್ಸ್ ಡೇ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಅಸೋಸಿಯೇಷನ್‌ ಆಫ್ ಸಿವಿಲ್ ಇಂಜಿನಿಯರ್ಸ್‌ ಮೂಲ್ಕಿಯ ಅಧ್ಯಕ್ಷ ಜೀವನ್ ಕೆ. ಶೆಟ್ಟಿ ಕಾರ್ನಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಾಗಿ ಎನ್.ಎಂ.ಎ.ಎಂ.ಐ.ಟಿ-ನಿಟ್ಟೆ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ-ಪ್ರಾಧ್ಯಾಪಕ ಡಾ. ಶ್ರೀರಾಮ್ ಪಿ. ಮರಾಠಿ ಅವರನ್ನು ಸನ್ಮಾನಿಸಲಾಯಿತು. ನೂತನವಾಗಿ ಸ್ಥಾಪಿಸಲಾದ ‘ಪ್ರೊ. ಜಿ.ಆರ್. ರೈ ಟಾಪ್ ಗ್ರಾಜುಯೇಟ್ ಅವಾರ್ಡ್’ನ್ನು 2024-25ನೇ ಸಾಲಿನ ಸಿವಿಲ್ ಎಂಜಿನಿಯರಿಂಗ್ ಟಾಪರ್ ಅನುಷಾ ಎಂ. ನಾಯಕ್ ಅವರಿಗೆ ಪ್ರದಾನ ಮಾಡಲಾಯಿತು.ಉಡುಪಿ ಎಸಿಸಿಇಎ ಅಧ್ಯಕ್ಷ ನಾಗೇಶ್ ಹೆಗ್ಡೆ, ಮಂಗಳೂರು ಸ್ಮಾರ್ಟ್ ಸಿಟಿ ಮಹಾಪ್ರಬಂಧಕ ಅರುಣ್ ಪ್ರಭಾ ಕೆ ಎಸ್., ಕೆನರಾ ಬಿಲ್ಡರ್ಸ್ ಅಸೋಸಿಯೇಷನ್‌ ಅಧ್ಯಕ್ಷ ಟಿ. ವಿನಾಯಕ ಪೈ, ರೋಟರಿ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಡಾ. ದೇವದಾಸ್ ಜಿ. ರೈ, ವಿವಿಧ ಎಂಜಿನಿಯರಿಂಗ್ ಅಸೋಸಿಯೇಷನ್‌ಗಳ ಅಧ್ಯಕ್ಷ ಅರುಣ್‌ರಾಜ್ ಮಂಗಳೂರು, ಗಣೇಶ್ ಪ್ರಸಾದ್ ಶೆಟ್ಟಿ ಬ್ರಹ್ಮಾವರ, ಸುರೇಶ್ ಬಂಗೇರ ಎಂ.ಡಿ. ಬೆಳ್ತಂಗಡಿ, ಶಿವರಾಮ್ ಎಂ.ಎಸ್. ಪುತ್ತೂರು,ಮತ್ತು ಸತೀಶ್ ಶೆಟ್ಟಿ ಕುಂದಾಪುರ, ಪ್ರಕಾಶ್ ಆಚಾರ್ಯ ಕಾರ್ಕಳ, ಎಂಜಿನಿಯರಿಂಗ್ ಅಸೋಸಿಯೇಷನ್ ನ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ವಿಜಯ್ ಕುಮಾರ್ ಶೆಟ್ಟಿ ಕೊಲ್ನಾಡು ಮತ್ತಿತರರಿದ್ದರು.ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜೇಮ್ಸ್ ಪೀಟರ್ ಡಿಸೋಜಾ ಸಾಗತಿಸಿದರು. ನಿತ್ಯಾ ಶೆಟ್ಟಿ ಪಂಜ ನಿರೂಪಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ