ರಾಷ್ಟ್ರ, ಅಂತಾರಾಷ್ಟ್ರೀಯ ಈಜು ಪಟುಗಳಿಗೆ ಪ್ರವೇಶ ಉಚಿತ, ತರಬೇತಿಗೆ ಮಾತ್ರವೇ ಶುಲ್ಕ: ಎಮ್ಮೆಕೆರೆ ಈಜುಕೊಳ ನಿರ್ದೇಶಕ

KannadaprabhaNewsNetwork |  
Published : Jun 07, 2025, 02:55 AM ISTUpdated : Jun 07, 2025, 02:56 AM IST
ಎಮ್ಮೆಕೆರೆ ಈಜು ಕೊಳ ನಿರ್ದೇಶಕ ನವೀನ್‌ ಸುದ್ದಿಗೋಷ್ಠಿ  | Kannada Prabha

ಸಾರಾಂಶ

ಎಮ್ಮೆಕೆರೆ ಈಜುಕೊಳದಲ್ಲಿ ತರಬೇತಿಗೆ ಮಾತ್ರ ಈಜು ಪಟುಗಳಿಂದ ಶುಲ್ಕ ಪಡೆಯಲಾಗುತ್ತದೆ ಎಂದು ಎಮ್ಮೆಕೆರೆ ಈಜುಕೊಳದ ನಿರ್ದೇಶಕ ನವೀನ್‌ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಎಮ್ಮೆಕೆರೆ ಈಜುಕೊಳದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಈಜು ಪಟುಗಳಿಗೆ ಪ್ರವೇಶ ಉಚಿತವಾಗಿಯೇ ನೀಡಲಾಗುತ್ತದೆ. ಈಜುಕೊಳದಲ್ಲಿ ಉತ್ತಮ ಗುಣಮಟ್ಟದ ತರಬೇತಿಗಾಗಿ ಎನ್‌.ಐ.ಎಸ್‌. ಶಿಕ್ಷಣ ಹೊಂದಿರುವ ವಿಶ್ವಾಮಿತ್ರ ಪ್ರಶಸ್ತಿ ಪಡೆದ ತರಬೇತುದಾರರನ್ನು ನೇಮಕ ಮಾಡಲಾಗಿದ್ದು, ಆ ಹಿನ್ನೆಲೆಯಲ್ಲಿ ತರಬೇತಿಗೆ ಮಾತ್ರ ಈಜು ಪಟುಗಳಿಂದ ಶುಲ್ಕ ಪಡೆಯಲಾಗುತ್ತದೆ ಎಂದು ಎಮ್ಮೆಕೆರೆ ಈಜುಕೊಳದ ನಿರ್ದೇಶಕ ನವೀನ್‌ ಸ್ಪಷ್ಟಪಡಿಸಿದ್ದಾರೆ.

ಎಮ್ಮೆಕೆರೆ ಈಜುಕೊಳದ ಕುರಿತಂತೆ ದ.ಕ. ಈಜು ಸಂಸ್ಥೆ ಮಾಡಿರುವ ಆರೋಪಕ್ಕೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಸ್ಪಷ್ಟನೆ ನೀಡಿದರು.

ಈಜುಕೊಳದಲ್ಲಿ ಸಾರ್ವಜನಿಕರಿಗೆ, ಮಕ್ಕಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರವೇಶಕ್ಕೆ ಅವಕಾಶವಿದೆ. ಒಟ್ಟು 80 ಮಂದಿ ಈಜುಪಟುಗಳು ಎಮ್ಮೆಕೆರೆಯಲ್ಲಿ ಸದ್ಯ ತರಬೇತು ಪಡೆಯುತ್ತಿದ್ದಾರೆ. ಈಜು ಗೊತ್ತಿಲ್ಲದವರಿಗೆ ಈಜು ಕಲಿಸಲು ಹಾಗೂ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಲೆವೆಲ್‌ 1 ರಿಂದ ಲೆವೆಲ್‌ 7ರ ವರೆಗೆ ತರಬೇತಿ ನೀಡುವ ಎನ್‌ಐಎಸ್‌ ತರಬೇತುದಾರರನ್ನು ನಿಯೋಜಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳ ನಿರ್ವಹಣೆಗಾಗಿ ಮುಚ್ಚಲ್ಪಟ್ಟಾಗ ಮಂಗಳ ಸ್ವಿಮ್ಮಿಂಗ್‌ ಕ್ಲಬ್‌ ಹಾಗೂ ಜೈಹಿಂದ್‌ ಕ್ಲಬ್‌ಗೆ ತರಬೇತಿ ನೀಡಲು ತಾತ್ಕಾಲಿಕವಾಗಿ ಅವಕಾಶ ನೀಡಲಾಗಿತ್ತು. ಮತ್ತೆ ಪಾಲಿಕೆ ಈಜುಕೊಳ ಆರಂಭಗೊಂಡಾಗ ಜೈಹಿದ್‌ ಕ್ಲಬ್‌ನವರು ಅಲ್ಲಿಗೆ ತೆರಳಿದ್ದರು. ಮಂಗಳ ಸ್ವಿಮ್ಮಿಂಗ್‌ ಕ್ಲಬ್‌ನವರು ಇಲ್ಲಿಯೇ ಅವಕಾಶ ವಿನಂತಿಸಿದ್ದರು. ಅದಕ್ಕೆ ಸಂಜೆ 6.30ರಿಂದ 8ರವರೆಗೆ ಅವಕಾಶ ನೀಡಲಾಗಿದೆ. ಸಮಯ ಮೀರಿ ತರಬೇತಿ ನೀಡುತ್ತಿದ್ದರೂ ಆಕ್ಷೇಪಿಸಿಲ್ಲ. ಆದರೆ ತರಬೇತಿಗೆ ನಾವು ನಿಯೋಜಿಸಿರುವ ಎನ್‌ಐಎಸ್‌ ತರಬೇತುದಾರರು ತಾಂತ್ರಿಕ ಕಾರಣದಿಂದ ಸಮಯ ಬದಲಾವಣೆಗೆ ಒಪ್ಪದಾಗ ಅವರು ಮತ್ತೆ ಪಾಲಿಕೆ ಈಜುಕೊಳಕ್ಕೆ ಹೋಗುತ್ತೇವೆ ಎಂದಿದ್ದರು ಎಂದರು.

ವಿವಿಧ ಸ್ವಿಮ್ಮಿಂಗ್‌ ಕ್ಲಬ್‌ಗಳ ಪ್ರಮುಖರಾದ ರಾಮಕೃಷ್ಣ, ಡಾ. ನಾಗೇಂದ್ರ, ಲೋಕರಾಜ್‌ ವಿಟ್ಲ, ರೂಪಾ ಜಿ. ಪ್ರಭು, ಇವಾ ಇದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ