ನವಲಗುಂದ:
ಮಾಧ್ಯಮಗಳ ಎದುರು ದೂರಿನ ಪ್ರತಿ ತೋರಿಸಿ ಮಾತನಾಡಿದ ಅವರು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಕಂದಾಯ ಇಲಾಖೆ ಹಾಗೂ ವಕ್ಫ್ ಮಂಡಳಿಯ ಉನ್ನತ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿಸಿದರು .
ನವಲಗುಂದ ತಾಲೂಕಿನ ಸರ್ವೇ ನಂಬರ್ 3/2+3/2 ಮತ್ತು 3/2+3/1 ರ ಜಮೀನುಗಳು ದಶಕಗಳಿಂದ ರೈತರ ಸ್ವಾಧೀನದಲ್ಲಿದ್ದವು. 2017-18ರ ಅವಧಿಯ ವರೆಗೆ ದಾಖಲೆಗಳು ರೈತರ ಹೆಸರಿನಲ್ಲೇ ಇದ್ದವು. ಆದರೆ, ವಕ್ಫ್ ಕಾಯ್ದೆ 1995ರ ನಿಯಮಗಳನ್ನು ಗಾಳಿಗೆ ತೂರಿ, ಭೂಮಾಲೀಕರಿಗೆ ನೋಟಿಸ್ ನೀಡದೆ ಪಹಣಿಯ ಕಾಲಂ ನಂ. 9 ಮತ್ತು 11 ರಲ್ಲಿ "ವಕ್ಫ್ ಆಸ್ತಿ " ಎಂದು ಅಕ್ರಮವಾಗಿ ದಾಖಲಿಸಲಾಗಿದೆ. ರೈತರಿಗೆ ನೋಟಿಸ್ ನೀಡದೇ ಇರುವುದನ್ನು ನವಲಗುಂದ ತಹಸೀಲ್ದಾರ್ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯೇ ಒಪ್ಪಿಕೊಂಡಿದ್ದಾರೆ ಎಂದರು.ಈ ಹಿಂದೆ ಜನಾಕ್ರೋಶಕ್ಕೆ ಹೆದರಿ ''''''''ವಕ್ಫ್ ಹೆಸರು ಸೇರ್ಪಡೆ ಆದೇಶ'''''''' ಹಿಂಪಡೆಯುವ ಭರವಸೆ ನೀಡಲಾಗಿತ್ತು. ಆದರೆ, ಆದೇಶ ಹೊರಬಂದು ಎರಡು ವರ್ಷ ಕಳೆದರೂ ಇಂದಿಗೂ 35ಕ್ಕೂ ಹೆಚ್ಚು ಬಡ ರೈತರ ಪಹಣಿಗಳಲ್ಲಿ ವಕ್ಫ್ ಹೆಸರು ಹಾಗೇ ಮುಂದುವರಿದಿದ್ದು, ಇದು ರೈತರ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ ಎಂದು ದೂರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತರು ತಕ್ಷಣವೇ ಮಧ್ಯಪ್ರವೇಶಿಸಿ, ಪಹಣಿಗಳಲ್ಲಿ ಕಾನೂನುಬಾಹಿರವಾಗಿ ಸೇರಿಸಲಾಗಿರುವ ''''''''ವಕ್ಫ್ ಆಸ್ತಿ'''''''' ಎಂಬ ಹೆಸರನ್ನು ರದ್ದುಗೊಳಿಸಿ, ರೈತರ ಹೆಸರನ್ನು ಮೊದಲಿನಂತೆ ಮರುಸ್ಥಾಪಿಸಲು ಕಂದಾಯ ಇಲಾಖೆಗೆ ಆದೇಶಿಸಬೇಕು ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸಚಿವರು ಮತ್ತು ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ. ಪ್ರಸ್ತುತ ಈ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತದಲ್ಲಿ ಅಧಿಕೃತ ಕೇಸ್ ನಂಬರ್ (ಕಂಪ್ಲೇಟ್/ಲೋಕ್/ಬಿಜೆಎಂ/6512/2026) ದಾಖಲಾಗಿದೆ ಎಂದರು.