ಎನ್ನೆಸ್ಸೆಸ್‌ ಶಿಬಿರಗಳು ಸ್ವಾವಲಂಬಿ ಬದುಕಿಗೆ ಪ್ರೇರಣೆ: ಡಾ.ವಿ. ಎಸ್. ಕಟಗಿಹಳ್ಳಿಮಠ

KannadaprabhaNewsNetwork |  
Published : Jul 07, 2024, 01:17 AM IST
(ಫೋಟೊ 6ಬಿಕೆಟಿ6, ಬಿವ್ಹಿವ್ಹಿ ಸಂಘದ ಆಡಳಿತಾಧಿಕಾರಿ ಡಾ.ವ್ಹಿ.ಎಸ್.ಕಟಗಿಹಳ್ಳಿಮಠ ಮಾತನಾಡಿದರು.) | Kannada Prabha

ಸಾರಾಂಶ

ಜೀವನದದಲ್ಲಿ ಸ್ವಾವಲಂಬಿಯಾಗಿ ಬದುಕಬೇಕಾದರೆ ವಿದ್ಯಾರ್ಥಿ ದೆಸೆಯಿಂದಲೆ ಕಲೆ, ಕೌಶಲ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಅದು ಸಾಧ್ಯ ಎಂದು ಬಿವಿವಿ ಸಂಘದ ಆಡಳಿತಾಧಿಕಾರಿ ಡಾ.ವಿ.ಎಸ್. ಕಟಗಿಹಳ್ಳಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜೀವನದದಲ್ಲಿ ಸ್ವಾವಲಂಬಿಯಾಗಿ ಬದುಕಬೇಕಾದರೆ ವಿದ್ಯಾರ್ಥಿ ದೆಸೆಯಿಂದಲೆ ಕಲೆ, ಕೌಶಲ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಅದು ಸಾಧ್ಯ ಎಂದು ಬಿವಿವಿ ಸಂಘದ ಆಡಳಿತಾಧಿಕಾರಿ ಡಾ.ವಿ.ಎಸ್. ಕಟಗಿಹಳ್ಳಿಮಠ ಹೇಳಿದರು.

ನಗರದ ಮುಚಖಂಡಿ ಗ್ರಾಮದಲ್ಲಿ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಏಳು ದಿನದ ವಾರ್ಷಿಕ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲರೂ ನಿಸರ್ಗದ ಕೂಸು. ಅದನ್ನು ಕಾಪಾಡುವುದು ನಮ್ಮ ಹೊಣೆಯಾಗಿದ್ದು, ಸಮುದಾಯಗಳ ಅಮೃತಗೊಳಿಸುವ ಅಥವಾ ಶುದ್ಧಗೊಳಿಸುವ ಧ್ಯೇಯ ನಮ್ಮದಾಗಬೇಕು ಎಂದರು.

ಅನುಭವದ ಕಲಿಕೆಗಿಂತ ಮತ್ತೊಂದು ಶಿಕ್ಷಣವಿಲ್ಲ. ಶಿಬಿರಗಳು ಜೀವನದಲ್ಲಿ ಬರುವ ಸವಾಲುಗಳನ್ನು ಎದರಿಸುವ ಧೈರ್ಯವನ್ನು ಕಲಿಸುತ್ತವೆ. ತ್ಯಾಗ ಮತ್ತು ಸೇವಾ ಮನೋಭಾವದಿಂದ ಮಾಡುವ ಕೆಲಸಗಳು ಸಂತೃಪ್ತಿ ನೀಡುತ್ತದೆ ಎಂದು ಹೇಳಿದರು.

ಮುಧೋಳದ ಎಸ್.ಆರ್. ಕಂಠಿ ಮಾಹಾವಿದ್ಯಾಲದ ವಿಶ್ರಾಂತ ಪ್ರಾಚಾರ್ಯ ಎನ್.ಆರ್. ಹಳ್ಳೂರ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ನಿಷ್ಠೆ ಮತ್ತು ಪ್ರಮಾಣಿಕತೆ ಇದ್ದರೆ ಯಶಸ್ಸು ಸುಲಭವಾಗುತ್ತದೆ. ವಿದ್ಯಾರ್ಥಿಗಳು ಪ್ರೀತಿ, ಪ್ರೇಮದ ಬಂಧನಕ್ಕೊಳಗಾಗದೆ ತಂದೆ-ತಾಯಿಗೆ, ಗುರುಗಳು ನಂಬಿಕೆಗೆ ಅರ್ಹರಾಗಿ ಉತ್ಕೃಷ್ಟರಂತೆ ಬದುಕಿ ಎಂದರು. ಪ್ರಾಧ್ಯಾಪಕರುದೇಶದ ನಿರ್ಮಾಪಕ, ಅಧ್ಯಾಪಕ ವೃತ್ತಿ ತಪಸ್ವಿ ಇದ್ದಹಾಗೆ. ವಿದ್ಯಾರ್ಥಿಗಳು ಗೌರವ ತಪಸ್ವಿಹಾಗೆ ಮನೋಶಕ್ತಿ, ಏಕಾಗ್ರತೆ, ಸಮಯಪರಿಪಾಲನೇ ಗಳಿಸುವ ಜೋತೆಗೆರಾಷ್ಟ್ರಧರ್ಮಕಾಪಾಡಬೇಕು ನಮ್ಮಲ್ಲಿರುವ ಮೌಲ್ಯಗಳೇ ನಮ್ಮಜೀವನವನ್ನು ನಿರ್ದರಿಸುತ್ತವೆಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಎಸ್.ಆರ್. ಮೂಗನೂರಮಠ, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿದ್ದರೆ ಏನಾನ್ನಾದರೂ ಸಾಧಿಸಬಹುದು. ಸತ್ಯಯುತವಾಗಿ ನಡೆಯಬೇಕು, ಶಿಬಿರದಲ್ಲಿ ಕಲಿತ ನಾಯಕತ್ವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ಸಂಗೀತ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಮಠ, ಎನ್‌.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಎಂ.ಎಚ್. ವಡ್ಡರ, ಡಾ.ವಿರೂಪಾಕ್ಷ ಎನ್.ಬಿ. ಸೇರಿದಂತೆ ಶಿಬಿರಾರ್ಥಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ