ಕನ್ನಡಪ್ರಭ ವಾರ್ತೆ ಉಡುಪಿ
ನಂತರ ಮಾತನಾಡಿದ ಅವರು, ಒಂದು ವಾರಗಳ ಕಾಲ ನಡೆಯುವ ಈ ಶಿಬಿರದಲ್ಲಿ ಯುವ ವಿದ್ಯಾರ್ಥಿಗಳ ಕಲರವ ನಡೆಯಲಿದೆ. ದಿನನಿತ್ಯದ ವ್ಯವಸ್ಥಿತ ಜೀವನ ಕ್ರಮದಿಂದ ಹೊರತಾದ ಈ ಶಿಬಿರ ಸಹಬಾಳ್ವೆಯ ಹೊಸ ಅನುಭವ ನೀಡಲಿದೆ ಎಂದರು.ಸಮಾರಂಭದ ಮುಖ್ಯ ಅತಿಥಿಗಲಾಗಿ ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಮಿತಿ ಅಧ್ಯಕ್ಷ ನಟರಾಜ್ ಪೂಜಾರಿ, ಎಂಜಿಎಂ ಕಾಲೇಜಿನ ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ ಪೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ಎಸ್. ನಾಯ್ಕ, ಮಾಹೆಯ ಸಾಂಸ್ಕೃತಿಕ ಕೇಂದ್ರಗಳ ಆಡಳಿತಾಧಿಕಾರಿ ಡಾ. ಜಗದೀಶ್ ಶೆಟ್ಟಿ ಆಗಮಿಸಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಐಕ್ಯೂಎಸಿ ಸಂಯೋಜಕಿ ಪ್ರೊ. ಶೈಲಜಾ, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ. ಸರಸ್ವತಿ ಟಿ. ಉಪಸ್ಥಿತರಿದ್ದರು.ಶಿಬಿರಾಧಿಕಾರಿ ಸುಚಿತ್ ಕೋಟ್ಯಾನ್ ಸ್ವಾಗತಿಸಿದರು. ಘಟಕ ಎರಡರ ಶಿಬಿರಾಧಿಕಾರಿ ರೇಖಾ ಎನ್. ಚಂದ್ರ ಪ್ರತಿಜ್ಞಾವಿಧಿ ಬೋಧಿಸಿದರು. ಸ್ವಯಂಸೇವಕಿ ರಶ್ಮಿತಾ ನಾಯಕ್ ವಂದಿಸಿ, ಎನ್‌ಎಸ್‌ಎಸ್ ನಾಯಕಿ ಅಂಜಲಿ ಕಾರ್ಯಕ್ರಮ ನಿರೂಪಿಸಿದರು.