ಜನ ಬದುಕಿ ಬಾಳಲು ಪರಿಸರ ಉಳಿವು ಅವಶ್ಯ

KannadaprabhaNewsNetwork |  
Published : Jan 29, 2026, 02:15 AM IST
28ಕೆಪಿಎಲ್8:ಕೊಪ್ಪಳ ನಗರದ ನಗರಸಭೆ ಮುಂದೆ ೯೦ನೇ  ದಿನದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ಜರುಗುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಬೆಂಬಲಿಸಿ ಚಿತ್ರದುರ್ಗ ಮದಕರಿ ಸೇನಾ ಮುಖಂಡ ಬಿ.ಟಿ. ಸೋಮೇಂದ್ರ ಮಾತನಾಡಿದರು.  | Kannada Prabha

ಸಾರಾಂಶ

ಗವಿಸಿದ್ದೇಶ್ವರ ಸ್ವಾಮೀಜಿ ಈ ಹೋರಾಟ ಆರಂಭ ಮಾಡಿದ್ದು ರಾಜ್ಯದ ಮೂಲೆ ಮೂಲೆಗೂ ಗೊತ್ತು. ಅಂತಹ ಸಾತ್ವಿಕ ಶಕ್ತಿ ಎದುರು ಹಾಕಿಕೊಳ್ಳಲು ಮುಂದಾದ ಬಲ್ಡೋಟ ಉಳಿಯಲು ಸಾಧ್ಯವಿಲ್ಲ

ಕೊಪ್ಪಳ: ಜನರು ಬದುಕಿ ಬಾಳಲು ಪರಿಸರ ಉಳಿಯಬೇಕು ಎಂದು ಚಿತ್ರದುರ್ಗ ಮದಕರಿ ಸೇನಾ ಮುಖಂಡ ಬಿ.ಟಿ. ಸೋಮೇಂದ್ರ ಹೇಳಿದರು.

ನಗರದ ನಗರಸಭೆ ಮುಂದೆ ೯೦ನೇ ದಿನದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಜರುಗುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಬೆಂಬಲಿಸಿ ಮಾತನಾಡಿದ ಅವರು, ಕೊಪ್ಪಳ ಪರಿಸರ ಹೋರಾಟ ರಾಜ್ಯದ ತುಂಭಾ ಸುದ್ದಿಯಾಗುತ್ತಿದೆ. ಇಲ್ಲಿನ ಜನ ಬದುಕಿ ಬಾಳಬೇಕು ಎನ್ನುವುದು ರಾಜ್ಯದ ಜನರ ಆಶಯವಾಗಿದೆ. ಮದಕರಿ ನಾಯಕ ಸೇನೆ ಯಾವತ್ತೂ ನಿಮಗೆ ಬೆಂಬಲ ಮಾಡುತ್ತದೆ. ಇಲ್ಲಿನ ಸಕಲ ಜೀವಿಗಳು ಪರಿಸರ ಹಾನಿಯ ಆತಂಕದಲ್ಲಿವೆ. ಇಲ್ಲಿರುವ ಗವಿಸಿದ್ದೇಶ್ವರ ಸ್ವಾಮೀಜಿ ಈ ಹೋರಾಟ ಆರಂಭ ಮಾಡಿದ್ದು ರಾಜ್ಯದ ಮೂಲೆ ಮೂಲೆಗೂ ಗೊತ್ತು. ಅಂತಹ ಸಾತ್ವಿಕ ಶಕ್ತಿ ಎದುರು ಹಾಕಿಕೊಳ್ಳಲು ಮುಂದಾದ ಬಲ್ಡೋಟ ಉಳಿಯಲು ಸಾಧ್ಯವಿಲ್ಲ. ಬಲಿಷ್ಠ ಚಳವಳಿ ಬೆಳೆಯಲು ಇದೊಂದು ಅವಕಾಶವಾಗಿದೆ. ನಿಮ್ಮ ಗೆಲುವು ರಾಜ್ಯದ ಹೋರಾಟಗಳ ಗೆಲುವಾಗಲಿದೆ ಎಂದರು.

ಚಿತ್ರದುರ್ಗ ಮದಕರಿ ನಾಯಕ ಸೇನೆಯ ಮಂಜುನಾಥ ಬೊಮ್ಮನಹಳ್ಳಿ, ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಅಧ್ಯಕ್ಷರಾಧ ಎಲ್.ಶಶಿಧರ ಗುಪ್ತಾ ಮಾತನಾಡಿದರು.

ಧರಣಿ ನೇತೃತ್ವ ವಹಿಸಿದ್ದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ.ಎಂ.ಮದರಿ, ಮಲ್ಲಿಕಾರ್ಜುನ ಬಿ. ಗೋನಾಳ, ಎಸ್.ಬಿ. ರಾಜೂರು, ಜಿ.ಬಿ. ಪಾಟೀಲ್, ಕೆ.ಬಿ.ಜಿ. ನಿವೃತ್ತ ಮ್ಯಾನೇಜರ್ ಸಿ.ಬಿ. ಪಾಟೀಲ್, ಶಂಭುಲಿಂಗಪ್ಪ ಹರಗೇರಿ, ಮೂಕಪ್ಪ ಮೇಸ್ತ್ರಿ, ಬಸಾಪುರ, ರಂಗಕರ್ಮಿ ಶರಣು ಶೆಟ್ಟರ್, ಗವಿಸಿದ್ದಪ್ಪ ತುಮ್ರಗುದ್ಧಿ, ಮಂಜುನಾಥ ಕವಲೂರು, ಮಹಾದೇವಪ್ಪ ಮಾವಿನಮಾಡು, ವಿಜಯ ಮಹಾಂತೇಶ ಹಟ್ಟಿ, ನಾಗೇಶ ಬಳಗಟ್ಟಿ, ಶಿವಪ್ಪ ಜಲ್ಲಿ, ಬಿ.ಜಿ. ಕರಿಗಾರ, ಬಸವರಾಜ ನರೇಗಲ್, ರತ್ನಮ್ಮ ದೊಡ್ಡಮನಿ, ಮಕ್ಬುಲ್ ರಾಯಚೂರು, ಸಂಜೀವಮ್ಮ ಮುಂಡರಗಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4 ದಿನದಲ್ಲಿ 37 ಜನರಿಗೆ ನಾಯಿ ಕಡಿತ, ಬಾಲಕಿ ಗಂಭೀರ - 4 ನಗರಗಳಲ್ಲಿ ಬೀದಿ ನಾಯಿ, ಹುಚ್ಚು ನಾಯಿ ಕಡಿತ
ವಿಧಾನಸಭೆಯಲ್ಲಿ ಗಂಭೀರ ಆರೋಪ - ಮತ್ತೆ ಟೆಲಿಫೋನ್‌ ಕದ್ದಾಲಿಕೆ ಗದ್ದಲ!