ಪರಿಸರ ದಿನಾಚರಣೆ: ಎಬಿವಿಪಿಯಿಂದ ಆಕ್ಸಿಜನ್ ಚಾಲೆಂಜ್ ಅಭಿಯಾನ

KannadaprabhaNewsNetwork |  
Published : Jun 08, 2024, 12:36 AM IST
ಎಬಿವಿಪಿ07 | Kannada Prabha

ಸಾರಾಂಶ

ಎಬಿವಿಪಿ ಉಡುಪಿ ವತಿಯಿಂದ ಬಲೈಪಾದೆ, ಮಂಚಿ, ಹಿರಿಯಡ್ಕ, ಹೆಬ್ರಿ, ಬನ್ನಂಜೆ ಸೇರಿದಂತೆ ಅನೇಕ ಹಾಸ್ಟೆಲ್‌ಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು

ಕನ್ನಡಪ್ರಭ ವಾರ್ತೆ ಉಡುಪಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎ.ಬಿ.ವಿ.ಪಿ. ರಾಷ್ಟ್ರಾದ್ಯಂತ ಕೈಗೊಳ್ಳುತ್ತಿರುವ ಆಕ್ಸಿಜನ್ ಚಾಲೆಂಜ್ ಅಭಿಯಾನ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ವಿವಿಧ ಹಾಸ್ಟೆಲ್ ಗಳಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಕೋವಿಡ್-19 ದೇಶಾದ್ಯಂತ ವ್ಯಾಪಕವಾದ ಸಂದರ್ಭದಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆಯನ್ನು ಕಂಡಿರುತ್ತೇವೆ ಮತ್ತು ಅದರ ಮಹತ್ವವನ್ನು ಸ್ಪಷ್ಟವಾಗಿ ಮನಗಂಡಿರುತ್ತೇವೆ. ಆ ಒಂದು ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ತಮ್ಮ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಸಿಜನ್ ಚಾಲೆಂಜ್ ಅಭಿಯಾನವನ್ನು ಕೈಗೊಂಡಿತ್ತು. ಒಬ್ಬ ವಿದ್ಯಾರ್ಥಿ ಗಿಡವನ್ನು ನೆಟ್ಟು ಮತ್ತೊಬ್ಬನಿಗೆ ಪ್ರೇರೇಪಿಸಿ ಕೈಗೊಂಡಂತಹ ವಿಶಿಷ್ಟ ಅಭಿಯಾನವನ್ನು ಇಂದಿಗೂ ಎಬಿವಿಪಿ ದೇಶಾದ್ಯಂತ ಮುಂದುವರೆಸಿಕೊಂಡು ಬಂದಿದೆ.

ಎಬಿವಿಪಿ ಉಡುಪಿ ವತಿಯಿಂದ ಬಲೈಪಾದೆ, ಮಂಚಿ, ಹಿರಿಯಡ್ಕ, ಹೆಬ್ರಿ, ಬನ್ನಂಜೆ ಸೇರಿದಂತೆ ಅನೇಕ ಹಾಸ್ಟೆಲ್‌ಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಎ.ಬಿ.ವಿ.ಪಿ. ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ತಾಲೂಕು ಸಂಚಾಲಕ ಅಜಿತ್ ಜೋಗಿ, ನಗರ ಕಾರ್ಯದರ್ಶಿ ಶ್ರೀವತ್ಸ, ಸಹ ಕಾರ್ಯದರ್ಶಿ ಕಾರ್ತಿಕ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ, ಮತ್ತು ಪ್ರಮುಖರಾದ ನವೀನ್, ಸ್ವಸ್ತಿಕ್, ಮನು, ಅನಂತಕೃಷ್ಣ, ಪ್ರಶ್ಮಾ, ರಕ್ಷಿತಾ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗು ಸಾವಿನ ಶಾಕ್‌ನಿಂದ ತಾಯಿಯೂ ಆತ್ಮ*ತ್ಯೆ
ಗ್ಯಾಸ್‌ಗಾಗಿ ಆಟೋ ಚಾಲಕರ ಯುದ್ಧ! - ಬಂಕ್‌ಗಳ ಮುಂದೆ ರಾತ್ರಿ ಇಡೀ ಜಾಗರಣೆ