ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಭಾಷೆ ಜಾರಿ: ಪದ್ಮಾವತಿ

KannadaprabhaNewsNetwork |  
Published : Jun 02, 2026, 01:45 AM IST
ಸೂಲಿಬೆಲೆ ಬಸ್ಟಾಂಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಹಾಗೂ ಪೋಷಕರ ಶಿಕ್ಷಕರ ಮಹಾಸಭೆಯನ್ನು ಡಯಟ್ ಉಪನ್ಯಾಸಕಿ ಪದ್ಮಾವತಿ ಗ್ರಾಪಂ.ಅಧ್ಯಕ್ಷ ಜನಾರ್ಧನರೆಡ್ಡಿ ಉದ್ಘಾಟಿಸಿದರು, ಶಾಲಾ ಅಧ್ಯಕ್ಷ ನಾಗರಾಜ್, ಮುಖ್ಯಶಿಕ್ಷಕಿ ಸುಮಿತ್ರಮ್ಮ, ಜೇನುಗೂಡು ಟ್ರಸ್ಟ್ನ ಬೆಟ್ಟಹಳ್ಳಿ ಗೋಪಿನಾಥ್ ಇತರರು ಇದ್ದರು. | Kannada Prabha

ಸಾರಾಂಶ

ಸೂಲಿಬೆಲೆ: ಪೋಷಕರಲ್ಲಿರುವ ಆಂಗ್ಲ ಭಾಷಾ ವ್ಯಾಮೋಹ ತೊಲಗಿಸಲು ಸರ್ಕಾರಿ ಶಾಲೆಗಳಲ್ಲೂ ಕಡ್ಡಾಯವಾಗಿ ದ್ವಿಭಾಷಾ ಪಠ್ಯಕ್ರಮ ಅಳವಡಿಸಲಾಗಿದೆ ಎಂದು ಜಿಲ್ಲಾ ಡಯಟ್ ಉಪನ್ಯಾಸಕಿ ಪದ್ಮಾವತಿ ಹೇಳಿದರು

ಸೂಲಿಬೆಲೆ: ಪೋಷಕರಲ್ಲಿರುವ ಆಂಗ್ಲ ಭಾಷಾ ವ್ಯಾಮೋಹ ತೊಲಗಿಸಲು ಸರ್ಕಾರಿ ಶಾಲೆಗಳಲ್ಲೂ ಕಡ್ಡಾಯವಾಗಿ ದ್ವಿಭಾಷಾ ಪಠ್ಯಕ್ರಮ ಅಳವಡಿಸಲಾಗಿದೆ ಎಂದು ಜಿಲ್ಲಾ ಡಯಟ್ ಉಪನ್ಯಾಸಕಿ ಪದ್ಮಾವತಿ ಹೇಳಿದರು.

ಸೂಲಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ, ಪಠ್ಯಪುಸ್ತಕ ವಿತರಣೆ ಹಾಗೂ ಪೋಷಕರ-ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯಲ್ಲಿ ಎಲ್‌ಕೆಜಿಯಿಂದ ೯ನೇ ತರಗತಿವರೆಗೆ ಕಲಿಯುವ ಅವಕಾಶವಿದೆ. ಮುಂದಿನ ವರ್ಷದಿಂದ ೧೦ನೇ ತರಗತಿ ಪ್ರಾರಂಭವಾಗಲಿದೆ ಎಂದರು.

ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ ಮಾತನಾಡಿ, ಪೋಷಕರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದರು.

ಮುಖ್ಯಶಿಕ್ಷಕಿ ಸುಮಿತ್ರಮ್ಮ ಮಾತನಾಡಿ, ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಕೇವಲ ಶಿಕ್ಷಕರಿಗೆ ಮಾತ್ರ ಸಿಮಿತವಲ್ಲ. ಪೋಷಕರು ಮತ್ತು ಶಿಕ್ಷಕರ ಹೊಣೆಗಾರಿಕೆ ನಿಭಾಯಿಸಬೇಕು. ಅಗತ್ಯ ಸಭೆಗಳನ್ನು ನಡೆಸಿ ಸಮುದಾಯ ಮತ್ತು ಶಿಕ್ಷಕರು ಶಾಲೆ ನಡುವಣ ಸೇತುವೆ ಬೆಸೆಯಬೇಕು ಎಂದು ಕರೆ ನೀಡಿದರು.

ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ನಾಗರಾಜ ಮಾತನಾಡಿ, ಮಕ್ಕಳಿಗೆ ಅಗತ್ಯ ಸವಲತ್ತುಗಳನ್ನು ಸರ್ಕಾರದ ಜೊತೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸಹ ಒದಗಿಸಿಕೊಟ್ಟಿದ್ದಾರೆ. ನಾವು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬದ್ದರಾಗಿದ್ದು ಮಕ್ಕಳು ತಮ್ಮ ಅಕ್ಕ ತಂಗಿ ತಮ್ಮರನ್ನು ಸರ್ಕಾರಿ ಶಾಲೆಗೆ ಸೇರಿಸುವ ರಾಯಬಾರಿಗಳಾಗಬೇಕು ಎಂದರು.

ಈ ವೇಳೆ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸಮಿತಾ, ಸದಸ್ಯರಾದ ಶ್ರೀನಿವಾಸ್, ನರಸಿಂಹಮೂರ್ತಿ, ಪಾರ್ವತಮ್ಮ,, ಜೇನುಗೂಡು ಟ್ರಸ್ಟ್ ನಿರ್ದೇಶಕ ಸೈಯದ್ ಮಹಬೂಬ್, ನಯಾಜ್‌ಖಾನ್, ಬೆಟ್ಟಹಳ್ಳಿ ಗೋಪಿನಾಥ್, ಶಿಕ್ಷಕರಾದ ಸೌಮ್ಯ, ರಾಧಿಕಾ, ಶಿಲ್ಪಾ, ಇತರರಿದ್ದರು.

(ಫೋಟೋ ಕ್ಯಾಫ್ಞನ್‌)

ಸೂಲಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ ಹಾಗೂ ಪೋಷಕರ-ಶಿಕ್ಷಕರ ಮಹಾಸಭೆಯನ್ನು ಡಯಟ್ ಉಪನ್ಯಾಸಕಿ ಪದ್ಮಾವತಿ, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ವೆಚ್ಚ ಕಡಿಮೆ ಮಾಡಿಕೊಳ್ಳುವ ಕುರಿತ ಜಾಗೃತಿ ಮೂಡಿಸಿ
ರಜೆ ಬಳಿಕ ಶಾಲೆಗೆ ಮರಳಿದ ಮಕ್ಕಳಿಗೆ ಗುಲಾಬಿ ಹೂ ಜೊತೆ ಸಿಹಿ ಸ್ವಾಗತ