- ಚನ್ನಗಿರಿ ಸರ್ಕಾರಿ ನೌಕರರ ಭವನದಲ್ಲಿ ಅರಣ್ಯ-ವನ್ಯಜೀವಿಗಳ ಕುರಿತು ಚಿತ್ರಕಲಾ ಸ್ಪರ್ಧೆ । ವಿಜೇತರಿಗೆ ಬಹುಮಾನ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪರಿಸರ ಮತ್ತು ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವಂತಹ ಮನೋಭಾವನೆಗಳು ವಿದ್ಯಾರ್ಥಿಗಳಲ್ಲಿ ಮೂಡಲಿ ಎಂಬ ಉದ್ದೇಶದಿಂದ ಕನ್ನಡಪ್ರಭ ದಿನಪತ್ರಿಕೆ ನಡೆಸುತ್ತಿರುವ ಕರ್ನಾಟಕ ಅರಣ್ಯ- ವನ್ಯಜೀವಿ ಎಂಬ ವಿಷಯ ಕುರಿತ ಚಿತ್ರಕಲೆ ಸ್ಪರ್ಧೆ ಪರಿಸರ ಕಾಳಜಿ ಮೂಡಿಸಲು ಸಹಕಾರಿಯಾಗಿದೆ. ಇಂತಹ ಸ್ಪರ್ಧಾ ಕಾರ್ಯಕ್ರಮ ಕನ್ನಡಪ್ರಭ ಹೊಂದಿರುವ ಪರಸರ ಕಾಳಜಿಯನ್ನು ತೋರುತ್ತದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್.ಗಣೇಶ್ ಹೇಳಿದರು.ಶುಕ್ರವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯದ ಅರಣ್ಯ ಮತ್ತು ವನ್ಯಜೀವಿಗಳ ಕುರಿತು ನಡೆಸಿದ ಚಿತ್ರಕಲಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಪರಿಸರದಲ್ಲಿ ಏನಾದರೂ ಏರು-ಪೇರುಗಳಾದಾಗ ಜನಜೀವನ ಅಸ್ತವ್ಯಸ್ತ ಆಗಲಿದೆ. ಆದರೆ, ಅರಣ್ಯ ಸಂಪತ್ತು ಇದ್ದರೆ ಕಾಲಮಾನಕ್ಕೆ ತಕ್ಕಂತೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲಗಳು ಬರಲಿವೆ. ಅರಣ್ಯ ಮತ್ತು ವನ್ಯಜೀವಿಗಳು ನಮ್ಮ ದೇಶದ ಸಂಪತ್ತುಗಳಾಗಿವೆ. ವನ್ಯಜೀವಿಗಳು, ಅರಣ್ಯ ಸಂಪತ್ತನ್ನು ಪ್ರೀತಿಸೋಣ, ರಕ್ಷಿಸೋಣ ಎಂದರು.
ಕನ್ನಡಪ್ರಭ ವರದಿಗಾರ ಬಾ.ರಾ.ಮಹೇಶ್ ಸಮಾರಂಭದಲ್ಲಿ ಮಾತನಾಡಿ, ತಾಲೂಕುಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದವರು ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು. ಈ ಸ್ಪರ್ಧೆಯಲ್ಲೂ ಆಯ್ಕೆಯಾದವರು ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದರು.
ಚಿತ್ರಕಲಾ ಶಿಕ್ಷಕ ಪುಂಡಲೀಕ, ಶಿಕ್ಷಕರಾದ ಉಮೇಶ್, ಸಂಪನ್ಮೂಲ ಶಿಕ್ಷಕರಾದ ಪ್ರಭಾಕರ್, ಪ್ರಭು, ಸರ್ಕಾರಿ ಬಾಲಿಕಾ ಪ್ರೌಢಶಾಲೆ ಶಿಕ್ಷಕಿ ಹೇಮಾವತಿ, ತರಳಬಾಳು ಶಾಲೆಯ ಶಿಕ್ಷಕಿ ಪ್ರತಿಮಾ, ಕನ್ನಡಪ್ರಭದ ಚನ್ನಗಿರಿ ತಾಲೂಕು ವರದಿಗಾರ ಬಾ.ರಾ.ಮಹೇಶ್, ಪ್ರಸಾರರಂಗ ವಿಭಾಗದ ಶಿವರಾಜ್, ವಿದ್ಯಾರ್ಥಿಗಳು ಹಾಜರಿದ್ದರು.
(ಬಾಕ್ಸ್-1)* ವಿಜೇತರ ವಿವರ:
- - -
ಚನ್ನಗಿರಿಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್.ಗಣೇಶ್, ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಎಸ್.ಶಂಕರಪ್ಪ ಅವರು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.