ಹುಬ್ಬಳ್ಳಿ:
ಇಲ್ಲಿನ ಕೆಎಲ್ಇ ಕಾಲೇಜ್ನಲ್ಲಿ ಶನಿವಾರ ರಾತ್ರಿ ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಸಂಕನೂರ ಅವರನ್ನು ಎರಡು ಬಾರಿ ಆಯ್ಕೆ ಮಾಡಿದ್ದರೂ ಪದವೀಧರರ ಬಗ್ಗೆ ಧ್ವನಿ ಎತ್ತಿದ್ದು ನೋಡಿಯೇ ಇಲ್ಲ. ಅವರಿನ್ನು ಸಾಕು ಮನೆಗೆ ಕಳುಹಿಸಿ ಎಂದ ಅವರು, ಲಿಂಬಿಕಾಯಿ ಅತ್ಯಂತ ಸಮರ್ಥ ಅಭ್ಯರ್ಥಿ. ಟಿಕೆಟ್ ಘೋಷಣೆಗೂ ಮುನ್ನ ಸಮೀಕ್ಷೆ ನಡೆಸಿದ್ದೆ. ಶೇ. 80ರಷ್ಟು ಮೋಹನ ಲಿಂಬಿಕಾಯಿ ಪರವಾಗಿ ಅಭಿಪ್ರಾಯ ಬಂದಿದ್ದರಿಂದ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದರು.
ನಾವೇ ಮೊದಲು ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇವೆ. ಹೀಗಾಗಿ ಯಾರನ್ನು ನಿಲ್ಲಿಸುವುದು ಎಂಬುದು ತಿಳಿಯದೇ ಕೊನೆಗೆ ಸಂಕನೂರ ಅವರಿಗೆ ಟಿಕೆಟ್ ನೀಡಿ ಬಿಜೆಪಿ ನಿಲ್ಲಿಸಿದೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಚುನಾವಣೆಗೂ ಮುನ್ನ ಕೊಟ್ಟಂತಹ ಮಾತು ಉಳಿಸಿಕೊಂಡ ಸರ್ಕಾರ ನಮ್ಮದು. ಸಾಕಷ್ಟು ಕಷ್ಟ ಇದ್ದರೂ ಗ್ಯಾರಂಟಿ ಯೋಜನೆ ಬಿಟ್ಟಿಲ್ಲ. ಶಿಕ್ಷಕರಿಗೆ ಹಾಗೂ ಎಂಜಿನಿಯರ್ಗಳಿಗೆ ಟಿಆರ್, ಇಆರ್ ಬಳಸಲು ಸರ್ಕಾರ ಆದೇಶಿಸಿದೆ. ಆಡಳಿತ ಪಕ್ಷಕ್ಕೆ ಮತ ಚಲಾಯಿಸುವುದರಿಂದ ಸಾಕಷ್ಟು ಅನುಕೂಲ. ಆದಕಾರಣ ಮೋಹನ ಲಿಂಬಿಕಾಯಿ ಅವರಿಗೆ ಮತ ಚಲಾಯಿಸುವ ಮೂಲಕ ಸರ್ಕಾರದ ಕೈ ಬಲ ಪಡಿಸಬೇಕು ಎಂದು ಹೇಳಿದರು.
ಸಚಿವ ಸಂತೋಷ ಲಾಡ್, ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಮುಖಂಡರಾದ ಎಚ್.ಎಂ. ರೇವಣ್ಣ, ಶಾಸಕರಾದ ಶ್ರೀನಿವಾಸ ಮಾನೆ, ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ, ಯಾಸೀರ್ಖಾನ ಪಠಾಣ, ಬಿ.ಆರ್. ಯಾವಗಲ್, ಮಹಾಂತೇಶ ಕೌಜಲಗಿ, ಅಜ್ಜಂಪೀರ ಖಾದ್ರಿ ಸೇರಿದಂತೆ ಹಲವರಿದ್ದರು.