ಕನ್ನಡಪ್ರಭ ವಾರ್ತೆ ಪಾಂಡವಪುರ
ರಾಜ್ಯ ಹಿಂದುಳಿದ ವರ್ಗ ಆಯೋಗದಿಂದ ಹಮ್ಮಿಕೊಂಡಿರುವ ಜಾತಿ ಗಣತಿಯಲ್ಲಿ ಸರ್ಕಾರದ ಮೀಸಲಾತಿ ಮತ್ತು ಸೌಲತ್ತುಗಳನ್ನು ಪಡೆಯಲು ವಿಶ್ವಕರ್ಮ ಸಮುದಾಯದವರು ವಿಶ್ವಕರ್ಮ ಎಂದೇ ನಮೂದಿಸಬೇಕು ಎಂದು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎನ್.ಬಸವರಾಜ್ ಮಂಡಿಬೆಟ್ಟಹಳ್ಳಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜದವರು ಗಣತಿ ವೇಳೆ ನಿಮ್ಮ ಮನೆ ಬಳಿಗೆ ಬಂದಾಗ ವಿಶ್ವಕರ್ಮ ಬಂಧುಗಳೆಲ್ಲರೂ ಜಾತಿ ಕಲಂ ನಂ.9 ರಲ್ಲಿ ಸರ್ಕಾರದ ಗೆಜೆಟ್ ನಂ.ಎ-1538, ಜಾತಿ ವಿಶ್ವಕರ್ಮ, ಧರ್ಮ-ಹಿಂದೂ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದರು.
ತಮ್ಮ ಉಪ ಜಾತಿಯ ಕಾಲಂನಲ್ಲಿಯೂ ಸಹ ‘ವಿಶ್ವಕರ್ಮ’ ಜಾತಿಯನ್ನು ನಮೂದಿಸಬೇಕು. ಈ ಬಗ್ಗೆ ಸಂಘ-ಸಂಸ್ಥೆಗಳ ಎಲ್ಲಾ ಅಧ್ಯಕ್ಷರು, ಮತ್ತು ಪದಾಧಿಕಾರಿಗಳು ಸಮಾಜದ ಹಿರಿಯ ಮುಖಂಡರು, ಮಹಿಳಾ ಸಂಘ-ಸಂಸ್ಥೆಗಳು, ಸದಸ್ಯರು, ಕಡ್ಡಾಯವಾಗಿ ಈ ಸಮೀಕ್ಷೆಯಲ್ಲಿ ಮಾರ್ಗದರ್ಶನ ನೀಡಬೇಕು ಎಂದರು.ನಮ್ಮ ಕುಟುಂಬಗಳ ವಿವರಗಳನ್ನು ಸಮೀಕ್ಷೆದಾರರಿಗೆ ನೀಡಿ ನಮ್ಮಗಳ ಜನಸಂಖ್ಯೆಯ ನಿಖರವಾದ ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಚಿಕ್ಕಾಡೆ ಭಾಸ್ಕರಚಾರ್, ನಿರ್ದೇಶಕ ಗಾಣದಹೊಸೂರು ಸಂಪತ್ತಾಚಾರ್ ಇತರರಿದ್ದರು.ಕ್ಷಯರೋಗಿಗಳಿಗೆ ಫುಡ್ ಕಿಟ್ ವಿತರಣೆ
ಮದ್ದೂರು:ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ಕೆ.ಎಂ.ದೊಡ್ಡಿ ವ್ಯಾಪ್ತಿಯ ಕ್ಷಯ ರೋಗಿಗಳಿಗೆ ಡಾ.ಜಗದೀಶ್ ಫುಡ್ ಕಿಟ್ ವಿತರಿಸಿದರು. ನಂತರ ಮಾತನಾಡಿದ ಅವರು, ಈಗಾಗಲೇ ಸೋಮನಹಳ್ಳಿ ಹೈಟೆನ್ ಫಾಸ್ಟನರ್ ಕಂಪನಿ ಕಳೆದ 2 ವರ್ಷಗಳಿಂದ ಪ್ರತಿ ತಿಂಗಳು 50 ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಂಡು ಫುಡ್ ಕಿಟ್ ಕೊಡುತ್ತಿದೆ ಎಂದರು. ರೋಗಿಗಳಿಗೆ ಪೌಷ್ಠಿಕ ಆಹಾರದ ಅವಶ್ಯಕತೆ ಇದ್ದು, ದಾನಿಗಳು ಕ್ಷಯ ರೋಗಿಗಳನ್ನು ದತ್ತು ಪಡೆದು ಫುಡ್ ಕಿಟ್ ಕೊಟ್ಟರೆ ರೋಗಿಗಳಿಗೆ ಅನುಕೂಲವಾಗುವ ಸಂಪೂರ್ಣ ಗುಣಮುಖರಾಗಲು ಸಹಾಯವಾಗುತ್ತದೆ. ಆದ್ದರಿಂದ ಕ್ಷಯ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು. ಈ ವೇಳೆ ಎಸ್ ಟಿಎಸ್ ಕೆಂಪೇಗೌಡ, ಫಾರ್ಮಸಿ ಆಧಿಕಾರಿ ತೇಜಸ್ವಿ ರವರು ಹಾಜರಿದ್ದರು.